Advertisement
ಶೇ. 5 ಇ-ವಾಹನ2024ರ ಸುಮಾರಿಗೆ ದೇಶದಲ್ಲಿ ಮಾರಾಟವಾಗುವ ಒಟ್ಟು ವಾಹನಗಳ ಪೈಕಿ ಶೇ. 5ರಷ್ಟು ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿರಲಿವೆ.
ಶೇ. 0.6ರಷ್ಟು ದ್ವಿಚಕ್ರ ವಾಹನಗಳು ಬಳಕೆಯಾಗುತ್ತಿದ್ದು, 2024ರ ಅವಧಿಗೆ ಇದರ ಪ್ರಮಾಣದಲ್ಲಿ ಶೇ. 12ರಿಂದ 17ರಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇ-ಬಸ್‌ಗಳ ಪ್ರಮಾಣದಲ್ಲೂ ಹೆಚ್ಚಳ
ಪ್ರಸ್ತುತ ಶೇ. 0.5ರಷ್ಟು ಮಾತ್ರ ಇ-ಬಸ್‌ಗಳು ಕಾರ್ಯಾಚರಿಸು ತ್ತಿದ್ದು, 2024ರ ವೇಳೆಗೆ ಶೇ. 2-4ರಷ್ಟು ಹೆಚ್ಚಾಗಲಿವೆ.
Related Articles
ದೇಶದ 5 ಅತ್ಯುತ್ತಮ ದ್ವಿ ಚಕ್ರ ವಾಹನ ಉತ್ಪಾದಕರು ಇ-ವಾಹನ ಗಳ ಸಾಮರ್ಥ್ಯವನ್ನು ನಾಲ್ಕು ಲಕ್ಷ ಯೂನಿಟ್‌ಗಳನ್ನು ಹೆಚ್ಚಿಸುವ ಯೋಜನೆ ಹಾಕಿಕೊಂಡಿದ್ದು, 2024ಕ್ಕೆ 30 ಲಕ್ಷ ಯೂನಿಟ್‌ಗಳನ್ನು ಹೊಂದುವ ಗುರಿಯನ್ನು ಹಾಕಿಕೊಂಡಿದೆ. ಇನ್ನೂ ಇ ವಾಹನಗಳಿಗಿಂತ ಐಸಿಇ ಮೋಟಾರ್ ಬೈಕ್‌ಗಳು ಕಡಿಮೆ ದರಕ್ಕೆ ಇರಲಿವೆ.
Advertisement
ಆಟೋಗಳ ಕಥೆ ಏನು ?ಈಗ ಕೇವಲ ಶೇ. 0.01ರಷ್ಟು ಎಲೆಕ್ಟ್ರಿಕ್ ಆಟೋಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 2024ರ ವೇಳೆಗೆ ಶೇ. 43-48ರಷ್ಟು ಅಧಿಕವಾಗಲಿದೆ. 4 ಚಕ್ರ
ಸದ್ಯ ಶೇ.0.1ರಷ್ಟು ಎಲೆಕ್ಟ್ರಿಕ್ ಆವೃ ತ್ತಿಯ 4 ಚಕ್ರ ವಾಹನಗಳು ಮಾರಾಟ ವಾಗುತ್ತಿದ್ದು, 2024ರ ವೇಳೆಗೆ ಇವುಗಳ ಪ್ರಮಾಣದಲ್ಲಿ ಶೇ. 3ರಿಂದ 4ರಷ್ಟು ಏರಿಕೆ ಕಾಣುವ ಸಾಧ್ಯತೆ. ಇ-ರಿಕ್ಷಾಗಳದೇ ಅಗ್ರ ಪಾಲು
ಕ್ರಿಸೆಲ್ ಸಂಶೋಧನೆ ಮಾಹಿತಿಯ ಪ್ರಕಾರ ಸದ್ಯ ದೇಶದೆ ಲ್ಲೆಡೆ 4.5 ಲಕ್ಷ ಇ-ರಿಕ್ಷಾಗಳಿದ್ದು, 4 ವರ್ಷಗಳ ಅನಂತರ ಇದರ ಪಾಲು 8.8 ಲಕ್ಷಕ್ಕೆ ಏರಲಿದೆ. ಸಿಎನ್‌ಜಿ ಆಟೋಗಳಿಗೆ ಹೋಲಿ ಸಿದ್ದರೆ ಇ-ಆಟೋಗಳು ಕಡಿಮೆ ದರಕ್ಕೆ ಲಭ್ಯವಾಗ ಲಿದ್ದು, ಇವುಗಳ ನಿರ್ವಹಣೆ ವೆಚ್ಚ ಕಡಿಮೆ ಮೊತ್ತದಲ್ಲಿ ಆಗಲಿದೆ.