ಬರ ಎದುರಾಗಿದ್ದರಿಂದ ಉತ್ಸವ ಬೇಡ ಎಂದ ಸರಕಾರ ಈಗ ಕಲಾವಿದರ, ಸಂಘ-ಸಂಸ್ಥೆಗಳ ಒತ್ತಡಕ್ಕೆ ಮಣಿದು ಉತ್ಸವ ಆಚರಿಸುವ ಬಗ್ಗೆ ಸ್ಪಷ್ಟ ನಿರ್ಣಯ ಕೈಗೊಳ್ಳದಿದ್ದರೂ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆಯೇ ಎಂಬ ಅನುಮಾನವೂ ಮೂಡಿದೆ. ಸ್ಥಳೀಯ ಸಂಸ್ಥೆ ಚುನಾವಣೆ ದಿನಾಂಕ ಘೋಷಣೆಯಾಗುವುದನ್ನೇ ಕಾಯುತ್ತಿರುವ ಸರಕಾರ ಹಂಪಿ ಉತ್ಸವ ಆಚರಣೆಗೆ ದಿನಾಂಕ ನಿಗದಿಪಡಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
Advertisement
ಪ್ರಸಕ್ತ ವರ್ಷ ಹಂಪಿ ಉತ್ಸವ ರದ್ದುಗೊಳಿಸಿ ಮುಂದಿನ ವರ್ಷ ಆಚರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ ಬಳಿಕ ಜಿಲ್ಲೆಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ಕಸಾಪ, ಸಂಘ-ಸಂಸ್ಥೆಗಳು, ಹಿರಿಯ ಕಲಾವಿದರು ಸೇರಿ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಸ್ಥಳೀಯ ಸಂಸದರಿಗೂ ಮನವಿ ಸಲ್ಲಿಸಿ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿದ್ದವು. ಒತ್ತಡಕ್ಕೆ ಮಣಿದಿದ್ದ ಸರ್ಕಾರ ನಿರ್ಧಾರ ಬದಲಿಸಿತ್ತು. ಆದರೆ, ಸ್ಥಳೀಯ ಸಂಸ್ಥೆಗಳಿಗೆ ಯಾವಾಗ ಬೇಕಾದರೂ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಯಿದೆ. ಸದ್ಯ ಉತ್ಸವ ಆಚರಣೆಗಾಗಿ ನಡೆಯುತ್ತಿರುವ ಹೋರಾಟಗಳನ್ನು ತಣಿಸಲು ರಾಜ್ಯ ಸರ್ಕಾರ ಹಂಪಿ ಉತ್ಸವ ಆಚರಿಸುವುದಾಗಿ ಹೇಳಿದಂತಿದ್ದು, ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಮತ್ತೂಮ್ಮೆ ಉತ್ಸವವನ್ನು ಮುಂದೂಡಬಹುದೆನೋ ಎಂಬ ಅನುಮಾನ ಜಿಲ್ಲೆಯ ಕಲಾವಿದರನ್ನು ಕಾಡುತ್ತಿದೆ. ಜನವರಿ 5, 6ರಂದು 2 ದಿನ, ಕೇವಲ ಎರಡುವೇದಿಕೆಗಳಲ್ಲಿ ಸರಳವಾಗಿ ಉತ್ಸವ ಆಚರಿಸಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಜ.4, 5, 6 ಮೂರು ದಿನಗಳ ಕಾಲ ಧಾರವಾಡದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಅದೇ ದಿನಗಳಲ್ಲಿ ಹಂಪಿ ಉತ್ಸವ ಆಚರಿಸಬಹುದೇ ಎಂಬ ಅನುಮಾನವೂ ಜನರನ್ನು ಕಾಡುತ್ತಿದೆ.
ನೇಮಿಸಿ ಡಿ.15ರೊಳಗಾಗಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಅಲ್ಲದೇ, 2019ರಲ್ಲಿ ಲೋಕ ಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಮತದಾರರ ಕರಡು ಪ್ರತಿಯನ್ನು ಘೋಷಣೆ ಮಾಡಿದ್ದು, ಜ.15 ರಂದು ಅಧಿಕೃತಗೊಳ್ಳುವ ಸಾಧ್ಯತೆಯಿದೆ. ಹಾಗಾಗಿ ಸ್ಥಳೀಯ ಸಂಸ್ಥೆಗಳಿಗೆ ಯಾವಾಗ ಬೇಕಾದರೂ ಚುನಾ ವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆಯಿದೆ. ಇದನ್ನೆಲ್ಲ ಗಮನಿಸಿರುವ ರಾಜ್ಯ
ಸರ್ಕಾರ, ಜಿಲ್ಲಾಡಳಿತ ಸದ್ಯ ಜಿಲ್ಲೆಯಲ್ಲಿ ಎದ್ದಿರುವ ಹೋರಾಟದ ಕಾವು ತಣಿಸುವ ಸಲುವಾಗಿ ಹಂಪಿ ಉತ್ಸವವನ್ನು ಆಚರಿಸುವುದಾಗಿ ಹೇಳುವ ಮೂಲಕ ಕಲಾವಿದರ ಮೂಗಿಗೆ ತುಪ್ಪ ಸವರಲು ಮುಂದಾಗಿದೆ ಎಂದು ಜಿಲ್ಲೆಯ ಪ್ರಜ್ಞಾವಂತ ನಾಗರಿಕರು,
ಕಲಾವಿದರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಸರಳ ಆಚರಣೆ: ಹಂಪಿ ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ. ಶಿವಕುಮಾರ್ ಉತ್ಸವಕ್ಕೆ ತಗಲುವ ವೆಚ್ಚದ ಬಗ್ಗೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಮೇಲಾಗಿ ಅದ್ದೂರಿಯಾಗಿ 3 ದಿನ
ಆಚರಿಸಲಾಗುತ್ತಿದ್ದ ಉತ್ಸವವನ್ನು 2 ದಿನ ಸರಳವಾಗಿ ಆಚರಿಸುವುದು ಸರ್ಕಾರದ ಉದ್ದೇಶ ಎನ್ನಲಾಗಿದೆ. ಜನವರಿಯಲ್ಲೇ ಎದುರಾಗಿದ್ದ ವಿಘ್ನ ಹಂಪಿ ಉತ್ಸವವನ್ನು ಈವರೆಗೂ ಮೂರು ಬಾರಿ 2001, 2010, 2011ರಲ್ಲಿ ಜನವರಿ ತಿಂಗಳಲ್ಲಿ ಆಚರಿಸಲಾಗಿದೆ. ಈ ಪೈಕಿ ಎರಡು ಬಾರಿ ಉತ್ಸವ ಆರಂಭಗೊಳ್ಳಬೇಕಿದ್ದ ದಿನದಂದೇ ವಿಘ್ನಗಳು ಎದುರಾಗಿವೆ. 2001ರಲ್ಲಿ
ಜನವರಿ 26, 27, 28ರಂದು ಉತ್ಸವ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಜ.26 ರಂದೇ ಹೊಸ ಪೇಟೆಯ ಅಂದಿನ ತಾಪಂ ಅಧ್ಯಕ್ಷರ ಹತ್ಯೆ ನಡೆದಿದ್ದರಿಂದ ಉತ್ಸವ ರದ್ದುಗೊಂಡಿತ್ತು. ಬಳಿಕ 2010ರಲ್ಲಿ ಜ.26,27,28 ರಂದು ಹಂಪಿ ಉತ್ಸವ ಬದಲಿಗೆ ಮೊದಲ
ಬಾರಿಗೆ ಶ್ರೀಕೃಷ್ಣದೇವರಾಯರ 500ನೇ ಪಟ್ಟಾಭಿಷೇಕದ ಹೆಸರಲ್ಲಿ ಉತ್ಸವ ಆಚರಿಸಲು ಎಲ್ಲಾ ಸಿದ್ಧತೆ ಮಾಡಲಾಗಿತ್ತು. ಆದರೆ, ಜ.26ರಂದೇ ಬಳ್ಳಾರಿಯ ಗಾಂಧಿನಗರದಲ್ಲಿನ ಬೃಹತ್ ಅಪಾರ್ಟ್‌ಮೆಂಟ್ ಕುಸಿದು 29 ಕಾರ್ಮಿಕರು ಸಾವಿಗೀಡಾಗಿದ್ದರು.
Related Articles
Advertisement