ಕುಷ್ಟಗಿ: ಕುಷ್ಟಗಿ ಪಟ್ಟಣದ ಮುಖ್ಯ ರಸ್ತೆಯ ವಿಭಜಕದಲ್ಲಿರುವ ವಿದ್ಯುತ್ ಕಂಬ ವಾಲಿದ್ದು ಅಪಾಯವನ್ನು ಅಹ್ವಾನಿಸುವಂತಿದೆ.
ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಿಂದ ಬಸವೇಶ್ವರ ವೃತ್ತದವರೆಗೂ ರಸ್ತೆಯ ವಿಭಜಕದಲ್ಲಿ ಎರಡು ದಶಕದ ಹಿಂದೆ ವಿದ್ಯುದ್ದೀಪ ಕಂಬಗಳನ್ನು ಅಳವಡಿಸಿದೆ. ಸದ್ಯ ವಿದ್ಯುದ್ದೀಪದ ಕಂಬಗಳು ತೀರ ಹಳೆಯದಾಗಿದ್ದು ತುಕ್ಕು ಹಿಡಿದಿವೆ. ಅಲ್ಲದೆ ಈ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ಸಂಪರ್ಕ ಕೂಡ ಇಲ್ಲ. ಹೀಗಾಗಿ ಕುಷ್ಟಗಿ ಪಟ್ಟಣದ ತೋರಿಕೆಯ ಕಂಬಗಳಾಗಿವೆ.
ವಾಹನಗಳು ಡಿಕ್ಕಿ ಹೊಡೆದು ಕೆಲವು ಕಂಬಗಳು ಉರುಳಿ ಬಿದ್ದಿದ್ದು ಇನ್ನು ಕೆಲವು ಕಂಬಗಳು ವಾಲಿಕೊಂಡ ಸ್ಥಿತಿಯಲ್ಲಿದ್ದು ಅಪಾಯ ಆಹ್ವಾನಿಸುವಂತಿದ್ದು ಪುರಸಭೆ ಎಚ್ಚೆತ್ತು ಈ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವುದು ಸೂಕ್ತವಾಗಿದೆ.
ಇದನ್ನೂ ಓದಿ: ಕೆಎಚ್‌ಬಿ ಕಾಲೋನಿಯನ್ನು ಮಿನಿ ಸಿಟಿ ಮಾದರಿಯಲ್ಲಿ ಅಭಿವೃದ್ಧಿ: ಶಾಸಕಿ ರೂಪಾಲಿ ನಾಯ್ಕ