Advertisement

ಬೆಂಗಳೂರು ನಗರ ಶೇ.99.86 ಮತದಾನ

10:19 AM Dec 11, 2021 | Team Udayavani |

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಬೆಂಗಳೂರು ನಗರ ಜಿಲ್ಲೆಯ ವಿಧಾನಪರಿತ್‌ ಕ್ಷೇತ್ರದ ಚುನಾವಣೆಗೆ ಶುಕ್ರವಾರ ನಡೆದ ಮತದಾನ ಸಂಪೂರ್ಣ ಶಾಂತಿಯುತವಾಗಿ ಮುಗಿದಿದ್ದು, ಒಟ್ಟಾರೆ ಶೇ. 99.86ರಷ್ಟು ಮತದಾನವಾಗಿದೆ. ನಗರ ಜಿಲ್ಲೆಯ 86 ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದಲೇ ಮತದಾನ ಆರಂಭವಾಗಿದ್ದು, ಕ್ಷೇತ್ರದ ವ್ಯಾಪ್ತಿಯ ಮತದಾರರಾದ ಸಂಸದರು, ಶಾಸಕರು, ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಮತ ಚಲಾಯಿಸಿದರು.

Advertisement

ಮತದಾನದ ಅಂತ್ಯಗೊಳ್ಳುವ ವೇಳೆಗೆ ಒಟ್ಟು, 2,073 ಮತದಾರರಲ್ಲಿ 2,070 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಇದರಲ್ಲಿ 991 ಪುರುಷ ಮತದಾರರು ಮತ್ತು 1,077 ಮಹಿಳಾ ಮತದಾರರು ಹಾಗೂ ಒಬ್ಬರು ಇತರೆ ಮತದಾರರು ಮತದಾನ ಮಾಡಿದ್ದಾರೆ. ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆ ದಿಲ್ಲ.

ಇದನ್ನೂ ಓದಿ: ಎಲ್ಲೆಡೆ ಕಾಂಚಾಣದ್ದೇ ಸದ್ದು; ಕಾಣಿಸದ ಅಬ್ಬರ

ಶಾಂತಿಯುತ ಮತದಾನಕ್ಕೆ ಸಹಕರಿಸಿದ ರಾಜಕೀಯ ಪಕ್ಷಗಳು, ಕಾನೂನು ಸುವ್ಯವಸ್ಥೆ ಕಾಪಾಡಿದ ಪೊಲೀಸರು, ಚುನಾವಣಾ ಪ್ರಕ್ರಿಯೆಯನ್ನು ಸೂಸೂತ್ರವಾಗಿ ನಡೆಸಿಕೊಟ್ಟ ಸಿಬ್ಬಂದಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ಅಭಿನಂದನೆ ಸಲ್ಲಿಸಿದ್ದಾರೆ.

ಡಿ.14ಕ್ಕೆ ಮತ ಎಣಿಕೆ: ಮತ ಎಣಿಕೆ ಕಾರ್ಯ ಡಿಸೆಂಬರ್‌ 14ಕ್ಕೆ ನಡೆಯಲಿದ್ದು, ನಗರದ ಪ್ಯಾಲೇಸ್‌ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಕೋರ್ಟ್‌ ಅನುಮತಿ ಇಲ್ಲದೆ ಫ‌ಲಿತಾಂಶ ಪ್ರಕಟಿಸದಂತೆ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ಆದೇಶ ನೀಡಿದೆ. ಇದನ್ನು ಪ್ರಶ್ನಿಸಿ ಚುನಾವಣಾ ಆಯೋಗ ಮೇಲ್ಮನವಿ ಸಲ್ಲಿಸಿದ್ದು, ಅದರ ವಿಚಾರಣೆ ಡಿ.13 (ಸೋಮವಾರ) ನಡೆಯಲಿದೆ.

Advertisement

ಮಹದೇವಪುರ: ಶೇ.100 ಮತದಾನ

ಮಹದೇವಪುರ: ಮಹದೇವಪುರದ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಧಾನ ಪರಿಷತ್‌ ಚುನಾ ವಣೆಯು ಶಾಂತಿಯುತವಾಗಿ ಶೇ.100ರಷ್ಟು ಮತದಾನ ನಡೆಯಿತು. 11 ಗ್ರಾಮ ಪಂಚಾಯತಿ ವ್ಯಾಪ್ತಿಯ 262 ಗ್ರಾಪಂ ಸದಸ್ಯರು ತಮ್ಮ ಮತದಾನ ಚಲಾ ಯಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತ ಮತದಾನಕ್ಕೆ ಅನುವು ಮಾಡಿ ಕೊಡಲಾಗಿತ್ತು.

ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಮತದಾನ ಸಂಜೆ 4 ಗಂಟೆಯವರೆಗೆ ನಡೆಯಿತು. ಬಿಜೆಪಿ ಪಕ್ಷದ ಸದಸ್ಯರು ಎಲ್ಲರು ಜಯ ಘೋಷದ ಮೂಲಕ ಒಗ್ಗಟ್ಟಾಗಿ ತೆರಳಿ ಮತ ಚಲಾಯಿಸಿದರು. ಕ್ಷೇತ್ರದ ನಂತರ ಕಾಂಗ್ರೆಸ್‌ ಪಕ್ಷದ ಬೆಂಬಲಿತ ಸದಸ್ಯರು ಸಹ ಗುಂಪಾಗಿ ತೆರಳಿ ಮತದಾನ ಮಾಡಿದರು. ಬಿದರಹಳ್ಳಿ, ಕಿತ್ತಗನೂರು, ಕಣ್ಣೂರು, ಮಂಡೂರು, ಅವಲಹಳ್ಳಿ, ದೊಡ್ಡಗುಬ್ಬಿ, ಕನ್ನಮಂಗಲ, ಶೀಗೆಹಳ್ಳಿ, ಹಾಲನಾಯಕನಹಳ್ಳಿ, ಕೊಡತಿ, ದೊಡ್ಡ ಬನಹಳ್ಳಿ ಗ್ರಾಪಂ ಕಾರ್ಯಾಲಯದಲ್ಲಿ ಮತದಾನ ವ್ಯವಸ್ಥೆ ಮಾಡಲಾಗಿತ್ತು.

ಬೆಂಗಳೂರು ನಗರ ಕ್ಷೇತ್ರದ ವಿಧಾನ ಪರಿ ಷತ್‌ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಯುಸೂಫ್‌ ಷರೀಫ್‌ ಕೆಜಿಎಫ್‌ ಬಾಬು ಗೆಲುವು ಸಾಧಿಸಲಿದ್ದಾರೆ ಎಂದು ಬಿದರಹಳ್ಳಿ ಗ್ರಾಪಂ ಅಧ್ಯಕ್ಷ ಬಿ.ವಿ.ವರುಣ್‌ ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರು ನಗರ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷದ ಅಭ್ಯರ್ಥಿ ಗೋಪಿನಾಥ್‌ ರೆಡ್ಡಿ ಜಯಗಳಿಸಲಿದ್ದಾರೆ ಎಂದು ಕಣ್ಣೂರು ಗ್ರಾಪಂ ಉಪಾಧ್ಯಕ್ಷ ಅಶೋಕ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next