Advertisement

ರಾಜ್ಯದಲ್ಲಿ 1,108 ಎಲೆಕ್ಟ್ರಿಕ್‌ ಪವರ್‌ ಚಾರ್ಜಿಂಗ್‌ ಸೆಂಟರ್‌ : ಸಚಿವ ಸುನಿಲ್‌ ಕುಮಾರ್‌ 

10:24 AM Sep 04, 2022 | Team Udayavani |

ಕಾರ್ಕಳ : ರಾಜ್ಯದಲ್ಲಿ ಬೆಳಕು ಯೋಜನೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಫ‌ಲಾನುಭವಿಗಳಿಗೆ ಅನುಕೂಲವಾಗಿದೆ. ರಾಜ್ಯದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬಳಕೆಗಾಗಿ 1,108 ಕಡೆಗಳಲ್ಲಿ ಎಲೆಕ್ಟ್ರಿಕ್‌ ಪವರ್‌ ಚಾರ್ಜಿಂಗ್‌ ಸೆಂಟರ್‌ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ಶುಕ್ರವಾರ ಕಾರ್ಕಳ ತಾಲೂಕು ನಿಟ್ಟೆ ಮೆಸ್ಕಾಂ ಉಪವಿಭಾಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರಕಾರ ಇಂಧನ ಇಲಾಖೆ ಜತೆಗೆ ಇತರ ಇಲಾಖೆಗಳಲ್ಲಿ ಸಾಕಷ್ಟು ಯೋಜನೆ, ಬದಲಾವಣೆ ತಂದಿದೆ. ಇದರಿಂದ ಗ್ರಾಮೀಣ ಜನತೆಗೆ ಉಪಯೋಗವಾಗಿದೆ. ಬೊಮ್ಮಾಯಿ ನೇತೃತ್ವದ ಸರಕಾರ ಅಭಿವೃದ್ಧಿಗೆ ಒತ್ತು ನೀಡುವ ಸರಕಾರ. ಜನಪ್ರಿಯ ಯೋಜನೆಗಳಾದ ಬೆಳಕು ಯೋಜನೆ, ಗ್ರಾಮ ವನ್‌ ಯೋಜನೆ, ವಿದ್ಯಾನಿಧಿ ಯೋಜನೆಗಳು, ಮಾಸಾಶನಗಳ ಮೂಲಕ ಜನರ ಮನಗೆದ್ದಿದೆ ಎಂದರು.

ಕಾರ್ಕಳದಲ್ಲಿ ಜವುಳಿ ಪಾರ್ಕ್‌
ಕರಾವಳಿ ಭಾಗದಲ್ಲಿ ಉದ್ಯಮಗಳ ಸೃಷ್ಟಿ, ಆರ್ಥಿಕತೆ ಹೆಚ್ಚಳಕ್ಕೆ ಒತ್ತು ನೀಡಲಾಗುತ್ತಿದೆ. ಉದ್ಯೋಗಾವಕಾಶ ಕಲ್ಪಿಸುವ ದೃಷ್ಟಿಯಿಂದ ಕಾರ್ಕಳದಲ್ಲಿ ಜವುಳಿ ಪಾರ್ಕ್‌ ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕಾಗಿ ನಿಟ್ಟೆಯಲ್ಲಿ 25 ಎಕರೆ ಜಾಗ ಗುರುತಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕರಾವಳಿ ಮೂರ್ತಿಯ ಕೀರ್ತಿ ದಿಲ್ಲಿಗೆ
ಪ್ರವಾಸೋದ್ಯಮವನ್ನು ಬಲಗೊಳಿಸುವ ನಿಟ್ಟಿನಲ್ಲಿ ಬೈಲೂರಿನಲ್ಲಿ ನಿರ್ಮಿಸಲಾಗುತ್ತಿರುವ 33 ಅಡಿ ಎತ್ತರದ ಪರಶುರಾಮನ ಮೂರ್ತಿ ಹಾಗೂ ಥೀಮ್‌ ಪಾರ್ಕ್‌ ಡಿಸೆಂಬರ್‌ನಲ್ಲಿ ಉದ್ಘಾಟನೆಗೆ ಸಿದ್ಧವಾಗಲಿದೆ. ಬೈಲೂರಿನ ಪರಶುರಾಮನ ಮೂರ್ತಿಯ ಮಾದರಿಯನ್ನು ಪ್ರಧಾನಿ ನರೇಂದ್ರ ಮೋದಿಗೆ ನೀಡುವ ಮೂಲಕ ಕರಾವಳಿ, ಕಾರ್ಕಳದ ಕೀರ್ತಿಯನ್ನು ದಿಲ್ಲಿಗೆ ತಲುಪಿಸುವ ಕಾರ್ಯವಾಗಿದೆ ಎಂದು ಸಚಿವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next