Advertisement

ಮೊಳಕಾಲ್ಮೂರು: 17 ಮತಗಟ್ಟೆಗಳಲ್ಲಿ ಮತದಾನ

04:31 PM Dec 10, 2021 | Team Udayavani |

ಮೊಳಕಾಲ್ಮೂರು: ವಿಧಾನಪರಿಷತ್‌ ಚುನಾವಣೆಗೆ ಪಟ್ಟಣಪಂಚಾಯಿತಿ ಸೇರಿದಂತೆ ತಾಲೂಕಿನ16 ಗ್ರಾಮ ಪಂಚಾಯಿತಿಗಳಮತಗಟ್ಟೆ ಸ್ಥಾಪಿಸಲಾಗಿದೆ. ಒಟ್ಟು17 ಮತಗಟ್ಟೆಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದುತಹಶೀಲ್ದಾರ್‌ ಟಿ. ಸುರೇಶ್‌ಕುಮಾರ್‌ತಿಳಿಸಿದರು.

Advertisement

ತಾಲೂಕಿನ 16 ಗ್ರಾಪಂಗಳಲ್ಲಿ144 ಪುರುಷ ಹಾಗೂ 178ಮಹಿಳೆಯರು ಸೇರಿದಂತೆ ಒಟ್ಟು322 ಮತದಾರರಿದ್ದಾರೆ. ಪಟ್ಟಣಪಂಚಾಯಿತಿಯಲ್ಲಿ 10 ಪುರುಷರು10 ಮಹಿಳೆಯರು ಸೇರಿ 20ಮತದಾರರು ಮತ ಚಲಾವಣೆಯಹಕ್ಕು ಹೊಂದಿದ್ದಾರೆ. ಹಾಗೆಯೇಕ್ಷೇತ್ರದ ಶಾಸಕರ ಮತ ಸೇರಿದರೆಒಟ್ಟು 342 ಮತಗಳಾಗುತ್ತವೆ.

ಪ್ರತಿಮತಗಟ್ಟೆಗೆ ಪಿಆರ್‌ಒ, ಎಪಿಆರ್‌ಒ,ಪೊಲೀಸ್‌ ಸಿಬ್ಬಂದಿ, ಮೈಕ್ರೋಅಬ್ಸರ್‌ವರ್‌ ಸೇರಿದಂತೆ ಒಟ್ಟು 85ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.ಮತಗಟ್ಟೆಗಳಿಗೆ ಸ್ಯಾನಿಟೈಸ್‌ಮಾಡಿಸಲಾಗಿದ್ದು, ಮತಗಟ್ಟೆ ಸಿಬ್ಬಂದಿಹಾಗೂ ಮತದಾನ ಮಾಡುವವರಿಗೆಮಾಸ್ಕ್ ಸೌಲಭ್ಯ ಕಲ್ಪಿಸಲಾಗಿದೆ. ಕೊರೊನಾ ಲಕ್ಷಣವಿರುವಮತದಾರರು ಕಂಡು ಬಂದಲ್ಲಿ ಪ್ರತಿಮತಗಟ್ಟೆಗೆ 3 ಪಿಪಿಇ ಕಿಟ್‌ಗಳನ್ನು ನೀಡಲಾಗುವುದು.

ಪಿಪಿಇ ಕಿಟ್‌ಧರಿಸಿ ಮಧ್ಯಾಹ್ನ 3 ಗಂಟೆ ನಂತರಮತದಾನ ಮಾಡಬಹುದು. ಪಟ್ಟಣಪಂಚಾಯಿತಿ, ತುಮಕೂರ‌್ಲಹಳ್ಳಿ,ರಾಂಪುರ, ನಾಗಸಮುದ್ರ, ಹಾನಗಲ್‌, ತಮ್ಮೇನಹಳ್ಳಿ, ಕೊಂಡ್ಲಹಳ್ಳಿ, ಬಿ.ಜಿ.ಕೆರೆ ಸೇರಿದಂತೆ 8 ಮತಗಟ್ಟೆಗಳನ್ನುಸೂಕ್ಷ್ಮ ಮತ್ತು 9 ಸಾಮಾನ್ಯಮತಗಟ್ಟೆಗಳೆಂದು ಗುರುತಿಸಲಾಗಿದೆ.ಶಾಂತಿಯುತ ಮತದಾನಕ್ಕೆ ಸಕಲಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದುಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next