Advertisement
ರಾ.ಹೆ. ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಮಾಣಿ – ಬುಡೋಳಿ- ಗಡಿಯಾರ ಪ್ರದೇಶಗಳಲ್ಲಿ ರಸ್ತೆ ಬದಿಯ ಗುಡ್ಡಗಳನ್ನು ಅಗೆಯಲಾಗಿತ್ತು. ಆಗ ಕೆಲವು ವಿದ್ಯುತ್ ಕಂಬಗಳನ್ನು ಸ್ಥಳಾಂತರಿ ಸಲಾಗಿತ್ತು. ಹೊಸದಾಗಿ ಹಾಕಲಾದ ವಿದ್ಯುತ್ ಕಂಬಗಳನ್ನು ಗುಡ್ಡದ ಮೇಲ್ಭಾಗದಲ್ಲಿ ಹಾಕಲಾಗಿತ್ತು. ಕಳೆದ ಕೆಲವು ದಿನಗಳಿಂದ ಮಳೆ ಹೆಚ್ಚುತ್ತಿರುವುದರಿಂದ ಗುಡ್ಡ ಕುಸಿಯುತ್ತಿದೆ. ವಿದ್ಯುತ್ ಕಂಬಗಳು ಬೀಳುವ ಭೀತಿಯಿದೆ. ಸಂಬಂಧಪಟ್ಟವರು ತತ್‌ಕ್ಷಣ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹೆದ್ದಾರಿ ಕಾಮಗಾರಿಯ ಗುತ್ತಿಗೆ ಪಡೆದಿರುವ ಎಲ್.ಎನ್.ಟಿ. ಕಂಪೆನಿಯವರು ಕಂಬಗಳ ಸ್ಥಳಾಂತರ ಜವಾಬ್ದಾರಿ ಹೊಂದಿದೆ. ಪ್ರಸ್ತುತ ಮೆಸ್ಕಾಂ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತಿಲ್ಲ ಎಂದು ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.