Advertisement

ಸಾವಿಗೆ ಆಹ್ವಾನ ನೀಡುವಂತಿರುವ ವಿದ್ಯುತ್‌ ಕಂಬಗಳು

09:32 PM May 13, 2019 | Lakshmi GovindaRaj |

ಕೊಳ್ಳೇಗಾಲ: ನಗರದ ಪಾಪನಕೆರೆ ಸಮೀಪದಲ್ಲಿರುವ ರೈತರ ಜಮೀನುಗಳ ಮೇಲೆ ವಿದ್ಯುತ್‌ ಕಂಬ ಅಳವಡಿಸಿದ್ದು, ಕಂಬ ಮುರಿದು ತಂತಿ ಸಮೇತ ಜಮೀನಿಗೆ ಬಿದ್ದು ವಿದ್ಯುತ್‌ ಹರಿದು ರೈತನ್ನು ಸಾವಿಗೆ ಆಹ್ವಾನಿಸುವಂತಿದೆ. ಕೂಡಲೇ ಸೆಸ್ಕ್ ನಿಗಮದ ಅಧಿಕಾರಿಗಳು ವಿದ್ಯುತ್‌ ಕಂಬಗಳನ್ನು ಸರಿಪಡಿಸಿ ಸಾವಿಗೆ ಆಹ್ವಾನ ನೀಡುವಂತಿರುವ ಕಂಬವನ್ನು ಬದಲಾಯಿಸಿ ರೈತರ ಜೀವ ಕಾಪಾಡಬೇಕಾಗಿದೆ.

Advertisement

ಪಾಪನಕೆರೆಯ ಮೂಡಲ ಕೋಡಿ ಅರಿಗಿನಲ್ಲಿ ಸೆಸ್ಕ್ ನಿಗಮದವರು ಅಳವಡಿಸಿರುವ ವಿದ್ಯುತ್‌ ಕಂಬ ತುದಿಯ ಭಾಗ ಮುರಿದು ಹೋಗಿದ್ದು, ಯಾವುದೇ ಕ್ಷಣದಲ್ಲಿ ತಂತಿಯೊಂದಿಗೆ ನೆಲಕ್ಕೆ ಉರುಳುವಂತೆ ಇದ್ದು, ಆಕಸ್ಮಿಕವಾಗಿ ರೈತರು ಬೆಳಂಬೆಳಗ್ಗೆ ಜಮೀನು ವೀಕ್ಷಣೆಗೆಂದು ಬಂದ ವೇಳೆಯಲ್ಲಿ ಆಕಸ್ಮಿಕವಾಗಿ ತಂತಿ ಸ್ಪರ್ಶಿಸಿದಾಗ ರೈತರು ಸಾವಿಗೀಡಾಗುವಂತೆ ಇದ್ದು, ಕೂಡಲೇ ರೈತರ ಪ್ರಾಣ ಉಳಿಸುವ ಕೆಲಸ ಆಗಬೇಕು.

ಮುನ್ಸೂಚನೆಯಿಂದ ಅಧಿಕಾರಿಗಳು ಕಾರ್ಯ ನಿರ್ವಹಿಸಿ: ಇತ್ತೀಚಿಗೆ ರೈತರು ವಿವಿಧ ಬೆಳೆಗಳನ್ನು ಬೆಳೆಯುವ ಸಲುವಾಗಿ ಬ್ಯಾಂಕ್‌ಗಳಲ್ಲಿ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಫ‌ಸಲಿನಿಂದ ಯಾವುದೇ ತರಹದ ಲಾಭ ಸಿಗದೆ ನಷ್ಟಕ್ಕೆ ಒಳಗಾಗಿ ಪಡೆದ ಸಾಲ ತೀರಿಸಲಾಗದೆ ವಿಷ ಸೇವನೆ ಮತ್ತು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗುತ್ತಿರುವ ಬೆನ್ನಲ್ಲೇ ಸೆಸ್ಕ್ ಇಲಾಖೆಯಿಂದ ಮುರಿದು ಬೀಳುವ ವಿದ್ಯುತ್‌ ಕಂಬದ ತಂತಿಯಿಂದ ರೈತರು ಅಪಾರ ಸಾವು- ನೋವಿಗೆ ಒಳಗಾಗುವ ಮುನ್ಸೂಚನೆ ಕಂಬ ತುದಿ ಮುರಿದಿರುವುದೇ ಸಾಕ್ಷಿಯಾಗಿದೆ.

ವಿದ್ಯುತ್‌ ಕಂಬ ಮುರಿದರೆ ಅಪಾಯ: ಮೂಡಲಕೋಡಿ ಬಳಿ ಇರುವ ಸಾವಿರಾರು ಎಕರೆ ಜಮೀನುಗಳಲ್ಲಿ ವಿವಿಧ ಫ‌ಸಲುಗಳನ್ನು ಹಾಕಲಾಗಿದೆ. ಬೇಸಿಗೆಯಲ್ಲಿ ಸರಿಯಾದ ಮಳೆಯಾಗದೆ ರೈತರು ತಮ್ಮ ಜಮೀನುಗಳಲ್ಲಿರುವ ಪಂಪ್‌ಸೆಟ್‌ಗಳ ಮೂಲಕ ನೀರು ಹರಸಿಕೊಂಡು ಬೆಳೆಗಳನ್ನು ಬೆಳೆಯಲು ಮುಂದಾಗಿರುವ ಸಂದರ್ಭದಲ್ಲಿ ವಿದ್ಯುತ್‌ ಕಂಬ ಮುರಿದು ಬಿದ್ದು, ಅನಾಹುತ ಸಂಭವಿಸಿದರೆ ಸೆಸ್ಕ್ ಇಲಾಖೆಯ ಅಧಿಕಾರಿಗಳೇ ನೇರ ಹೊಣೆಗಾರರು ಆಗಬೇಕಾಗುತ್ತದೆ ಎಂದು ರೈತರ ಒತ್ತಾಯವಾಗಿದೆ.

ರೈತರ ಒತ್ತಾಯ: ಮೂಡಲಕೋಡಿ ಬಳಿ ಅಳವಡಿಸಿರುವ ವಿದ್ಯುತ್‌ ಕಂಬದ ತುದಿ ಮುರಿದು ತಂತಿ ಸಮೇತ ಜಮೀನಿಗೆ ಉರುಳುವಂತೆ ಆಗಿದೆ. ಅದೇ ಕಂಬದ ಪಕ್ಕದಲ್ಲೊಂದು ಕಂಬವು ಮತ್ತೂಂದು ದಿಕ್ಕಿಗೆ ಬಾಗಿದ್ದು, ಜಮೀನುಗಳಿಗೆ ರೈತರು ಕಾಲಿಡಲು ಭಯವಾಗುತ್ತಿದೆ. ಕೂಡಲೇ ಸೆಸ್ಕ್ ನಿಗಮದ ಅಧಿಕಾರಿಗಳು ಮುರಿದಿರುವ ಕಂಬವನ್ನು ಬದಲಾಯಿಸಿ ರೈತರ ಜೀವ ಕಾಪಾಡಬೇಕೆಂದು ರೈತ ಮುಖಂಡ ಚಿನ್ನಸ್ವಾಮಿ ಮಾಳಿಗೆ ಒತ್ತಾಯಿಸಿದ್ದಾರೆ.

Advertisement

ಪ್ರತಿ ಭಾನುವಾರ ವಿದ್ಯುತ್‌ ಕಂಬಗಳ ಜೋಡಣೆ ಮತ್ತು ತಂತಿ ನಿರ್ಮಾಣ ಹಾಗೂ ಜಂಗಲ್‌ ಕಟ್ಟಿಂಗ್‌ ಮಾಡುತ್ತಿದ್ದು, ಮೂಡಲಕೋಡಿ ಬಳಿ ಇರುವ ವಿದ್ಯುತ್‌ ಕಂಬ ತುದಿ ಮುರಿದು ಬಿದ್ದು, ತಂತಿಯು ಸಹ ಜಮೀನಿಗೆ ಬೀಳುವ ಸ್ಥಳದಲ್ಲಿ ಇದ್ದು, ಈ ಭಾನುವಾರ ಕಂಬ ಬದಲಾಯಿಸಿ, ರೈತರಿಗೆ ಯಾವುದೇ ತರಹದ ಅನಾಹುತ ಆಗದಂತೆ ಕ್ರಮ ಕೈಗೊಳ್ಳಲಾಗುವುದು.
-ಲಿಂಗರಾಜು, ಸೆಸ್ಕ್ ನಿಗಮದ ಕಾರ್ಯಪಾಲಕ ಸಹಾಯಕ ಅಭಿಯಂತರ

* ಡಿ.ನಟರಾಜು

Advertisement

Udayavani is now on Telegram. Click here to join our channel and stay updated with the latest news.

Next