ದಾವಣಗೆರೆ: ಬಟ್ಟೆ ಒಣಗಿಸುವ ತಂತಿಗೆ ವಿದ್ಯುತ್ ತಗುಲಿ ಶಾರ್ಟ್ ವಿದ್ಯುತ್ ಪ್ರವಹಿಸಿ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಾವಣಗೆರೆ ತಾಲ್ಲೂಕಿನ ಬಾವಿಹಾಳು ಗ್ರಾಮದಲ್ಲಿ ನಡೆದಿದೆ.
ಬಿ.ಆರ್.ರವಿಶಂಕರ್ (35 ವ) ಮತ್ತು ನಾಗವೇಣಿ (32 ವ) ಮೃತ ದಂಪತಿ.
ನಾಗವೇಣಿ ಅವರು ಮನೆ ಪಕ್ಕದಲ್ಲಿ ವಿದ್ಯುತ್ ಕಂಬಕ್ಕೆ ಕಟ್ಟಿದ್ದ ತಂತಿಗೆ ಬಟ್ಟೆ ಒಣ ಹಾಕುತಿದ್ದರು. ಈ ವೇಳೆ ವಿದ್ಯುತ್ ತಗುಲಿದಾಗ ಕೂಗಿಕೊಂಡಿದ್ದಾರೆ. ಓಡಿ ಬಂದ ರವಿಶಂಕರ್ ಪತ್ನಿ ನಾಗವೇಣಿಯನ್ನು ಎಳೆದುಕೊಳ್ಳಲು ಮುಂದಾಗಿದ್ದಂತೆ ಅವರಿಗೂ ವಿದ್ಯುತ್ ಪ್ರವಹಿಸಿದೆ. ನೋಡ ನೋಡತ್ತಿದ್ದಂತೆ ದಂಪತಿ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ರಾಕೇಶ್ ಜುಂಜುನ್ ವಾಲಾ: ಸಿಎ ಆಗಬೇಕೆಂದಿದ್ದ ಹುಡುಗ ದಲಾಲ್ ಸ್ಟ್ರೀಟ್ ಅಧಿಪತಿಯಾಗಿದ್ದು ಹೇಗೆ?
ರವಿಶಂಕರ್ ವ್ಯವಸಾಯ ಮಾಡುತ್ತಿದ್ದರು. ಒಂದು ಗಂಡು ಮತ್ತು ಹೆಣ್ಣು ಮಗು ಮತ್ತು ಅಪಾರ ಬಂಧು ಬಳಗ ಅಗಲಿದ್ದಾರೆ.
ಸ್ಥಳಕ್ಕೆ ಮಾಯಕೊಂಡ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.