Advertisement
ಮತ ಎಣಿಕೆ ಪ್ರಕ್ರಿಯೆ ಮಧ್ಯಾಹ್ನ ಒಂದು ಗಂಟೆಯೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದರೂ ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಪ್ರತಿ ವಿಧಾನಸಭಾ ಕ್ಷೇತ್ರದ ಐದು ಮತಕೇಂದ್ರಗಳ ವಿವಿ ಪ್ಯಾಟ್ ಪೇಪರ್ ಸ್ಲಿಪ್‌ಗ್ಳ ಜತೆ ಇವಿಎಂ ಮತಗಳ ಪರಿಶೀಲನೆ ಮಾಡಿದ ಬಳಿಕವೇ ಅಧಿಕೃತವಾಗಿ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಪ್ರಕ್ರಿಯೆಗೆ ಕನಿಷ್ಠ 3ರಿಂದ 4 ತಾಸು ಹಿಡಿಯುವ ಸಾಧ್ಯತೆಯಿದ್ದು, ಸಂಜೆಯ ಹೊತ್ತಿಗೆ ಅಧಿಕೃತ ಫಲಿತಾಂಶ ಘೋಷಣೆ ಆಗುವ ಸಾಧ್ಯತೆಯಿದೆ.
Related Articles
Advertisement
ತುಮಕೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಎರಡು ಕೇಂದ್ರ (ತುಮಕೂರು ಯೂನಿವರ್ಸಿಟಿ ಸೈನ್ಸ್ ಕಾಲೇಜ್, ಸರಕಾರಿ ಪಾಲಿಟೆಕ್ನಿಕ್ ಕಾಲೇಜ್)ಗಳಲ್ಲಿ ನಡೆಯಲಿದೆ. ಉಳಿದಂತೆ ಎಲ್ಲ ಕ್ಷೇತ್ರಗಳ ಮತ ಎಣಿಕೆ ಒಂದೇ ಕೇಂದ್ರದಲ್ಲಿ ನಡೆಯಲಿದೆ.
ಒಟ್ಟು 3,500 ಮತ ಎಣಿಕೆ ಟೇಬಲ್ ಇರಲಿದ್ದು, ಪ್ರತಿ ಟೇಬಲ್‌ಗೆ ಮತ ಎಣಿಕೆ ಸಹಾಯಕ, ಮತ ಎಣಿಕೆ ಮೇಲ್ವಿಚಾರಕ ಮತ್ತು ಒಬ್ಬ ಮೈಕ್ರೋ ಅಬ್ಸರ್ವರ್ ಇರಲಿದ್ದಾರೆ. ಸಹಾಯಕ ಚುನಾವಣಾಧಿಕಾರಿ ಮತ ಎಣಿಕೆ ಟೇಬಲ್ ಮೇಲೆ ನಿಗಾ ಇಡಲಿದ್ದಾರೆ.
ಈ ಹಿಂದೆ ಸುತ್ತು ಆಧಾರದಲ್ಲಿ ಮತದ ದತ್ತಾಂಶವನ್ನು ಅಪ್‌ಡೇಟ್ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಮೊದಲ ಬಾರಿಗೆ ಟೇಬಲ್ ವೈಸ್ ಮತದ ಮಾಹಿತಿಯನ್ನು ಅಪ್‌ಡೇಟ್ ಮಾಡಲಾಗುತ್ತಿದೆ. ಪ್ರತಿ ಟೇಬಲ್‌ನ ಮೇಲೆ ಸಿಸಿಟಿವಿ ಕೆಮರಾವೊಂದು ಕಣ್ಗಾವಲು ಇಡಲಿದೆ.
ಈ ಮಧ್ಯೆ ಸುರಪುರ ವಿಧಾನ ಸಭಾ ಕ್ಷೇತ್ರಕ್ಕೆ ನಡೆದಿರುವ ಉಪಚುನಾವಣೆಯ ಫಲಿತಾಂಶವೂ ಮಂಗಳವಾರವೇ ಪ್ರಕಟಗೊಳ್ಳಲಿದೆ.
ಇವಿಎಂ-ವಿವಿಪ್ಯಾಟ್ ತಾಳೆ ಹೇಗೆ?ರಾಜ್ಯದ 28 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 224 ವಿಧಾನಸಭಾ ಕ್ಷೇತ್ರಗಳಿದ್ದು, 58,834 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಈ 224 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5ರಂತೆ 28 ಕ್ಷೇತ್ರಗಳಲ್ಲಿ ತಲಾ 40ರಂತೆ ಒಟ್ಟು 1,120 ಮತಗಟ್ಟೆಗಳಲ್ಲಿ ಇವಿಎಂ-ವಿವಿಪ್ಯಾಟ್ ಮತ ತಾಳೆ ಮಾಡಬೇಕಾಗಿದೆ. ಇದಕ್ಕಾಗಿ ಹೆಚ್ಚುವರಿ 5 ಸಾವಿರ ಸಿಬಂದಿ ಮತ್ತು 3 ತಾಸು ಹೆಚ್ಚುವರಿ ಸಮಯ ಬೇಕಾಗುತ್ತದೆ. ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಕನಿಷ್ಠ 40 ಮತಗಟ್ಟೆಗಳ ಇವಿಎಂ-ವಿವಿಪ್ಯಾಟ್ ತಾಳೆ ಹಾಕಬೇಕಾಗುತ್ತದೆ. ಒಂದು ಇವಿಎಂ-ವಿವಿಪ್ಯಾಟ್ ತಾಳೆ ಹಾಕಲು ಕನಿಷ್ಠ 45 ನಿಮಿಷ ಬೇಕಾಗುತ್ತದೆ. ಅದರಂತೆ ಎಲ್ಲ 5 ಮತಗಟ್ಟೆಗಳ ಇವಿಎಂ-ವಿವಿಪ್ಯಾಟ್ ತಾಳೆ ಹಾಕಲು ಕನಿಷ್ಠ 3ರಿಂದ 4 ತಾಸು ಸಮಯ ಹಿಡಿಯುತ್ತದೆ. ಮತ ಎಣಿಕೆಗೆ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ. ಸಿಬಂದಿಗೆ ಮತ ಎಣಿಕೆಯ ತರಬೇತಿ ನೀಡಿ ಮತ ಎಣಿಕೆ ಕೇಂದ್ರಗಳಿಗೆ ನಿಯೋಜಿಸಲಾಗಿದೆ. ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ.
– ಮನೋಜ್ ಕುಮಾರ್ ಮೀನಾ, ರಾಜ್ಯ ಮುಖ್ಯ ಚುನಾವಣಾಧಿಕಾರಿ