ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆ ನಡೆಯುತ್ತಿರುವುದರಿಂದ ವ್ಯಾಪಕ ಹಿಂಸಾಚಾರ ಮತ್ತು ಹತ್ಯೆಗಳು ನಡೆಯುತ್ತಿದೆ. ಹೀಗಾಗಿ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ರಕ್ತಪಾತವನ್ನು ನಿಲ್ಲಿಸುವಂತೆ ಜನರು ಮತ್ತು ರಾಜಕೀಯ ಪಕ್ಷಗಳನ್ನು ಒತ್ತಾಯಿಸಿದರು.
“ಗೂಂಡಾಗಳು ಹೊರಗೆ ಹೋಗಿ ಮತ ಹಾಕಲು ಬಿಡುತ್ತಿಲ್ಲ ಎಂದು ಜನರು ಹೇಳಿದರು. ಕೊಲೆಗಳು ನಡೆಯುತ್ತಿವೆ ಎಂದು ಜನರು ಹೇಳಿದರು. ಗುಂಡಿನ ಸದ್ದು ಕೇಳುತ್ತಿದೆ ಎಂದು ಜನರು ನನಗೆ ಹೇಳಿದರು. ಇದು ಪ್ರಜಾಪ್ರಭುತ್ವದ ಅತ್ಯಂತ ಪವಿತ್ರ ದಿನ. ರಕ್ತಪಾತ ನಿಲ್ಲಬೇಕು” ಎಂದುರು.
“ಚುನಾವಣೆಗಳು ಬ್ಯಾಲೆಟ್ (ಮತಪತ್ರ)ಗಳಿಂದ ನಡೆಯಬೇಕು ಮತ್ತು ಬುಲೆಟ್ ಗಳಿಂದ ಅಲ್ಲ” ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲರು ಹೇಳಿದರು.
ಪಂಚಾಯತ್ ಚುನಾವಣೆಯ ನಡುವೆ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಟಿಎಂಸಿ, ಬಿಜೆಪಿ ಸೇರಿ ವಿವಿಧ ಪಕ್ಷಗಳಿಗೆ ಸೇರಿದ ಏಳು ಮಂದಿ ಕಾರ್ಯಕರ್ತರ ಕೊಲೆಯಾಗಿದೆ.
ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಗೆ ಬಿಗಿ ಭದ್ರತೆಯ ನಡುವೆ ಶನಿವಾರ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಯಿತು. ಇದರಲ್ಲಿ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ 5 ಕೋಟಿಗೂ ಹೆಚ್ಚು ಜನರು ಮತದಾನಕ್ಕೆ ಅರ್ಹರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.