Advertisement
ಈ ಹಿಂದೆ ಆಯ್ಕೆ ಆಗಿದ್ದ ಷಣ್ಮುಖ ಗೌಡ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಈಗ ಚುನಾಚಣೆ ನಡೆಯಲಿದೆ. ಸಮ ಮತಗಳನ್ನು ಪಡೆದು ಚೀಟಿ ಎತ್ತಿದಾಗ ಸೋಲುಂಡ ಷಣ್ಮುಖ ಗೌಡರ ಒಂದು ಕಾಲದ ಪಟ್ಟಾ ಶಿಷ್ಯನಾಗಿದ್ದ ವಿವೇಕ ಭಟ್ಟ ಗಡಿಹಿತ್ಲುವಿಗೆ ನೇರವಾಗಿ ಸ್ಪರ್ಧೆ ಒಡ್ಡಿದೆ.
Related Articles
Advertisement
ತಾಲೂಕು ಪಂಚಾಯ್ತಿ ಜನ ಪ್ರತಿನಿಧಿ ಆಗಿದ್ದ ವಿವೇಕ ಹಾಗೂ ಕಾಳುಮೆಣಸು ವಹಿವಾಟಿನಲ್ಲಿ ಹೆಸರು ಮಾಡಿದ ರಾಘವೇಂದ್ರ ಶಾಸ್ತ್ರೀ ಈಗ ಬಲವಾಗಿ ಪೈಪೋಟಿ ನೀಡುತ್ತಿದ್ದಾರೆ.ನೆಲಮಾವ ಸೊಸೈಟಿಯ ಗಣಪತಿ ಭಟ್ಟ, ಬಿದ್ರಕಾನ್ ಸೊಸೈಟಿಯ ಸುಬ್ರಹ್ಮಣ್ಯ ಭಟ್ಟ, ಹೀನಗಾರ ಸೊಸೈಟಿಯ ಅಶೋಕ ಹೆಗಡೆ ಆಕಾಂಕ್ಷಿತರಾಗಿ ನಾಮ ಪತ್ರ ಸಲ್ಲಿಸಿ ವಾಪಸ್ ಪಡೆದಿದ್ದರು. ಅವರು ವಾಪಸ್ ಪಡೆದದ್ದು ಯಾರುಲಿಗೆ ಹಿತ ಎಂಬುದೂ ಕಾದು ನೋಡಬೇಕಾಗಿದೆ. ಈ ಮಧ್ಯೆ ಪ್ರಮುಖ ನಾಯಕರಲ್ಲಿ ಇಬ್ಬರು ಯಾರನ್ನು ಬೆಂಬಲಿಸುವರು ಎಂಬುದೂ ಪ್ರಶ್ನೆಯಾಗಿದೆ. ಅವರ ಬೆಂಬಲವೂ ಸೊಸೈಟಿ ಪ್ರತಿನಿಧಿಗಳ ನಡುವೆ ಎಷ್ಟು ಪರಿಣಾಮ ಬೀರುತ್ತವೆ ಎಂಬುದೂ ಮುಖ್ಯವಾಗಿದೆ.