Advertisement

Election ಮೋದಿ ವಿರುದ್ಧವಲ್ಲ ಮನುವಾದದ ವಿರುದ್ಧ: ಖರ್ಗೆ

12:39 AM Apr 15, 2024 | Team Udayavani |

ಮುಂಬಯಿ: ಈ ಲೋಕಸಭೆ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಡೆಸುತ್ತಿರುವ ಹೋರಾಟವಲ್ಲ ಬದಲಿಗೆ ಆಡಳಿತಾರೂಢ ಸರಕಾರ ಅನುಸರಿಸುತ್ತಿರುವ ಮನುವಾದಿ ಸಿದ್ಧಾಂತದ ವಿರುದ್ಧದ ಹೋರಾಟವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Advertisement

ಮಹಾರಾಷ್ಟ್ರದ ನಾಗಪುರ ಲೋಕಸಭೆ ಕ್ಷೇತ್ರದಲ್ಲಿ ನಡೆದ ಕಾಂಗ್ರೆಸ್‌ ಚುನಾವಣೆ ಪ್ರಚಾರ ರ್ಯಾಲಿಯಲ್ಲಿ ಅಲ್ಲಿನ ಅಭ್ಯರ್ಥಿ ವಿಕಾಸ್‌ ಠಾಕ್ರೆ ಪರವಾಗಿ ಖರ್ಗೆ ಪ್ರಚಾರ ಮಾಡಿದ್ದಾರೆ. ಇದೇ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಕಣಕ್ಕಿಳಿದಿದ್ದಾರೆ. ಪ್ರಚಾರದ ವೇಳೆ ಮಾತನಾಡಿದ ಖರ್ಗೆ, ವಿಕಾಸ್‌ ಠಾಕ್ರೆ ದೊಡ್ಡ ವರ್ಚಸ್ಸಿರುವ ದೊಡ್ಡ ವ್ಯಕ್ತಿಯಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತ. ಈ ಚುನಾವಣೆ ಮೋದಿ ಅಥವಾ ಗಡ್ಕರಿ ವಿರುದ್ಧವಲ್ಲ, ಮನುವಾದವನ್ನು ಸೋಲಿಸುವುದಕ್ಕಾಗಿ ನಡೆಯುತ್ತಿದೆ. ವಿಕಾಸ್‌ ಅವರನ್ನು ಈ ಮನುವಾದ ಸಿದ್ಧಾಂತವನ್ನು ಸೋಲಿಸಲು ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.

ಅಲ್ಲದೇ, ನಮ್ಮ ಪಕ್ಷವು 140 ಕೋಟಿ ಜನರಿಗೆ ತಮ್ಮ ಹಕ್ಕುಗಳನ್ನು ನೀಡಿರುವ ಸಂವಿಧಾನವನ್ನು ಉಳಿಸಲು ಅದರ ರಕ್ಷಣೆಗಾಗಿ ಹೋರಾಡುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next