Advertisement

ವಿದ್ಯುತ್‌ ಚಾಲಿತ ವಾಹನ: ರೀಚಾರ್ಜ್‌ ಕೇಂದ್ರಗಳ ಸ್ಥಾಪನೆ: ಸುನಿಲ್‌

12:01 AM Mar 08, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್‌ ಚಾಲಿತ ವಾಹನಗಳಿಗೆ ಉತ್ತೇ ಜನ ನೀಡಲು ರಾಜ್ಯಾದ್ಯಂತ ಒಂದು ಸಾವಿರ ರೀಚಾರ್ಜ್‌ ಕೇಂದ್ರಗಳನ್ನು ಸ್ಥಾಪಿ ಸಲು ಸರಕಾರ ಮುಂದಾಗಿದ್ದು, ಈ ಪೈಕಿ 646 ಕಡೆ ಜಾಗಗಳನ್ನು ಗುರುತಿಸಿ ಅಳವಡಿಕೆ ಕಾರ್ಯ ನಡೆದಿದೆ ಎಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದರು.

Advertisement

ಸೋಮವಾರ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಮುನಿರಾಜು ಗೌಡ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ರೀಚಾರ್ಜ್‌ ಸ್ಟೇಷನ್‌ಗಳಿಗೆ ಗುರುತಿಸಿ ರುವ 646 ಜಾಗಗಳು ಮುಖ್ಯವಾಗಿ ಎಲ್ಲ ಜಿಲ್ಲಾ ಕೇಂದ್ರ ಗಳು, ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಮತ್ತು ಪ್ರವಾಸಿ ತಾಣಗಳಲ್ಲಿ ಬರುತ್ತವೆ. ಇದರಲ್ಲಿ ಬೆಂಗಳೂರಿನಲ್ಲೇ 130 ಇದ್ದು, ಈಗಾಗಲೇ ಅಳವಡಿಕೆ ಕಾರ್ಯ ಪೂರ್ಣಗೊಂಡು ಸೇವೆಗೆ ಲಭ್ಯವಾಗಿವೆ ಎಂದರು.

ವಿದ್ಯುತ್‌ ಚಾಲಿತ ವಾಹನಗಳ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಬೆಲೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅದನ್ನು ಖರೀದಿಸುವ ವರ ಸಂಖ್ಯೆ ಕಡಿಮೆಯಾಗುತ್ತಿದೆ. ಕಂಪೆನಿಗಳು ದರ ಕಡಿಮೆ ಮಾಡಿದರೆ, ಹೆಚ್ಚು ಜನರು ವಿದ್ಯುತ್‌ ಚಾಲಿತ ವಾಹನಗಳನ್ನು ಖರೀದಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದ ಅವರು, ಇತ್ತೀಚೆಗೆ ವಿದ್ಯುತ್‌ ಚಾಲಿತ ವಾಹನಗಳ ಬಳಕೆ, ಸವಾಲುಗಳ ಕುರಿತು ಕಂಪೆನಿಗಳ ಜತೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ಇದೇ ವಿಷಯವನ್ನು ಅಲ್ಲಿಯೂ ತಿಳಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next