Advertisement

ಚುನಾವಣೆ ಕಾನೂನು ಬಾಹಿರ: ಜೆಡಿಎಸ್‌-ಬಿಜೆಪಿ ಆರೋಪ

06:34 PM Nov 04, 2020 | Suhan S |

ಚಳ್ಳಕೆರೆ: ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಉಪವಿಭಾಗಾಧಿಕಾರಿಗಳು ನಡೆಸಿದ ಚುನಾವಣೆ ಕಾನೂನು ಬಾಹಿರ ಎಂದು ಆರೋಪಿಸಿದ ಜೆಡಿಎಸ್‌ ಮತ್ತು ಬಿಜೆಪಿಯ ನಗರಸಭಾ ಸದಸ್ಯರು, ಉಪವಿಭಾಗಾಧಿಕಾರಿ ಪ್ರಸನ್ನ ಅವರ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

Advertisement

ಚುನಾವಣೆ ಆಯ್ಕೆ ಸಂದರ್ಭದಲ್ಲಿ ತಕರಾರುಎತ್ತಿದ ಜೆಡಿಎಸ್‌ ಹಾಗೂ ಬಿಜೆಪಿ ಸದಸ್ಯರು, ರಾಜ್ಯ ಉಚ್ಚ ನ್ಯಾಯಾಲಯ ನ. 2ರೊಳಗೆ  ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನುಪೂರ್ಣಗೊಳಿಸುವಂತೆ ನಿರ್ದೇಶನ ನೀಡಿತ್ತು. ಆದರೆ ಉಚ್ಚ ನ್ಯಾಯಾಲಯದ ತೀರ್ಪಿಗೆ

ವಿರೋಧವಾಗಿ ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ನಡೆದುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಲೇಕೂಡದು ಎಂದು ಪಟ್ಟು ಹಿಡಿದರು.

ಚುನಾವಣಾಧಿಕಾರಿ ಪ್ರಸನ್ನ ಮಾತನಾಡಿ, ಚುನಾವಣಾ ಆಯೋಗ ರಾಜ್ಯ ಪೌರಾಡಳಿತ ಇಲಾಖೆ ನಿರ್ದೇಶಕರು ಮತ್ತು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿದೆ. ಚುನಾವಣೆಯನ್ನು ನಡೆಸುವ ಬಗ್ಗೆ 10 ದಿನಗಳ ಮೊದಲೇ ಸಾರ್ವಜನಿಕ ಪ್ರಕಟಣೆಯನ್ನು ನೀಡಲಾಗಿತ್ತು. ಎಲ್ಲಾ ದಿನಪತ್ರಿಕೆಗಳಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಕಾನೂನು ಬದ್ಧವಾಗಿ ಪೌರಸೇವಾ ನಿಯಮಗಳ ಅನ್ವಯ ಚುನಾವಣೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಪ್ರಕ್ರಿಯೆಯನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ನಗರಸಭೆಯ ಜೆಡಿಎಸ್‌ ಸದಸ್ಯರಾದ ಕೆ.ಸಿ. ನಾಗರಾಜು, ವಿ.ವೈ. ಪ್ರಮೋದ್‌, ಸಿ. ಶ್ರೀನಿವಾಸ್‌, ವಿಶುಕುಮಾರ್‌, ಪ್ರಶಾಂತ್‌ ಕುಮಾರ್‌, ಬಿಜೆಪಿ ಸದಸ್ಯರಾದ ಎಸ್‌.ಜಯಣ್ಣ, ವೆಂಕಟೇಶ್‌, ಹೊಯ್ಸಳ ಗೋವಿಂದ ಮೊದಲಾದವರು ತಿಳಿಸಿದರು.

Advertisement

ಚುನಾವಣೆ ನಡೆಸದಂತೆ ಲಿಖೀತವಾಗಿ ಮನವಿ ನೀಡಿದರೂ ಚುನಾವಣಾಧಿಕಾರಿಗಳು ನಮ್ಮ ಮನವಿಯನ್ನು ಪುರಸ್ಕರಿಸಿಲ್ಲ. ಉಚ್ಚನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲಾಗಿದೆ. ಇಂದಿನ ಎಲ್ಲಾ ಕಲಾಪಗಳ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದರು. ನಗರಸಭಾ ಸದಸ್ಯರಾದ ಸಾಕಮ್ಮ, ಪಾಲಮ್ಮ, ತಿಪ್ಪಮ್ಮ, ನಿರ್ಮಲಾ, ಕವಿತಾ, ನಾಗವೇಣಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next