Advertisement

ಮತದಾರರ ಪಟ್ಟಿ ಅದಲು ಬದಲು: ದಾವಣಗೆರೆಯ ಎರಡು ವಾರ್ಡ್ ಗಳ ಮತದಾನ ಮುಂದೂಡಿಕೆ

02:29 PM Dec 22, 2020 | keerthan |

ದಾವಣಗೆರೆ: ಮತದಾರರ ಪಟ್ಟಿ ಅದಲು ಬದಲಾಗಿ ಗೊಂದಲ ಉಂಟಾದ ಕಾರಣ ದಾವಣಗೆರೆಯಲ್ಲಿ ಎರಡು ವಾರ್ಡ್ ಗಳ ಮತದಾನ ಮುಂದೂಡಿಕೆ ಮಾಡಲಾಗಿದೆ.

Advertisement

ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾಮದ ಹೆಬ್ಬಾಳು 1 ಮತ್ತು ಹೆಬ್ಬಾಳು 2 ಎರಡು ಕ್ಷೇತ್ರಗಳ ಮತದಾನ ಮುಂದೂಡಿ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದರು.

ಹೆಬ್ಬಾಳು-1 ಮತ್ತು 2 ವಾರ್ಡ್‌ಗಳ ಆರು ಕ್ಷೇತ್ರಗಳಿಗೆ ಹನ್ನರೆಡು ಮಂದಿ ಸ್ಪರ್ಧಿಸಿದ್ದರು. ಹೆಬ್ಬಾಳು ವಾರ್ಡ್ 1ರಲ್ಲಿ (ಮತಗಟ್ಟೆ 108) 807 ಮತದಾರರಿದ್ದಾರೆ. ವಾರ್ಡ್ 2ರಲ್ಲಿ (ಮತಗಟ್ಟೆ 109) 917 ಮತದಾರರಿದ್ದಾರೆ.

ಇದನ್ನೂ ಓದಿ:ಮತಗಟ್ಟೆ ಆವರಣದಲ್ಲಿ ಬಿಸಿಲಿಗೆ ಕುಳಿತು ಚಳಿ ಕಾಯಿಸಿದ ಮತದಾರರು!

ಜಿಲ್ಲೆಯಲ್ಲಿ 88 ಗ್ರಾಪಂಗಳಿಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಇಂದು ಬೆಳಗ್ಗೆ 9 ಗಂಟೆ ವೇಳೆ ಶೇ.5.85ರಷ್ಟು ಮತದಾನ ನಡೆದಿತ್ತು.‌ 11 ಗಂಟೆಗೆ ಶೇ.18.38 ಮತದಾನವಾಗಿತ್ತು. ಮಧ್ಯಾಹ್ನ 1ಗಂಟೆಗೆ  ಶೇ. 41.47 ಮತದಾನವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next