Advertisement

ಗ್ರಾ.ಪಂ ಚುನಾವಣೆ: ವಿಜಯೋತ್ಸವದ ವೇಳೆ ವಾಹನ ಪಲ್ಟಿಯಾಗಿ ಓರ್ವ ಸಾವು

09:12 PM Dec 30, 2020 | Team Udayavani |

ಬಂಟ್ವಾಳ: ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾ.ಪಂ.ವ್ಯಾಪ್ತಿಯ ವಿಜಯೋತ್ಸವದ ವೇಳೆ ವಾಹನ ಪಲ್ಟಿಯಾಗಿ ಓರ್ವ ಮೃತಪಟ್ಟ ಘಟನೆ ಬುಧವಾರ ನೆಟ್ಲದಲ್ಲಿ ನಡೆದಿದೆ.

Advertisement

ನೆಟ್ಲ ನಿವಾಸಿ ನರೇಶ್(30) ಮೃತಪಟ್ಟ ವ್ಯಕ್ತಿ. ಘಟನೆಯಲ್ಲಿ ವಿಜೇತ ಅಭ್ಯರ್ಥಿ ದೀಪಕ್, ಜಗನ್ನಾಥ, ಗುರುವಪ್ಪ, ಸುಚಿತ್ರಾ, ನಳಿನಿ, ಯೋಗೀಶ್ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿಸಲ್ಪಟ್ಟಿದ್ದಾರೆ.

ಗೋಳ್ತಮಜಲು ಗ್ರಾ.ಪಂ.ವ್ಯಾಪ್ತಿಯ ನೆಟ್ಲ ಭಾಗದ ವಿಜಯೋತ್ಸವದ ವೇಳೆ ಘಟನೆ ನಡೆದಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next