Advertisement

Election Result: ಕಾಗೇರಿ ಗೆಲುವು; ಯಲ್ಲಾಪುರದಲ್ಲಿ ಮುಗಿಲು ಮುಟ್ಟಿದ ಹರ್ಷ

07:10 PM Jun 04, 2024 | Team Udayavani |

ಯಲ್ಲಾಪುರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗೆಲುವು ಆಗುತ್ತಿದ್ದಂತೆ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ಭರ್ಜರಿ ವಿಜಯೋತ್ಸವ ಆಚರಿಸಿದರು.

Advertisement

ಪಟ್ಟಣದ  ಬಸ್ ನಿಲ್ದಾಣ ವೃತ್ತದಲ್ಲಿ ಜಮಾಯಿಸಿ ಮೋದಿ ಮತ್ತು‌ಕಾಗೇರಿ ಪರ ಘೋಷಣೆ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.ಕಾಗೇರಿಯವರ ಭರ್ಜರಿ ಗೆಲುವಿನ ಅಂತರದ ಹಿನ್ನೆಲೆ ಅಭಿಮಾನಿಗಳ ಹರ್ಷ ಮುಗಿಲು ಮುಟ್ಟಿತ್ತು.

ಪ್ರಮುಖ ಬಿಜೆಪಿ ನಾಯಕರುಗಳು ಮುಖಂಡರುಗಳು ಮತ ಎಣಿಕೆ ಕೇಂದ್ರದಲ್ಲಿದ್ದರೂ ಇಲ್ಲಿದ್ದ ಮುಖಂಡರು ಹಲವರು ಸೇರಿ ನಗರದಲ್ಲಿ ಮೆರವಣಿಗೆ ನಡೆಸಿದರು.

ಪ್ರಮುಖರಾದ ಗೋಪಾಲಕೃಷ್ಣ ಗಾಂವ್ಕಾರ, ಶೀನು ಗಾಂವ್ಕಾರ್, ರಾಮು ನಾಯ್ಕ್, ಸೋಮು ನಾಯ್ಕ್, ಶ್ಯಾಮಿಲಿ ಪಾಠಣಕರ್, ನಮೀತಾ ಬೀಡಿಕರ್, ಕಲ್ಪನಾ ಗಜಾನನ ನಾಯ್ಕ್, ಬದ್ದಿ ಸೇರಿದಂತೆ ನೂರಾರು ಕಾರ್ಯಕರ್ತರು ಅಭಿಮಾನಿಗಳು‌ ಪಾಲ್ಗೊಂಡಿದ್ದರು.

ಜಿಟಿ ಜಿಟಿ ಮಳೆ ಮಳೆಯ ಮಧ್ಯೆಯೂ ಡಿಜೆಯೊಂದಿಗೆ ಜೈಘೋಷ ಹಾಕುತ್ತ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಗಮನಸೆಳೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next