Advertisement

ಅಧಿಕಾರಿಗಳಿಗೆ ಚುನಾವಣೆ ತರಬೇತಿ

02:38 PM Oct 22, 2020 | Suhan S |

ಚಿಕ್ಕಬಳ್ಳಾಪುರ: ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ ಸಂಬಂಧ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ರಾಜ್ಯ ಮಟ್ಟದ ಚುನಾವಣೆ ತರಬೇತುದಾರ ಡಾ.ಎಂ.ಎನ್‌.ರಘು ಸರ್ಕಾರಿ ನೌಕರರಿಗೆ ತರಬೇತಿ ನೀಡಿದರು.

Advertisement

ಈ ವೇಳೆ ಮಾತನಾಡಿದ ಅವರು, ಪದವೀಧರ ಕ್ಷೇತ್ರ ಚುನಾವಣೆ ಮುಖ್ಯವಾಗಿ ನ್ಯಾಯ ಸಮ್ಮತವಾಗಿರಬೇಕು. ಭಾರತ ಚುನಾವಣಾ ಆಯೋಗದಂತೆ ನೀತಿ ನಿಯಮ ಮುಖ್ಯ ಉದ್ದೇಶವಾಗಿದೆ. ಚುನಾವವಣೆ ಪ್ರಕ್ರಿಯೆ ನಿಸ್ಪಕ್ಷಪಾತವಾಗಿ ನಡೆಯಬೇಕು. ಮತ ದಾನ ಪ್ರಾರಂಭವಾಗುವುದರಿಂದ ಹಿಡಿದು ಮತದಾನ ಮುಗಿಯುವವರೆಗೆ ಹಂತ ಹಂತವಾಗಿ ತಮ್ಮ ಕಾರ್ಯಗಳನ್ನು ನಿರ್ವಹಿಸಬೇಕು. ಕೋವಿಡ್ ದಂತಹ ಸಮಯದಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ತರಬೇತುದಾರರಿಗೆ ಸಂಪೂರ್ಣ ಮಾಹಿತಿ ನೀಡಿದರು.

ಮತದಾನದ ಗೌಪ್ಯತೆ, ಬ್ಯಾಲೆಟ್‌ ಪೇಪರ್‌ ಕೊಡುವುದು, ಈಡೇರುವ ಮತಪತ್ರ ನಿರ್ವಹಿಸುವುದು,ಅಂಧ-ದುರ್ಬಲಮತದಾರರಿಗೆ ಮಾರ್ಗದರ್ಶನ ನೀಡುವುದು, ಮತಗಟ್ಟೆ ಏಜೆಂಟರು ಸಂಯಮದಿಂದ ವರ್ತಿಸಿ ಚುನಾವಣಾ ನೀತಿ ಪಾಲಿಸ ಬೇಕು, ಅಲ್ಲದೇ, ಮತ ದಾನ ಪೂರ್ವ ಮತ್ತು ಮತದಾನದ ನಂತರದ ಸಿದ್ಧತೆ ಮಾಡಿಕೊಳ್ಳುವ ಕುರಿತು ಮಾಹಿತಿ ನೀಡಿದರು. ಮತಗಟ್ಟೆ ಮುಂಭಾಗ ಕೋವಿಡ್‌ -19 ಮಾರ್ಗಸೂಚಿ ಪಾಲಿಸಲು ಅರಿವುಮೂಡಿಸುವುದು ಇದರ ಜತೆಗೆ ಮತದಾನ ಮಾಡಿದ ಮತದಾರರಿಗೆ ಅಳಿಸಲಾಗದ ಶಾಹಿ ಹಾಕುವ ಬಗ್ಗೆ ತಿಳಿಸಿಕೊಟ್ಟರು. ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು-ಸಿಬ್ಬಂದಿ ಹಾಗೂ ಮತದಾನ ಮಾಡಲು ಬರುವ ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಲಹೆ ನೀಡಿದರು.

ಕಲಿತ ವಿದ್ಯೆ ಬೇರೆಯವರಿಗೆ ಧಾರೆ ಎರೆಯಿರಿ :

ಚಿಕ್ಕಬಳ್ಳಾಪುರ: ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಅರಿತುಕಾರ್ಯನಿರ್ವಹಿಸುವ ಜತೆಗೆ ಗುರುಗಳ ಮಾರ್ಗದರ್ಶನದಲ್ಲಿ ಕಲಿತ ವಿದ್ಯೆಯನ್ನುಬೇರೆಯವರಿಗೆಧಾರೆಎರೆಯಬೇಕೆಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊಫೆಸರ್‌ ಜಿ.ಹೇಮಂತ್‌ಕುಮಾರ್‌ ತಿಳಿಸಿದರು.

Advertisement

ನಗರ ಹೊರವಲಯದ ನಾಗಾರ್ಜುನ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ವರ್ಚ್ಯುವಲ್‌ ಗ್ರ್ಯಾಜುಯೇಷನ್‌ಡೇ ಸಮಾರಂಭದಲ್ಲಿ ವಿವಿಧ ವಿಭಾಗಗಳಲ್ಲಿ ಎಂಜಿನಿಯರಿಂಗ್‌ ಪದವಿ ಪೂರೈಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.

ಮಾಹಿತಿ ಮತ್ತು ತಂತ್ರಜ್ಞಾನದ ಯುಗದಲ್ಲಿ ಕಲಿಕೆ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅವಕಾಶಗಳಿದ್ದು ಪದವಿ ಪಡೆದಿರುವ ವಿದ್ಯಾರ್ಥಿಗಳೂ ಕಲಿಕೆ ಮುಂದುವರಿಸಿಕೊಂಡು ಆದರ್ಶ ಸಮಾಜ ನಿರ್ಮಿಸಬೇಕೆಂದರು. ಈ ಸಂದರ್ಭದಲ್ಲಿ ನಾಗಾರ್ಜುನ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಸಿವಿಲ್‌, ಮೆಕ್ಯಾನಿಕಲ್‌, ಎಂಬಿಎ, ಕಂಪ್ಯೂಟರ್‌ ಸೈನ್ಸ್‌, ಎಲೆಕ್ಟ್ರಾನಿಕ್ಸ್‌, ಎಲೆಕ್ಟ್ರಿಕಲ್‌, ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಎಂಜಿನಿಯರಿಂಗ್‌ ಪದವಿ ಪೂರೈಸಿದ 51 ವಿದ್ಯಾರ್ಥಿಗಳಿಗೆ ಪದಕ ಮತ್ತು ಪದವಿ ಪ್ರದಾನ ಮಾಡಲಾಯಿತು. ಡೀನ್‌ ಆರ್‌ ಎನ್‌ಡಿ ಪಿ.ಹರೀಶ್‌, ಕೆ.ಕುಮಾರ್‌, ಕಾಲೇಜಿನ ಪ್ರಾಂಶುಪಾಲ ಡಾ.ಎಸ್‌.ಜಿ.ಗೋಪಾಲಕೃಷ್ಣ, ಪರೀಕ್ಷೆ ನಿಯಂತ್ರಕ ಡಾ.ಎಚ್‌.ಸಿ.ಯೋಗೀಶ, ಡಾ.ಜಿ.ಎಂ. ಬಸವರಾಜ್‌, ಡಾ.ಕೆ.ಎನ್‌.ನಾಗೇಶ್‌, ಡಾ.ಎಂ.ವಿ.ಸರ್ವೇಶ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next