Advertisement
ಇದನ್ನೂ ಓದಿ:Election: ಉಪೇಂದ್ರ ಯಾವಾಗ ಗೆಲ್ಲುವುದು….?: ಉತ್ತರ ನೀಡಿದ ರಿಯಲ್ ಸ್ಟಾರ್
Related Articles
Advertisement
ಕ್ಷೇತ್ರದ ಭತ್ಯೆ:
ಒಬ್ಬ ಸಂಸದರು ಕ್ಷೇತ್ರದ ಭತ್ಯೆಯಾಗಿ ಪ್ರತಿ ತಿಂಗಳು 70,000 ರೂಪಾಯಿ ಪಡೆಯುತ್ತಾರೆ. ಕಚೇರಿ ನಿರ್ವಹಣೆ ಹಾಗೂ ಕ್ಷೇತ್ರದೊಳಗಿನ ತಿರುಗಾಟದ ಖರ್ಚು-ವೆಚ್ಚ ಇದರಲ್ಲಿ ಸೇರ್ಪಡೆಯಾಗಲಿದೆ.
ಕಚೇರಿ ಖರ್ಚು:
ಒಬ್ಬ ಸಂಸದರು ಕಚೇರಿ ನಿರ್ವಹಣೆಗಾಗಿ ಪ್ರತಿ ತಿಂಗಳು 60,000 ರೂಪಾಯಿ ಪಡೆಯುತ್ತಾರೆ. ಸ್ಟೇಷನರಿ, ದೂರವಾಣಿ ಸಂಪರ್ಕ, ಕಚೇರಿ ಸಿಬಂದಿಗಳ ಸಂಬಳ ಇದರಲ್ಲಿ ಸೇರಿದೆ.
ದಿನದ ಭತ್ಯೆ:
ಸಂಸತ್ ಕಲಾಪ, ಸಮಿತಿ ಸಭೆಗೆ ಹಾಜರಾಗುವ ವೇಳೆ ಸಂಸದರಿಗೆ ಪ್ರತಿದಿನ 2,000 ಸಾವಿರ ರೂಪಾಯಿ ಭತ್ಯೆ ಲಭ್ಯವಾಗಲಿದೆ. ಇದು ಊಟೋಪಚಾರ, ವಸತಿಯ ಖರ್ಚನ್ನು ಒಳಗೊಂಡಿದೆ.
ಪ್ರಯಾಣ ಭತ್ಯೆ:
ಸಂಸದರಿಗೆ ಪ್ರತಿವರ್ಷ ತಾವೂ ಸೇರಿದಂತೆ ಕುಟುಂಬ ಸದಸ್ಯರು 34 ಬಾರಿ ಉಚಿತವಾಗಿ ವಿಮಾನ ಪ್ರಯಾಣ ಕೈಗೊಳ್ಳಬಹುದು. ಅದೇ ರೀತಿ ವೈಯಕ್ತಿಕವಾಗಿ ಹಾಗೂ ಸಂಸದರ ಕಾರ್ಯಗಳಿಗಾಗಿ ಉಚಿತವಾಗಿ ಫಸ್ಟ್ ಕ್ಲಾಸ್ ರೈಲು ಪ್ರಯಾಣ ಮಾಡಬಹುದು. ಅಷ್ಟೇ ಅಲ್ಲ ತಮ್ಮ ಕ್ಷೇತ್ರ ಸುತ್ತಾಟಕ್ಕಾಗಿ ಮೈಲೇಜ್ ಭತ್ಯೆಯನ್ನು ಪಡೆಯಬಹುದಾಗಿದೆ.
ಮನೆ ಹಾಗೂ ವಾಸ್ತವ್ಯ ಭತ್ಯೆ:
ಐದು ವರ್ಷಗಳ ಕಾಲಾವಧಿಯಲ್ಲಿ ಸಂಸದರಿಗೆ ಪ್ರಮುಖ ಸ್ಥಳಗಳಲ್ಲಿ ಬಾಡಿಗೆ ರಹಿತ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಸಂಸದರು ಬಂಗ್ಲೆ, ಫ್ಲ್ಯಾಟ್ ಅಥವಾ ಹಾಸ್ಟೆಲ್ ರೂಂ ಪಡೆದುಕೊಳ್ಳಬಹುದಾಗಿದೆ. ಯಾವ ಸಂಸದರು Official ನಿವಾಸವನ್ನು ಬಳಸಲು ಇಷ್ಟಪಡದಿದ್ದಲ್ಲಿ ಅವರು ಪ್ರತಿ ತಿಂಗಳು ಹೌಸಿಂಗ್ ಭತ್ಯೆಗಾಗಿ 2,00,000 ಲಕ್ಷ ರೂಪಾಯಿ ಪಡೆದುಕೊಳ್ಳಬಹುದಾಗಿದೆ.
ಔಷಧೋಪಚಾರ ಭತ್ಯೆ:
ಸಂಸದರು ಮತ್ತು ಅವರ ಕುಟುಂಬ ಸದಸ್ಯರು ಸೆಂಟ್ರಲ್ ಗವರ್ನಮೆಂಟ್ ಹೆಲ್ತ್ ಸ್ಕೀಮ್ ( CGHS) ನಡಿ ಉಚಿತ ಔಷಧೋಪಚಾರ ಪಡೆಯಬಹುದು. ಈ ಯೋಜನೆಯಡಿ ಸರ್ಕಾರಿ ಅಥವಾ ಆಯ್ದ ಖಾಸಗಿ ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಪಿಂಚಣಿ:
ಒಂದು ಅವಧಿಗೆ ಸಂಸದರಾದ ಮಾಜಿ ಸದಸ್ಯರು ಪ್ರತಿ ತಿಂಗಳು 25,000 ರೂಪಾಯಿ ಪಿಂಚಣಿ ಪಡೆಯುತ್ತಾರೆ. ಪ್ರತಿ ಹೆಚ್ಚುವರಿ ವರ್ಷದ ಸೇವೆಗಾಗಿ ಪ್ರತಿ ತಿಂಗಳು 2,000 ಸಾವಿರ ರೂಪಾಯಿ ಹೆಚ್ಚುವರಿಯಾಗಿ ಪಡೆಯಲಿದ್ದಾರೆ.
ದೂರವಾಣಿ ಮತ್ತು ಇಂಟರ್ನೆಟ್ ಭತ್ಯೆ:
ಸಂಸದರು ವಾರ್ಷಿಕವಾಗಿ 1,50,000 ಸಾವಿರ ಉಚಿತ ದೂರವಾಣಿ ಕರೆ ಮಾಡಲು ಅವಕಾಶವಿದೆ. ಅದೇ ರೀತಿ ಉಚಿತ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ ಮನೆ ಮತ್ತು ಕಚೇರಿಗಳಿಗೆ ನೀಡಲಾಗುತ್ತದೆ.
ನೀರು ಮತ್ತು ವಿದ್ಯುತ್ ಭತ್ಯೆ:
ಸಂಸದರುಗಳಿಗೆ ವಾರ್ಷಿಕವಾಗಿ 50,000 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ಹಾಗೂ 4,000 ಸಾವಿರ ಲೀಟರ್ ಉಚಿತ ನೀರು ಪಡೆಯಬಹುದಾಗಿದೆ.
ಪ್ರಧಾನಮಂತ್ರಿಯ ಸಂಬಳ ಎಷ್ಟು?
ಭಾರತದಲ್ಲಿ ಪ್ರಧಾನ ಮಂತ್ರಿಯಾದವರು ಪ್ರತಿ ತಿಂಗಳು 1.66 ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ. ವೇತನ 50,000 ರೂಪಾಯಿ ಮೂಲ ವೇತನವನ್ನು ಒಳಗೊಂಡಿದೆ. ಜೊತೆಗೆ ಪ್ರಧಾನ ಮಂತ್ರಿಯವರು ವೆಚ್ಚದ ಭತ್ಯೆಯಾಗಿ 3,000 ರೂ. ಹಾಗೂ ಸಂಸದೀಯ ಭತ್ಯೆ 45,000 ಸಾವಿರ ರೂ. ಪಡೆಯುತ್ತಾರೆ.
ಅಲ್ಲದೇ ಪ್ರತಿದಿನದ ಭತ್ಯೆ 2,000 ರೂಪಾಯಿ ಪಡೆಯುತ್ತಾರೆ. ತಿಂಗಳ ಭತ್ಯೆಯನ್ನು ಹೊರತುಪಡಿಸಿ ಪ್ರಧಾನಿಯವರಿಗೆ ಹಲವು ಸೌಲಭ್ಯಗಳಿವೆ. ಉಚಿತ ನಿವಾಸ, ಎಸ್ ಪಿಜಿ ಭದ್ರತೆ. ದೇಶ-ವಿದೇಶ ಪ್ರವಾಸ. ಈ ಎಲ್ಲಾ ಖರ್ಚುಗಳನ್ನು ಸರ್ಕಾರ ಪಾವತಿಸುತ್ತದೆ.