Advertisement
ಪತ್ರಿಕೆ ವಿತರಕನ ಸಮಯ ಪ್ರಜ್ಞೆಇಲ್ಲಿನ ಹಿರಿಯ ನಾಗರಿಕ ಟಿ.ಆರ್.ಪ್ರಭು ಅವರ ಮನೆಗೆ ಎಂದಿನಂತೆ ಮುಂಜಾವ 5ರ ಹೊತ್ತಿಗೆ ಪತ್ರಿಕೆ ವಿತರಿಸಲು ತೆರಳಿದ ವೇಳೆ ಮನೆಯ ಗೇಟ್‌ನ ಮುಂಭಾಗ ವಿದ್ಯುತ್ ತಂತಿ ನೆಲಕ್ಕೆ ಬಿದ್ದಿರುವುದವನ್ನು ಏಜೆಂಟ್ ಕಂಡರು. ಆರಂಭದಲ್ಲಿ ಆಘಾತಗೊಂಡರೂ ತತ್‌ಕ್ಷಣ ಅವರು ಮನೆಯತ್ತ ತನ್ನಲ್ಲಿದ್ದ ಟಾರ್ಚ್ ಬೆಳಗಿಸಿ ತಂತಿ ತುಂಡಾಗಿ ಬಿದ್ದಿರುವ ವಿಷಯವನ್ನು ಪ್ರಭುಗಳಿಗೆ ತಿಳಿಸಿದರು. ಈ ಮೂಲಕ ಸಂಭಾವ್ಯ ಅಪಾಯವನ್ನು ತಪ್ಪಿಸಿದರು. ಆಬಳಿಕ ಟಿ. ಆರ್. ಪ್ರಭು ಅವರು ಮೆಸ್ಕಾಂಗೆ ದೂರವಾಣಿ ಮಾಡಿ ವಿದ್ಯುತ್ ನಿಲುಗಡೆಗೊಳಿಸಲು ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿ ಸಂದರ್ಭಹೆಚ್ಚಿನಲ್ಲ ಹಳೆಯ ವಿದ್ಯುತ್ ತಂತಿಗಳನ್ನು ಬದಲಾಯಿಸ
ಲಾಗಿದೆ. ಆದರೆ ಇಲ್ಲಿನ ಶ್ರೀಕೃಷ್ಣ ಐಸ್ ಕ್ರೀಮ್‌ನ ಸಮೀಪದ ಹಳೆಯ ವಿದ್ಯುತ್ ತಂತಿಗಳನ್ನು ಬದಲಾಯಿಸದ ಕಾರಣ ಅಪಾಯಕ್ಕೆ ಎಡೆ ಮಾಡಿಕೊಟ್ಟಿದೆ. ಇದು ಕೈಗೆ ತಗಲುವ ರೀತಿಯಲ್ಲಿ ಜೋತು ಬೀಳುವ ಸ್ಥಿತಿಯಲ್ಲಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಂಭಾವ್ಯ ಅವಘಡ ತಪ್ಪಿಸುವ ನಿಟ್ಟಿನಲ್ಲಿ ತತ್‌ಕ್ಷಣ ಹೊಸ ತಂತಿ ಅಳವಡಿಸುವ ಜತೆಗೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಾದ ಅನಿವಾರ್ಯತೆ ಇದೆ ಎಂದು ಸ್ಥಳೀಯ ಉದ್ಯಮಿ ಶಿವಪ್ರಸಾದ್ ಹತ್ವಾರ್ ತೆಕ್ಕಟ್ಟೆ ಆಗ್ರಹಿಸಿದ್ದಾರೆ. ಎಂದಿನಂತೆ ಮುಂಜಾನೆ ಪತ್ರಿಕೆ ವಿತರಿಸಲು ಮನೆ ಮನೆಗಳಿಗೆ ತೆರಳುತ್ತಿರುವ ಸಂದರ್ಭ ಟಿ.ಆರ್.ಪ್ರಭು ಅವರ ಮನೆಯ ಗೇಟ್‌ನ ಮುಂಭಾಗ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದು ನೋಡಿ ಆಘಾತವಾಯಿತು. ತತ್‌ಕ್ಷಣವೇ ಟಾರ್ಚ್ ಬೆಳಗಿಸಿ ಮನೆಯವರಿಗೆ ಹೊರಗಡೆ ಬಾರದಂತೆ ಹೇಳಿ ಮುನ್ನೆಚ್ಚರಿಕೆ ನೀಡಿದೆ.
– ರಾಘವೇಂದ್ರ ಪೂಜಾರಿ, ಉದಯವಾಣಿ ಪತ್ರಿಕೆಯ ವಿತರಕರು