ತೀರ್ಥಹಳ್ಳಿ : ತಾಲೂಕಿನ ಪ್ರತಿಷ್ಠಿತ ಗ್ರಾಮ ಪಂಚಾಯತಿಯಾದ ಮೇಲಿನಕುರುವಳ್ಳಿ ಗ್ರಾಮ ಪಂಚಾಯತಿಯು 42 ಲಕ್ಷ 22 ಸಾವಿರ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದು ಇದೀಗ ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಟ್ ಮಾಡಿದ್ದಾರೆ.
ಇನ್ನು ಪಟ್ಟಣ ಸಮೀಪದ ಮುಳಬಾಗಿಲು ಗ್ರಾಮ ಪಂಚಾಯತ್ 7 ಲಕ್ಷ 52 ಸಾವಿರ ರೂ ಬಿಲ್ ಬಾಕಿ ಉಳಿಸಿಕೊಂಡಿದೆ. ಬಿಲ್ ಕಟ್ಟದ ಕಾರಣ ಗ್ರಾಮ ಪಂಚಾಯಿತಿಯ ಕಾರ್ಯಾಲಯದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮೆಸ್ಕಾಂ ಇಲಾಖೆ ತನ್ನ ನಿಯಮ ಪಾಲನೆ ಮಾಡಿದೆ.
ತೀರ್ಥಹಳ್ಳಿ ತಾಲ್ಲೂಕಿನ 38 ಗ್ರಾಮ ಪಂಚಾಯಿತಿಗಳಲ್ಲಿ ಅತಿ ದೊಡ್ಡ ಗ್ರಾಮ ಪಂಚಾಯಿತಿ ಮೇಲಿನಕುರುವಳ್ಳಿ ಸಾಕಷ್ಟು ಮರಳು ,ಕಲ್ಲು ಆದಾಯ ಇದೆ. ಕಂದಾಯದಿಂದಲೂ ಉತ್ತಮ ಆದಾಯ ಇದೆ. ಆದರೂ 26 ಕುಡಿಯುವ ನೀರಿನ ಪಂಪ್ ಮತ್ತು ನೂರಾರು ಬೀದಿ ದೀಪಗಳ ಬಿಲ್ ಬಾಕಿ ಇದ್ದು ಇದೀಗ ಬಿಲ್ ಕಟ್ಟದ ಕಾರಣ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ.
ಪಟ್ಟಣಕ್ಕೆ ಸಮೀಪದ ಮತ್ತೊಂದು ಗ್ರಾಮ ಪಂಚಾಯತಿ ಮುಳುಬಾಗಿಲು ಗ್ರಾಮ ಪಂಚಾಯಿತಿ 7. ಲಕ್ಷ 52 ಸಾವಿರ ರೂ ಬಾಕಿ ಉಳಿಸಿಕೊಂಡಿದ್ದು, ಮೆಸ್ಕಾಂ ಇಲಾಖೆ ಅನೇಕ ಬಾರಿ ನೋಟಿಸ್ ನೀಡಿ ಹಣ ಕಟ್ಟುವಂತೆ ಸೂಚಿಸಿದರೂ ಕೂಡ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಮಾಡಿದ ಕಾರಣ ಗ್ರಾಮ ಪಂಚಾಯಿತಿಯ ಕಾರ್ಯಾಲಯದ ವಿದ್ಯುತ್ ಕಡಿತ ಮಾಡಲಾಗಿದೆ.
ಇದನ್ನೂ ಓದಿ : ಪವಾಡವೇ? : ಕಣ್ಣು ತೆರೆದು ಮುಚ್ಚಿದ ಅಯ್ಯಪ್ಪನ ವಿಗ್ರಹ!