Advertisement

ಶಿಕ್ಷಕರ ಸಂಘಕ್ಕೆ ಚುನಾವಣೆ; 28 ನಾಮಪತ್ರ

04:25 PM Nov 28, 2020 | Suhan S |

ಕಡೂರು: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಡಿ.6 ರಂದು ನಡೆಯಲಿರುವ ಚುನಾವಣೆಗೆ ಶುಕ್ರವಾರ 28 ನಾಮಪತ್ರ ಸಲ್ಲಿಕೆಯಾಗಿವೆ. ಕಡೂರು ಶೈಕ್ಷಣಿಕ ವಲಯದಿಂದ 14 ನಿರ್ದೇಶಕರ ಸ್ಥಾನ ನಿಗದಿಯಾಗಿದ್ದು, 2 ತಂಡಗಳು ಚುನಾವಣಾ ಸ್ಪರ್ಧೆಯಲ್ಲಿದ್ದು 2 ತಂಡಗಳಿಂದ 28 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ರೇವಣ್ಣ ತಿಳಿಸಿದರು.

Advertisement

ಎಸ್‌. ಬಸವರಾಜು ನೇತೃತ್ವದ ತಂಡದಿಂದ ಪುರುಷ ಅಭ್ಯರ್ಥಿಗಳಾಗಿ ಎಂ.ಶಾಂತಪ್ಪ, ಸಿ. ಭೈರೇಗೌಡ, ಎಂ.ಕಾಂತರಾಜ್‌, ಎಸ್‌.ಬಿ. ರಾಜಪ್ಪ, ಬಿ.ಎಸ್‌. ಗಿರೀಶ್‌, ಟಿ. ಶ್ರೀನಿವಾಸ್‌, ಟಿ. ವೆಂಕಟೇಶ್‌, ಶಬ್ಬೀರ್‌ ಸಾಬ್‌, ಕೆ.ಪಿ. ರಮೇಶ್‌ಮಹಿಳಾ ಅಭ್ಯರ್ಥಿಗಳಾದ ಕೆ.ಪುಷ್ಪಲತಾ, ಸಿ.ಗೀತಾ, ಎಚ್‌.ಎಂ. ಚಿತ್ರ, ಶೀಲಾ ಮತ್ತು ರತ್ನಮ್ಮ ಅವರು ನಾಮಪತ್ರ ಸಲ್ಲಿಸಿದ್ದಾರೆ. ಎಂ.ಬಿ.ಮಂಜುನಾಥ್‌ ನೇತೃತ್ವದ ತಂಡದಿಂದ ಎಂ.ಬಿ. ಮಂಜುನಾಥ್‌, ಎನ್‌.ಉಮಾಪತಿ, ಜಿ. ತಿಮ್ಮಪ್ಪ, ಲಿಂಗರಾಜ್‌, ಕಲ್ಲೇಶಪ್ಪ, ಸೈಯದ್‌ ಸೋಹೆನ್‌, ಕೆ.ಎಂ.ಹರೀಶ್‌, ಜೆ.ಕೆ.ತಿಪ್ಪೇಶಪ್ಪ, ಶಾಂತಮೂರ್ತಿ ಹಾಗೂ ಮಹಿಳಾ ಅಭ್ಯರ್ಥಿಗಳಾದ  ವಿದ್ಯಾ, ಶಿವಮ್ಮ, ಮೈತ್ರಿ, ನಾಗರತ್ನ ಹಾಗೂಕುಸುಮ, ಶೋಭಾ ಅವರು ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರಗಳ ಪರಿಶೀಲನೆ ಶನಿವಾರ ನಡೆಯಲಿದೆ. 29 ರ ಸಂಜೆ 4 ಗಂಟೆವರೆಗೆ ವಾಪಸ್‌ ಪಡೆಯಲು ಅವಕಾಶವಿದೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದರು.

ಬೀರೂರು : ಸಂವಿಧಾನ ದಿವಸ್ :

ಬೀರೂರು: ಭಾರತೀಯ ಸಂವಿಧಾನದ ಪಿತಾಮಹರೆಂದು ಕರೆಯುವ ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನವನ್ನು ರಚಿಸಿ ಅಂಗೀಕಾರವಾದ ಸುವರ್ಣ ದಿನವನ್ನು ಸಂವಿಧಾನ ದಿವಸ್‌ ಎಂದು ಆಚರಣೆ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾದಿಗ ಸಮಾಜ ಬೀರೂರು ಅಧ್ಯಕ್ಷ ಬಿ.ಎನ್‌. ಆನಂದ್‌ ತಿಳಿಸಿದರು.

Advertisement

ಪಟ್ಟಣದಲ್ಲಿ ಸಂವಿಧಾನ ದಿವಸ್‌ ಅಂಗವಾಗಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಆವರಣದಲ್ಲಿರುವ ಡಾ| ಬಿ.ಆರ್‌.ಅಂಬೇಡ್ಕರ್‌ ಪುತ್ಥಳಿಗೆ ಗುರುವಾರ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಸಂವಿಧಾನವು ಭಾರತವನ್ನು ಗಣತಂತ್ರ ರಾಷ್ಟ್ರವನ್ನಾಗಿಸಿ ದೇಶದ ಎಲ್ಲಾ ಪ್ರಜೆಗಳನ್ನು ಒಂದುಗೂಡಿಸುವ ಜತೆಗೆ ಅವರ ಹಕ್ಕು ಮತ್ತು ಬಾಧ್ಯತೆಗಳನ್ನು ಮೈಗೂಡಿಸಿಕೊಳ್ಳುವಂತೆ ಅವಕಾಶ ಕಲ್ಪಿಸಿದೆ ಎಂದರು. ಬೆಳ್ಳಿ ಸಂಜು, ಪ್ರತಾಪ್‌, ಮಂಜುನಾಥ್‌, ಪ್ರದೀಪ್‌, ಶಿವನಾಗ, ವಿನಯ್‌, ಭರತ್‌, ರಮೇಶ್‌, ವಸಂತ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next