Advertisement

ಶಿಕಕ್ಷರ ಕಾರ್ಯಕಾರಿ ಸಮಿತಿಗೆ ಡಿ.6ರಂದು ಚುನಾವಣೆ

12:03 PM Nov 28, 2020 | Suhan S |

ಹನೂರು: ತಾಲೂಕು ವ್ಯಾಪ್ತಿಯ ಪ್ರಾಥಮಿಕ ಶಾಲೆಗಳಲ್ಲಿ 483 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ 50 ಶಿಕ್ಷಕರಿಗೆ ಓರ್ವ ಸದಸ್ಯನನ್ನುಆಯ್ಕೆಮಾಡಲು ಅವಕಾಶವಿದೆ. 10 ಜನಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಚುನಾವಣಾಧಿಕಾರಿ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಶಿವಮಾದಯ್ಯ ತಿಳಿಸಿದರು.

Advertisement

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕುವ್ಯಾಪ್ತಿಯಿಂದ 10 ಶಿಕ್ಷಕರು ಸದಸ್ಯರಾಗಿ  ಆಯ್ಕೆಯಾಗಬಹುದಾಗಿದ್ದು,ಈ ಪೈಕಿ 3 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಇನ್ನು7 ಸ್ಥಾನಗಳು ಸಾಮಾನ್ಯ ಸ್ಥಾನಗಳಾಗಿದ್ದು, ಪ್ರತಿ ಶಿಕ್ಷಕರೂ ತಲಾ 10 ಮತಗಳನ್ನು ಚಲಾಯಿಸಲು ಅವಕಾಶವಿದೆ. ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಶುಕ್ರವಾರದಿಂದ ನಾಮಪತ್ರ ಸಲ್ಲಿಸಬಹುದು. ಶನಿವಾರ ಅಂತಿಮ ದಿನವಾಗಿದೆ. ನಾಮಪತ್ರ ಸಲ್ಲಿಕೆಗೆ ಮೊದಲ ದಿನವಾದ ಶುಕ್ರವಾರ 24 ಶಿಕ್ಷಕರು ನಿಗದಿತ ಶುಲ್ಕದೊಂದಿಗೆ ನಾಮಪತ್ರ ಪಡೆದಿದ್ದು, 17 ಶಿಕ್ಷಕರು ನಾಮಪತ್ರ ಸಲ್ಲಿಸಿದ್ದಾರೆ.  ಭಾನುವಾರ ಉಮೇದುವಾರಿಕೆ ಹಿಂಪಡೆಯಲು ಅವಕಾಶವಿದ್ದು, 10 ಮಂದಿಗಿಂತ ಹೆಚ್ಚು ಶಿಕ್ಷಕರು ಸ್ಪರ್ಧಾ ಕಣದಲ್ಲಿ ಉಳಿದಿದ್ದರೆ ಡಿ.6ರಂದುಚುನಾವಣೆ ನಡೆಯಲಿದ್ದು, ಅಂದೇ ಫ‌ಲಿತಾಂಶ ಹೊರಬೀಳಲಿದೆ ಎಂದರು.

ನಾಮಪತ್ರ ಸಲ್ಲಿಸಿದ ಶಿಕ್ಷಕರು: ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಕ್ಕೆ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗುರುಸ್ವಾಮಿ, ಬಡ್ತಿ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ, ಹಾಲಿ ಉಪಾಧ್ಯಕ್ಷ ಶಿವಮೂರ್ತಿ, ಕಾರ್ಯದರ್ಶಿ ಗಿರೀಶ್‌, ಬಿಆರ್‌ಪಿಗಳಾದ ಸತೀಶ್‌, ವೆಂಕಟರಾಜು ಹಾಗೂ ಶಿಕ್ಷಕರಾದ ನಾಗಸುಂದರ್‌, ಚಿನ್ನರಾಜು,ರವಿಚಂದ್ರ, ಕೃಷ್ಣನಾಯ್ಕ, ವೆಂಕಟನಾರಾಯಣ್‌, ಸಾಮ್ಯುಯೆಲ್‌ ಕಮಲ್‌ನಾಥ್‌, ಮೋಕ್ಷರಾಣಿ, ಮಾದೇಶ್‌.ಸಿ, ಮಹೇಶ್‌.ಕೆ, ಮಹದೇಶ್‌.ಆರ್‌, ಮುನಿಯನಾಯ್ಕ ನಾಮಪತ್ರ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next