Advertisement

ವಿದ್ಯುತ್‌ ಸ್ಪರ್ಶ: ತಾಯಿ-ಮಗು ಸಾವು

01:02 PM Feb 28, 2023 | Team Udayavani |

ಹೊಸಕೋಟೆ: ನೀರು ಕಾಯಿಸಲು ಇಟ್ಟಿದ್ದ ಹಿಟರ್‌ ಕಾಯಿಲ್‌ ಅನ್ನು 4 ವರ್ಷದ ಮಗು ಮುಟ್ಟಿದ್ದು, ಮಗುವನ್ನು ರಕ್ಷಿಸಲು ಹೋದ ತಾಯಿಯೂ ಸಹ ವಿದ್ಯುತ್‌ ಶಾಕ್‌ ಹೊಡೆದು ತಾಯಿ-ಮಗು ಸಾವನ್ನಪ್ಪಿರುವ ಧಾರುಣ ಘಟನೆ ಹೊಸಕೋಟೆಯ ಕನಕನಗರದಲ್ಲಿ ನಡೆದಿದೆ.

Advertisement

ತಾಯಿ ಜ್ಯೋತಿ(26), ಮಗು ಜಯಾನಂದ(4) ಮೃತ ದುರ್ಧೈವಿಗಳು. ಮೃತರು ರಾಯಚೂರು ಮೂಲದವರಾಗಿದ್ದು, ನಗರಕ್ಕೆ ಬಂದು ಹೊಟ್ಟೆಪಾಡಿಗಾಗಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.

ಶೌಚಾಲಯದಲ್ಲಿ ನೀರು ಕಾಯಿಸಲು ಇಟ್ಟಿದ್ದಾಗ ಮಗು ಕಾಯಿಲ್‌ ಅನ್ನು ಮುಟ್ಟಿದೆ. ಇದನ್ನು ನೋಡಿದ ತಾಯಿಯೂ ಮಗುವನ್ನು ರಕ್ಷಣೆ ಮಾಡಲು ಹೋದಾಗ ತಾಯಿಗೂ ಸಹ ವಿದ್ಯುತ್‌ ತಗುಲಿ ತಾಯಿಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next