Advertisement
ಎಲೆಕಡಕಲು ಗ್ರಾಮದಲ್ಲಿ ಹಲವು ವರ್ಷಗಳಿಂದ ಸುಮಾರು 80 ಮನೆಗಳಿಗೆ ನಿರಂತರ ಜ್ಯೋತಿ ಯೋಜನಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.ಭಾನುವಾರ ಗ್ರಾಮದಲ್ಲಿ ಹಾದು ಹೊಗಿದ್ದ 11 ಕೆ.ವಿ ವಿದ್ಯುತ್ ಲೈನ್ ತುಂಡಾಗಿ, ನಿರಂತರ ಜ್ಯೋತಿ ಯೋಜನೆಗೆ ಅಳವಡಿಸಿದ ಲೈನ್ ಮೇಲೆ ಬಿದ್ದ ಕಾರಣ ಹೈ ವೋಲ್ಟೇಜ್ ಪಾಸ್ ಆಗಿ ಗ್ರಾಮದ ಮನೆಗಳ ಮೀಟರ್, ಟಿ.ವಿ, ವಾರ್ಷಿಂಗ್ ಮಿಷನ್, ಫ್ರಿಜ್, ಬಲ್ಬ್, ಮನೆಯ ವಿದ್ಯುತ್ ವೈರಿಂಗ್ ಸುಟ್ಟು ಕರಕಲಾಗಿವೆ.
Related Articles
Advertisement
ಕತ್ತಲಲ್ಲಿ ಜನ : ವಿದ್ಯುತ್ ಅವಘಡದಿಂದ ಗ್ರಾಮದ ಹಲವು ಮನೆಗಳಲ್ಲಿ ವಿದ್ಯುತ್ ಮೀಟರ್ ಬೋರ್ಟ್ ಹಾಗೂ ವೈರಿಂಗ್ ಸುಟ್ಟು ಹೋದ ಕಾರಣ ಇಡೀ ರಾತ್ರಿ ಜನರು ಕತ್ತಲಲ್ಲಿ ಕಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸ್ಥಳಕ್ಕೆ ಅಧಿಕಾರಿಗಳ ದೌಡು : ಘಟನೆ ನಡೆದ ಎಲೆಕಡಕಲು ಗ್ರಾಮಕ್ಕೆ ಡಿವೈಎಸ್‌ಪಿ, ಲಕ್ಷ್ಮಿಕಾಂತ್, ಬೆಸ್ಮಾಂ ಎಇಇ ವೀರಭದ್ರಾಚಾರ್ ಭೇಟಿ ನೀಡಿ ಘಟನೆ ಸಂಬಂಧ ಕ್ರಮಕೈಗೊಂಡು ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದ್ದಾರೆ.
ಪರಿಹಾರಕ್ಕೆ ಒತ್ತಾಯ : ಗ್ರಾಮಕ್ಕೆ ಭೇಟಿ ನೀಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೆಚ್.ಡಿ.ರಾಜೇಶ್‌ಗೌಡ ಘಟನೆಯನ್ನು ಪರಿಶೀಲಿಸಿದರು. ಅಧಿಕಾರಿಗಳ ಎಡವಟ್ಟಿನಿಂದ್ದಾಗಿ ಇಂತಹ ದುರಂತಗಳು ಸಂಬವಿಸುತ್ತಿವೆ. ಗ್ರಾಮಸ್ಥರು ಎಚ್ಚರಗೊಳ್ಳದಿದ್ದರೇ ಭಾರಿ ಅನಾಹುತ ಆಗುತಿತ್ತು ಇದಕ್ಕೆ ಯಾರನ್ನೂ ಕಾರಣರಾಗಿ ಮಾಡಬೇಕೆಂದು ಕಿಡಿಕಾರಿದರು. ತಕ್ಷಣ ಬೆಸ್ಕಾಂ ಹಿರಿಯ ಅಧಿಕಾರಿಗಳು ಅನಾಹುತ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಆಗಿರುವ ನಷ್ಟವನ್ನು ಪರಿಶೀಲಿಸಿ ಅವರಿಗೆ ಸೂಕ್ತ ಪರಿಹಾರ ಕೋಡಬೇಕೆಂದು ಒತ್ತಾಯಿಸಿದರು.
11 ಕೆ.ವಿ ವಿದ್ಯುತ್ ಲೈನ್ ಕಟ್ಟಾಗಿ, ನಿರಂತಜ್ಯೋತಿ ಸರಬರಾಜಿನ ಲೈನ್ ಮೇಲೆ ಬಿದ್ದು ಹೈ ವೋಲ್ಟೇಜ್ ಪಾಸ್ ಆಗಿ ಕೆಲ ಮನೆಗಳಿಗೆ ತೊಂದರೆಯಾಗಿದೆ, ತಕ್ಷಣಕ್ಕೆ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು, ಹಾನಿ ಸಂಬಂಧ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿ ಪರಿಹಾರ ನೀಡುವ ಸಂಬಂಧ ಕ್ರಮಕೈಗೊಳ್ಳಲಾಗುವುದು-ಪುರುಷೋತ್ತಮ್
ಬೆಸ್ಕಾಂ