Advertisement

ವಿದ್ಯುತ್‌ ಪರಿವರ್ತಕ ನಿರ್ವಹಣಾ ಅಭಿಯಾನ

04:33 PM May 09, 2022 | Team Udayavani |

ಹುಣಸಗಿ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 426 ವಿದ್ಯುತ್‌ ಪರಿವರ್ತಕಗಳ ಪೈಕಿ 180 ವಿದ್ಯುತ್‌ ಪರಿವರ್ತಕ ನಿರ್ವಹಣೆ ಮಾಡಲಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಮಹ್ಮದ ರಫೀಕ್‌ ಹೇಳಿದರು.

Advertisement

ಪಟ್ಟಣದ ಮುಖ್ಯರಸ್ತೆಯಲ್ಲಿರುವ ವಿದ್ಯುತ್‌ ಪರಿವರ್ತಕ ನಿರ್ವಹಣಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಪಾಯಕಾರಿ ಸ್ಥಿತಿಯಲ್ಲಿರುವ ಪರಿವರ್ತಕ ಸ್ಥಳವನ್ನು ಗುರುತಿಸಿ ಸ್ಥಳದಲ್ಲಿಯೇ ಬದಲಾವಣೆ ಮಾಡುವ ಮೂಲಕ ಸಂಭವಿಸಬಹುದಾದ ಅಪಾಯ ತಪ್ಪಿಸಲು ವಿನೂತನ ಪ್ರಯತ್ನ ಜೆಸ್ಕಾಂ ಇಲಾಖೆ ಮಾಡುತ್ತಿದೆ. ಸಮಸ್ಯೆ ಇದ್ದರೆ ಜೆಸ್ಕಾಂ ಇಲಾಖೆಗೆ ತಿಳಿಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭ ಸೋಮಪ್ಪ ಟಪಾಲ್‌, ತಾಂತ್ರಿಕ ಸಹಾಯಕ ಬಸನಗೌಡ ಕೊಣ್ಣೂರ, ಸಂತೋಷ ಹಾಗೂ ಕಿರಿಯ ಪವರ್‌ ಮ್ಯಾನ್‌ಗಳು ಸೇರಿದಂತೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next