ಗದಗ: ಧಾರವಾಡ, ಹಾವೇರಿ ಮತ್ತು ಗದಗಕ್ಷೇತ್ರಗಳನ್ನು ಒಳಗೊಂಡಂತೆ ಸ್ಥಳೀಯ ಸಂಸ್ಥೆಗಳಿಂದವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳಆಯ್ಕೆ ಕುರಿತು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ರವಿವಾರ ಸಭೆ ನಡೆಯಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅಧ್ಯಕ್ಷತೆಯಲ್ಲಿರವಿವಾರ ಸಂಜೆ 5 ಗಂಟೆಗೆ ಆರಂಭಗೊಂಡಸಭೆ, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲನಡೆಯಿತು.ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಪಿಸಿಸಿಅಧ್ಯಕ್ಷ ಡಿ.ಕೆ. ಶಿವಕುಮಾರ, ಧಾರವಾಡ, ಹಾವೇರಿಮತ್ತು ಗದಗ ಜಿಲ್ಲೆಗಳು ಒಳಗೊಂಡಂತೆ ಮೇಲ್ಮನೆಯ ಸ್ಥಳೀಯ ಸಂಸ್ಥೆಗಳ ಎರಡು ಸ್ಥಾನಗಳಿಗೆ ಅಭ್ಯರ್ಥಿಆಕಾಂಕ್ಷಿಗಳು ಪಕ್ಷದ ಜಿಲ್ಲಾಧ್ಯಕ್ಷರ ಮೂಲಕ ಅಥವಾನೇರವಾಗಿ ಕೆಪಿಸಿಸಿ ಕಚೇರಿಗೆ ತಲುಪಿಸಬೇಕು.
ಆನಂತರಮತ್ತೂಮ್ಮೆ ಆಯಾ ಜಿಲ್ಲೆಗಳ ನಾಯಕರೊಂದಿಗೆ ಸಭೆಸೇರಿ, ಅಭ್ಯರ್ಥಿಗಳ ಆಕಾಂಕ್ಷಿಗಳ ಬಗ್ಗೆ ಚರ್ಚಿಸಿ,ಪಕ್ಷದ ಹೈಕಮಾಂಡ್ ಸಲ್ಲಿಸಲಾಗುವುದು. ವರಿಷ್ಠರತೀರ್ಮಾನವೇ ಅಂತಿಮವಾಗಿರುತ್ತದೆ.
ಅದಕ್ಕೆಎಲ್ಲರೂ ಬದ್ಧರಾಗಿಬೇಕು ಎಂದು ಸೂಚಿಸಿದರು.ಅಭ್ಯರ್ಥಿ ಯಾರೇ ಆಗಿದ್ದರೂ, ಕಾಂಗ್ರೆಸ್ ಗೆಲುವುಮುಖ್ಯವಾಗಬೇಕು. ಈ ನಿಟ್ಟಿನಲ್ಲಿ ಟಿಕೆಟ್ ಯಾರಿಗೆದೊರೆತರೂ, ಎಲ್ಲರೂ ಒಮ್ಮತದಿಂದ ಚುನಾವಣೆಎದುರಿಸಲು ಈಗಿನಿಂದಲೇ ಸನ್ನದ್ಧರಾಗಬೇಕುಎಂದು ತಿಳಿಸಿದರು.ಇದೇ ವೇಳೆ ಬರುವ ಜಿಪಂ-ತಾಪಂ ಚುನಾವಣೆಸಿದ್ಧತೆ, ಪಕ್ಷ ಸಂಘಟನೆ ಹಾಗೂ ಸ್ಥಳೀಯ ರಾಜಕೀಯವಿದ್ಯಮಾನಗಳ ಕುರಿತು ಚರ್ಚಿಸಲಾಯಿತು. ಆದರೆ,ಚುನಾವಣೆ ಅಭ್ಯರ್ಥಿ ಆಕಾಂಕ್ಷಿಗಳ ಬಗ್ಗೆ ಯಾವುದೇಚರ್ಚೆಗಳು ನಡೆದಿಲ್ಲ ಎಂದು ಅ ಧಿಕೃತ ಮೂಲಗಳುತಿಳಿಸಿವೆ.
ಸಭೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದನಾಯಕ ಎಸ್.ಆರ್. ಪಾಟೀಲ, ಪಕ್ಷದ ಹಿರಿಯನಾಯಕ ಎಚ್.ಕೆ. ಪಾಟೀಲ, ಪಕ್ಷದ ಕಾರ್ಯಾಧ್ಯಕ್ಷರಾದಸಲೀಂ ಅಹ್ಮದ್, ಸತೀಶ್ ಜಾರಕೊಹೊಳಿ, ಈಶ್ವರಖಂಡ್ರೆ, ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ, ಈಭಾಗದ ಮಾಜಿ ಸಂಸದ ಐ.ಜಿ. ಸನದಿ, ಮಾಜಿಸಚಿವರಾದ ಬಸವರಾಜ ಶಿವಣ್ಣವರ, ಬಿ.ಆರ್.ಯಾವಗಲ್, ಸಂತೋಷ ಲಾಡ್, ಮಾಜಿ ಶಾಸಕರಾದಜಿ.ಎಸ್. ಪಾಟೀಲ, ಜಿ.ಎಸ್. ಗಡ್ಡದೇವರಮಠ,ರಾಮಕೃಷ್ಣ ದೊಡ್ಡಮನಿ, ಸಂತೋಷ ಲಾಡ್ ಮೂರುಜಿಲ್ಲೆಗಳ ಪ್ರಮುಖರು ಪಾಲ್ಗೊಂಡಿದ್ದರು.