Advertisement
ಉಡುಪಿ-ಕಾರ್ಕಳ ತಾಲೂಕುಗಳನ್ನೊಳಗೊಂಡ ಉಡುಪಿ ಉಪ ವಿಭಾಗ ವ್ಯಾಪ್ತಿಯೊಂದರಲ್ಲೇ 150ಕ್ಕೂ ಅಧಿಕ ಕಂಬಗಳು ನೆಲಕ್ಕುರುಳಿವೆ. ಕುಂದಾಪುರ ಉವಿಭಾಗದಲ್ಲಿ 35 ಕಂಬಗಳು ಹಾನಿಗೀಡಾಗಿವೆ.
ಮಣಿಪಾಲ, ಪರ್ಕಳ, ಪೆರ್ಡೂರು ಮತ್ತು ಅಂಬಲಪಾಡಿ ಪ್ರದೇಶದಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಬುಧವಾರ ರಾತ್ರಿ ಮಣಿಪಾಲ ಎಂಐಟಿ ಸಮೀಪ ಸಾಲು ಸಾಲಾಗಿ 7 ಕಂಬಗಳು ನೆಲಕ್ಕುರುಳಿವೆ. ಮಣಿಪಾಲ ಹೆದ್ದಾರಿ ಬದಿ 3 ಕಂಬಗಳು; ಪೆರ್ಡೂರು, ಹಿರಿಯಡಕ, ಕುದಿ ಪ್ರದೇಶದಲ್ಲಿ ಕಂಬಗಳು ನೆಲಕ್ಕುರುಳಿ ವಿದ್ಯುತ್ ವ್ಯತ್ಯಯ ಉಂಟಾಯಿತು. ಅಲೆವೂರು, ಮಾರ್ಪಳ್ಳಿ, ಮಣಿಪುರ, ಅರ್ಬಿ, ಸರಳೇಬೆಟ್ಟು, ಪರ್ಕಳದಲ್ಲಿಯೂ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಉಡುಪಿ ನಗರ ವ್ಯಾಪ್ತಿಯಲ್ಲಿ 2 ಕಂಬಗಳು ಹಾನಿಗೊಂಡಿವೆ. ಕುಂದಾಪುರ ಭಾಗದಲ್ಲಿ 1 ವಿದ್ಯುತ್ ಪರಿವರ್ತಕ ಧರಾಶಾಯಿಯಾಗಿದ್ದು, 6 ಪರಿವರ್ತಕಗಳಿಗೆ ಹಾನಿಯಾಗಿದೆ. ಪರ್ಕಳದಲ್ಲಿ ವಿದ್ಯುತ್ ಪರಿವರ್ತಕಕ್ಕೆ ಹಾನಿಯಾಗಿದ್ದು, ಮನೆಗಳ ವಿದ್ಯುತ್ ಉಪಕರಣಗಳು, ವಯರಿಂಗ್ ಸುಟ್ಟು ಹೋಗಿವೆ. ಪೆರ್ಡೂರು ಪೇಟೆಯಲ್ಲಿ ಗುರುವಾರ ಅಪರಾಹ್ನ ಮರ ಬಿದ್ದು 3 ಮನೆಗಳಿಗೆ ಹಾನಿಯಾಗಿದೆ. ಮಣಿಪಾಲ ಕೈಗಾರಿಕಾ ವಲಯದಲ್ಲಿ ಸಿಡಿಲಿನಿಂದ ವಿದ್ಯುತ್ ಪರಿವರ್ತಕ ಸ್ಫೋಟಗೊಂಡಿದೆ.