Advertisement

ಎಲೆಕ್ಟ್ರಿಕ್‌ ಕಾರು ಬಾರು ಇನ್ನೂ ಜೋರು

09:59 AM Jan 06, 2020 | mahesh |

ದೇಶದಲ್ಲಿ ಅಲ್ಲೊಂದು ಇಲ್ಲೊಂದು ಎಂದು ಕಾಣುತ್ತಿರುವ ಎಲೆಕ್ಟ್ರಿಕ್‌ ವಾಹನಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ರಸ್ತೆಗಿಳಿಯಲಿವೆ. ಪರಿಸರ ಸ್ನೇಹಿಯಾಗಿ ಮತ್ತು ಸಾಂಪ್ರದಾಯಿಕ ಇಂಧನ ಬಯಸುವ ಕಾರುಗಳಿಗೆ ಪರ್ಯಾಯವಾಗಿ ಈ ಕಾರುಗಳು ಕೆಲಸ ಮಾಡಲಿವೆ. ಈ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಈ ಎಲೆಕ್ಟ್ರಿಕ್‌ ಕಾರುಗಳ ಕಾರ್ಯಾಚರಣೆಗೆ ಪೂರಕ ವಾತಾವರಣ ಸೃಷ್ಟಿಸಲಾಗುತ್ತಿದೆ.

Advertisement

ವಿದ್ಯುತ್‌ ಮೋಟಾರುಗಳು ಕಡಿಮೆ ನಿರ್ವಹಣೆಯದ್ದಾಗಿವೆ. ವಾಹನಗಳಲ್ಲಿ ಅಳವಡಿಸುವ ಆಧುನಿಕ ಲೀಥಿಯಂ ಅಯಾನ್‌ ಬ್ಯಾಟರಿಯ ತೂಕ ಮತ್ತು ಗಾತ್ರ ಕಡಿಮೆ ಇದ್ದು 10 ವರ್ಷದ ತನಕ ಬಾಳಿಕೆ ಬರಲಿವೆ. ಇವುಗಳು 10 ಸಾವಿರ ಚಾರ್ಜಿಂಗ್‌ ಸೈಕಲ್ಸ…ನದ್ದಾಗಿದೆ. ಹೈಬ್ರಿಡ್‌ ಮತ್ತು ರೀಜನರೇಟಿವ್‌ ಬ್ರೇಕಿಂಗ್‌ ತಂತ್ರಜ್ಞಾನದಿಂದ ಹೆಚ್ಚಿನ ಶಕ್ತಿಯು ಚಕ್ರಗಳಿಗೆ ದೊರೆಯುತ್ತದೆ. ಇದರಿಂದ ಕಾರುಗಳು ಸರಾಸರಿ 400 ರಿಂದ 500ಕಿ.ಮೀ ತನಕ ಓಡುವ ಸಾಮರ್ಥ್ಯ ಹೊಂದಿರಲಿವೆ.

2,636
ದೇಶಾದ್ಯಂತ 2,636 ಚಾರ್ಜಿಂಗ್‌ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರಕಾರ ಮುಂದಾಗಿದೆ.
62 ನಗರಗಳು
ಇದಕ್ಕಾಗಿ ದೇಶದ ವಿವಿಧೆಡೆಗಳಲ್ಲಿ 62 ನಗರಗಳನ್ನು ಗುರುತಿಸಲಾಗಿದೆ.
24 ರಾಜ್ಯಗಳು
ದೇಶದ ಎಲ್ಲಾ 24 ರಾಜ್ಯಗಳಲ್ಲಿ ಚಾರ್ಜಿಂಗ್‌ ಸೆಂಟರ್‌ಗಳನ್ನು ತೆರೆಯಲು ಕೇಂದ್ರ ಸರಕಾರ ಉದ್ದೇಶಿಸಿದೆ.
4 ಕಿ.ಮೀ.ಗೆ 1 ಕೇಂದ್ರ
ನಗರಗಳಲ್ಲಿ ಪ್ರತಿ 4 ಕಿ.ಮೀ. ಗೆ ಒಂದು ಚಾರ್ಜಿಂಗ್‌ ಸೆಂಟರ್‌ ತೆರೆಯಲಾಗುತ್ತದೆ. ಟ್ರಾಫಿಕ್‌ ಸಮಸ್ಯೆಯಿಂದ ಶಕ್ತಿ ವ್ಯಯವಾದರೆ ಎಂದು ಅಲ್ಲಲ್ಲಿ ಕೇಂದ್ರಗಳನ್ನು ತೆರೆಯಲಾಗುತ್ತದೆ.

ಫಾಸ್ಟ್‌ ಚಾರ್ಜಿಂಗ್‌
ಒಟ್ಟು 2,636 ಚಾರ್ಜಿಂಗ್‌ ಕೇಂದ್ರಗಳ ಪೈಕಿ 1,633 ಕೇಂದ್ರಗಳು ಸ್ಪೀಡ್‌ (ವೇಗ) ಚಾರ್ಜರ್‌ಗಳಾಗಿವೆ.
ಸ್ಲೋ ಚಾರ್ಜಿಂಗ್‌
ಇನ್ನು ಫಾಸ್ಟ್‌ ಚಾರ್ಜಿಂಗ್‌ ಹೊರತುಪಡಿಸಿ ಉಳಿದ 1,003 ಕೇಂದ್ರಗಳಲ್ಲಿ ಸ್ಲೋ ಚಾರ್ಜಿಂಗ್‌ ಸೇವೆಯನ್ನು ನೀಡಲಾಗುತ್ತದೆ.
14,000
62 ನಗರಗಳಲ್ಲಿ ಸುಮಾರು 14 ಸಾವಿರ ಚಾರ್ಜರ್‌ಗಳನ್ನು ಅಳವಡಿಸಲಾಗುತ್ತದೆ. 2019ರಲ್ಲಿ ದೇಶದಲ್ಲಿ ಒಟ್ಟು 1,309 ಎಲೆಕ್ಟ್ರಿಕ್‌ ಕಾರುಗಳು ಮಾರಾಟವಾಗಿವೆ.

2030 ದೇಶದೆಲ್ಲೆಡೆ ಎಲೆಕ್ಟ್ರಿಕ್‌ ಹವಾ


Advertisement
Advertisement

Udayavani is now on Telegram. Click here to join our channel and stay updated with the latest news.

Next