Advertisement

ಕುಂದಾಪುರ : ವಿದ್ಯುತ್ ಕಂಪನಿಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

06:12 PM Oct 05, 2020 | sudhir |

ಕುಂದಾಪುರ : ರಾಜ್ಯದಾದ್ಯಂತ ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ವಿರೋಧಿಸಿ ಕ.ವಿ.ಪ್ರ.ನಿ. ನೌಕರರ ಸಂಘ ಮತ್ತು ಸಂಘ ಸಂಸ್ಥೆಗಳ ಓಕ್ಕೂಟ ಬೆಂಗಳೂರು ಇದರ ಕರೆಯ ಮೇರೆಗೆ ಕುಂದಾಪುರ ಸ್ಥಳೀಯ ಸಮಿತಿ ಹಾಗೂ ಇತರ ಒಕ್ಕೂಟಗಳ ನೇತೃತ್ವದಲ್ಲಿ ಸಾಂಕೇತಿಕವಾಗಿ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ನೆರೆದಿದ್ದ ನೌಕರರೆಲ್ಲರೂ ಸಾಂಕೇತಿಕವಾಗಿ ಕಪ್ಪು ಪಟ್ಟಿಯನ್ನು ಧರಿಸಿ ಖಾಸಗೀಕರಣದ ವಿರುದ್ಧ ಘೋಷಣೆ ಕೂಗಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು .

Advertisement

ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಉಡುಪಿ ವೃತ್ತದ ನೌಕರ ಸಂಘದ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಬಾಬಣ್ಣ ಪೂಜಾರಿಯವರು ಮಾತನಾಡಿ ಕಂಪನಿಗಳ ಖಾಸಗೀಕರಣದಿಂದ ನೌಕರರಿಗೆ ಹಾಗೂ ಜನಸಾಮಾನ್ಯರಿಗೆ ಮುಖ್ಯವಾಗಿ ಕೃಷಿಕರಿಗೆ ಯಾವುದೇ ಲಾಭವಿಲ್ಲ ಬದಲಾಗಿ ಹೆಚ್ಚಿನ ಹೊರೆ ಅನುಭವಿಸಬೇಕಾಗುತ್ತದೆ ಎಂದರು.

ಇದನ್ನೂ ಓದಿ :ಗಡಿ ಸಮಸ್ಯೆಗಳ ಇತ್ಯರ್ಥಕ್ಕೆ ವಾಯುಪಡೆ ಸನ್ನದ್ಧವಾಗಿದೆ: ವಾಯುಪಡೆ ಮುಖ್ಯಸ್ಥ

ಈ ಸಂದರ್ಭದಲ್ಲಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಆದ ಶ್ರೀ ರಾಕೇಶ್ ಅವರು ಮಾತನಾಡಿ ಕಂಪನಿಯನ್ನು ಉಳಿಸಿಕೊಳ್ಳಬೇಕಾದರೆ ನೌಕರರ ಶ್ರಮ ಹಾಗೂ ಒಗ್ಗಟ್ಟು ಅತ್ಯಗತ್ಯ ಎಂದು ನುಡಿದರು .ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಸಮಿತಿಯ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಎಂ ರವರು ಮಾತನಾಡಿ ಖಾಸಗೀಕರಣದಿಂದ ಈವರೆಗೂ ಗ್ರಾಹಕರಿಗೆ ದೊರೆಯುತ್ತಿದ್ದ ಸಬ್ಸಿಡಿಗಳು ದೊರೆಯುವುದಿಲ್ಲ ಹಾಗೂ ಒನ್ ನೇಷನ್ ಒನ್ ಟ್ಯಾರಿಫ್ ನಡಿಯಲ್ಲಿ ಎಲ್ಲ ಗ್ರಾಹಕರಿಗೂ ವಿದ್ಯುತ್ ದರಗಳು ಹೆಚ್ಚಿಗೆ ಆಗುವುದರಲ್ಲಿ ಸಂದೇಹವಿಲ್ಲ ,ಕೃಷಿಗೆ ಸಿಗುತ್ತಿದ್ದ ವಿದ್ಯುತ್ ಸಬ್ಸಿಡಿಯೂ ಸಹ ದೊರೆಯುವುದಿಲ್ಲ ಇದರಿಂದ ಜನಸಾಮಾನ್ಯರಿಗೆ ಹೊರೆ ಯಾಗುವುದು ಖಂಡಿತ ಎಂದು ನುಡಿದರು .

Advertisement

ಇದನ್ನೂ ಓದಿ :ಹೆಪಟೈಟಿಸ್‌ ಸಿ ವೈರಸ್‌ ಪತ್ತೆ ಹಚ್ಚಿದವರಿಗೆ ಒಳಿಯಿತು ನೊಬೆಲ್‌ ಪುರಸ್ಕಾರ

ಇಂದು ವಿಭಾಗದ ಎಲ್ಲ ಶಾಖಾ ಕಚೇರಿಗಳಲ್ಲಿ ನೌಕರರು ಕಪ್ಪುಪಟ್ಟಿ ಧರಿಸಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು .

ಈ ಸಂದರ್ಭದಲ್ಲಿ ತಲ್ಲೂರು ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಶ್ರೀವಿನಾಯಕ ಕಾಮತ್ ಕುಂದಾಪುರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ಅಶೋಕ್ ಪೂಜಾರಿ ಶಂಕರನಾರಾಯಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ಯಶವಂತ ವಿಭಾಗದ ಲೆಕ್ಕಾಧಿಕಾರಿಗಳಾದ ಶ್ರೀ ಅಣ್ಣಯ್ಯ ಶೆಟ್ಟಿಗಾರ್ ಸ್ಥಳೀಯ ಸಮಿತಿ ಕಾರ್ಯದರ್ಶಿ ಅಭಿಲಾಷ್ ಬಿ ಎ ವಿಭಾಗದ ಇನ್ನಿತರ ಅಧಿಕಾರಿ ವರ್ಗದವರು ಶಾಖಾಧಿಕಾರಿಗಳು ನೌಕರರು ಉಪಸ್ಥಿತರಿದ್ದರು .

Advertisement

Udayavani is now on Telegram. Click here to join our channel and stay updated with the latest news.

Next