Advertisement

ಚಿಂಚೋಳಿ: ವಿದ್ಯುತ್ ತಂತಿ ದುರಸ್ತಿ ವೇಳೆ ಹರಿದ ವಿದ್ಯುತ್ ; ಇಬ್ಬರು ಲೈನ್ ಮೆನ್ ಗಂಭೀರ

11:52 AM Apr 16, 2022 | Team Udayavani |

ಚಿಂಚೋಳಿ (ಕಲಬುರಗಿ): ಲೈನ್ ಮೆನ್ ಗಳಿಬ್ಬರು ವಿದ್ಯುತ್ ತಂತಿ ದುರಸ್ತಿ ಕಾರ್ಯದಲ್ಲಿದ್ದಾಗ ವಿದ್ಯುತ್ ಸ್ಪರ್ಶದಿಂದ ಗಂಭೀರ ಗಾಯಗೊಂಡಿರುವ ತಾಲ್ಲೂಕಿನ ಐನೋಳ್ಳಿ  ಗ್ರಾಮದಲ್ಲಿ ಘಟನೆ ಇಂದು (ಶನಿವಾರ)  ನಡೆದಿದೆ.

Advertisement

ಐನೋಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ವಿದ್ಯುತ್ ತಂತಿ ಸರಿಪಡಿಸುವ ವೇಳೆ ಒಮ್ಮೆಲೆ ವಿದ್ಯುತ್ ಶಾಕ್ ನಿಂದ ಲೈನ್ ಮೆನ್ ಗಳಾದ ಸದ್ದಾಂ, ಹೆಲ್ಪರ್ ಹಾರುನ್ ಖಾನ್ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಇಬ್ಬರನ್ನು ಚಿಂಚೋಳಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಲೈನ್ ಮೆನ್ ಗಂಭೀರ ಗಾಯಗೊಂಡಿರುವ ಘಟನೆ ಖಂಡಿಸಿ ಐನೋಳ್ಳಿ ಗ್ರಾಮಸ್ಥರು,  ಚಂದಾಪುರ ರಸ್ತೆ ಸಂಪೂರ್ಣ ಬಂದ್ ಮಾಡಿ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next