* ಒಮ್ಮೆ ಚಾರ್ಜ್ ಮಾಡಿದರೆ 120 ಕಿ.ಮೀ. ಪ್ರಯಾಣ * ಮಾಹೆ ವಿ.ವಿ. ಸೋಲಾರ್ ಗ್ರಿಡ್‌ನಿಂದ ಚಾರ್ಜ್
* ಮಣಿಪಾಲದಿಂದ ಬಜಪೆ ಪ್ರಯಾಣಕ್ಕೆ ಬಳಕೆ
Advertisement
ಉಡುಪಿ: ಮಹಾತ್ಮಾ ಗಾಂಧಿ ಅವರ ಜನ್ಮದಿನ ಪ್ರಯುಕ್ತ ಮಾಹೆ ವಿಶ್ವವಿದ್ಯಾನಿಲಯವು ಮಹೀಂದ್ರ ಸಂಸ್ಥೆಯ ಸಹಭಾಗಿತ್ವದಲ್ಲಿ ಮಾಲಿನ್ಯ ಮುಕ್ತವಾದ 5 ವಿದ್ಯುತ್ ಚಾಲಿತ ಪ್ರಯಾಣಿಕ ವಾಹನಗಳನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ರಸ್ತೆಗಿಳಿಸಿದೆ. ನೀರಿನ ಪುನರ್ಬಳಕೆ, ಹಸುರು ಹೊದಿಕೆ ಅಭಿವೃದ್ಧಿ, ಸೌರ ವಿದ್ಯುತ್ ಉತ್ಪಾದನೆಯಂತಹ ಪರಿಸರಸಹ್ಯ ಕೊಡುಗೆಗಳತ್ತ ಮುನ್ನುಗುತ್ತಿರುವ ಮಾಹೆ ವಿ.ವಿ.ಯ ಇನ್ನೊಂದು ಹಸುರು ಹೆಜ್ಜೆ ಇದು.ಈ ವಾಹನಗಳಿಗೆ ವಿ.ವಿ.ಯ ಸೌರ ವಿದ್ಯುತ್ ಗ್ರಿಡ್‌ನಿಂದ ಚಾರ್ಜಿಂಗ್ ಮಾಡಲಾಗುತ್ತದೆ. ವಾಹನಗಳು ಹವಾ ನಿಯಂತ್ರಿತವಾಗಿದ್ದು, ಉತ್ತಮ ಪ್ರಯಾಣದ ಅನುಭವ ನೀಡಲಿವೆ. ಮುಖ್ಯವಾಗಿ ಸುರಕ್ಷೆ ಇರುವುದರಿಂದ ಹೆಚ್ಚು ಸಂತಸದಾಯಕವಾಗಲಿದೆ. ಜಿಪಿಎಸ್ ಅಳವಡಿಸಲಾಗಿದೆ ಮತ್ತು ಸೆಂಟ್ರಲ್ ಕಮಾಂಡ್ ಫ್ಲೀಟ್ ಮ್ಯಾನೇಜ್ ಮೆಂಟ್ ಸಿಸ್ಟಮ್‌ಗೆ ಜೋಡಿಸಲಾಗಿದೆ.
ಈ ಪ್ರದೇಶದಲ್ಲಿ ನಾವೇ ಮೊದಲಿಗರಾಗಿ ಇಂತಹಪರಿಸರ ಸಹ್ಯ ವಾಹನಗಳನ್ನು ಅನುಷ್ಠಾನಿಸುತ್ತಿದ್ದೇವೆ ಎಂದು ಡಾ| ಎಚ್.ಎಸ್. ಬಲ್ಲಾಳ್ ತಿಳಿಸಿದರು. ಇದರಿಂದ ಪರಿಸರಕ್ಕೆ ಆಗುವ ಅನು ಕೂಲ ವೆಂದರೆ ವಾರ್ಷಿಕ 50 ಮೆಟ್ರಿಕ್ ಟನ್ ಕಾರ್ಬನ್ ಡೈಯಾಕ್ಸೆ „ಡ್ ಉತ್ಪಾದನೆ ಕಡಿತಗೊಳ್ಳಲಿದೆ. ಇಷ್ಟು ಕಾರ್ಬನ್ ಡೈಯಾಕ್ಸೆ„ಡ್‌ನ್ನು ಹೀರಿಕೊಳ್ಳಲು ಇನ್ನೂ 5,000 ಮರಗಳು ಬೇಕು. ಸ್ಥಳೀಯರ ಆರೋಗ್ಯಕ್ಕೆ ಹಾನಿಯಾಗುವ ಹೈಡ್ರೋ ಕಾರ್ಬನ್, ಕಾರ್ಬನ್ ಮೊನೊಕ್ಸೆ„ಡ್, ನೈಟ್ರೋಜನ್ ಆಕ್ಸೆ„ಡ್‌ನ್ನು ಕಡಿತಗೊಳಿ ಸಲಿದೆ ಎಂದು ಪರಿಸರ ವಿಭಾಗದ ಸಹಾಯಕ ನಿರ್ದೇಶಕ ಡೆರಿಕ್ ಜೋಶುವ ಅವರು ಹೇಳಿದರು.
Related Articles
ವಾತಾವರಣವನ್ನು ಸಂರಕ್ಷಿಸಲೋಸುಗ ವಿ.ವಿ. ಈ ಉಪಕ್ರಮಕ್ಕೆ ಮುಂದಾಗಿದೆ. ಮಹೀಂದ್ರ ಕಂಪೆನಿ ಜತೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಮಣಿಪಾಲದಿಂದ ನಿತ್ಯ ವಿಮಾನ ನಿಲ್ದಾಣಕ್ಕೆ ಹೋಗಿ ಬರುವವರಿಗೆ ಇದನ್ನು ಬಳಸುತ್ತೇವೆ. ಐದು ವಾಹನಗಳು ಮಣಿಪಾಲದಿಂದ ಬಜಪೆ ವಿಮಾನ ನಿಲ್ದಾಣಕ್ಕೆ, ಅಲ್ಲಿಂದ ಮಣಿಪಾಲಕ್ಕೆ ಓಡಾಡಲಿವೆ. ಮಣಿಪಾಲದಲ್ಲಿ ಚಾರ್ಜಿಂಗ್ ಕೇಂದ್ರವಿರುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ 120 ಕಿ.ಮೀ. ಕ್ರಮಿಸಬಹುದು. ಬಜಪೆ ವಿಮಾನ ನಿಲ್ದಾಣದಲ್ಲಿ ಒಂದು ಚಾರ್ಜಿಂಗ್ ಕೇಂದ್ರಕ್ಕಾಗಿ ಮನವಿ ಮಾಡಿದ್ದೇವೆ. ಒಂದು ವಾಹನದಲ್ಲಿ ಚಾಲಕ ಸಹಿತ ಐವರು ಪ್ರಯಾಣಿಸಬಹುದು.
ಡಾ| ಎಚ್.ಎಸ್. ಬಲ್ಲಾಳ್, ಸಹಕುಲಾಧಿಪತಿ, ಮಾಹೆ ವಿ.ವಿ.
Advertisement