ಆರ್. ಧ್ರುವನಾರಾಯಣ, ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ
1999ರ ಚುನಾವಣೆಯಲ್ಲಿ ಸಂಯುಕ್ತ ಜನತಾ ದಳ ಮತ್ತು ಬಿಜೆಪಿ ಸ್ಥಾನ ಹೊಂದಾಣಿಕೆ ಮಾಡಿ ಕೊಂಡಿದ್ದವು. ಸಂತೆಮರಹಳ್ಳಿ ಕ್ಷೇತ್ರಕ್ಕೆ ಸಂಯುಕ್ತ ದಳದಿಂದ ಎ.ಆರ್. ಕೃಷ್ಣ ಮೂರ್ತಿ ಅಭ್ಯರ್ಥಿಯಾಗಿದ್ದರು. ಸಂಯುಕ್ತ ದಳ, ಬಿಜೆಪಿ ಒಡಂಬಡಿಕೆ ಇತ್ತು. ಆದರೂ ಈ ಕೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾನು ಟಿಕೆಟ್ ಪಡೆದಿದ್ದೆ. ತೀವ್ರ ಪೈಪೋಟಿಯಿದ್ದ ಆ ಚುನಾವಣೆಯಲ್ಲಿ ಎ.ಆರ್. ಕೃಷ್ಣಮೂರ್ತಿ 33,977 ಮತಗಳನ್ನು ಪಡೆದು ಜಯಶಾಲಿಯಾದರು. ನಾನು 28,071 ಮತಗಳನ್ನು ಪಡೆದಿದ್ದೆ.
ಅದೊಂದು ಮರೆಯಲಾಗದ ಅನುಭವ. ಆಗ ಚುನಾವಣೆಗಳಲ್ಲಿ ಇಷ್ಟೊಂದು ವೆಚ್ಚ ಇರಲಿಲ್ಲ. ಬಹಳ ಕಡಿಮೆ ಹಣದಲ್ಲಿ ಚುನಾವಣೆ ಮುಗಿಯುತ್ತಿತ್ತು. ಪ್ರಚಾ ರದ ಭರಾಟೆ ಜೋರಾಗಿತ್ತು. ರಾತ್ರಿಯೆಲ್ಲ ಪ್ರಚಾರ ಮಾಡಬ ಹುದಿತ್ತು. ಗ್ರಾಮಗಳಲ್ಲಿ, ಬಂಟಿಂಗ್ಸ್ ಬ್ಯಾನರ್‌ಗಳು, ಪಾಂಪ್ಲೆಟ್‌ಗಳು ರಾರಾಜಿಸುತ್ತಿದ್ದವು. ಕಾರುಗಳಲ್ಲಿ ಮೈಕ್ ಕಟ್ಟಿಕೊಂಡು ಪ್ರಚಾರ ನಡೆಸುತ್ತಿದ್ದರು. ಚುನಾವಣೆ ಎಂದರೆ ಹಬ್ಬದ ವಾತಾ ವರಣ ಇರುತ್ತಿತ್ತು.
ನಾವು ಸಮಯದ ಪರಿವೆ ಇಲ್ಲದೇ, ಗ್ರಾಮಗಳಿಗೆ ತೆರಳಿ ಪ್ರಚಾರ ನಡೆಸುತ್ತಿದ್ದೆವು. ಆಗ ಟಿವಿ ಚಾನೆಲ್‌ಗಳು ಹೆಚ್ಚು ಇರಲಿಲ್ಲ. ಅಭ್ಯರ್ಥಿಗಳನ್ನು ಜನರು ಹತ್ತಿರದಿಂದ ನೋಡಿ ರುತ್ತಿರಲಿಲ್ಲ. ಹಾಗಾಗಿ ಅಭ್ಯ ರ್ಥಿ ಗಳನ್ನು ನೋಡುವ ಸಲುವಾಗಿಯೇ ಕುತೂಹಲದಿಂದ ನೆರೆಯುತ್ತಿದ್ದರು. ಗ್ರಾಮಗಳಿಗೆ ಪ್ರಚಾರದ ಕಾರುಗಳು ಹೋದಾಗ ಬಾಲಕರು ಕರಪತ್ರಗಳನ್ನು ಪಡೆಯಲು ಕಾರಿನ ಹಿಂದೆ ಓಡಿಬರುತ್ತಿದ್ದರು.
ಆಗ ಜನಸಾಮಾನ್ಯರಿಗೆ ರಾಜಕೀಯವಾಗಿ ಹೆಚ್ಚು ತಿಳಿದಿರುತ್ತಿರಲಿಲ್ಲ. ಗ್ರಾಮದಲ್ಲಿ ರಾಜಕೀಯದ ಹಿನ್ನೆಲೆಯಿದ್ದ ಮುಖಂಡರಿಗೆ ಮಾತ್ರ ರಾಜಕೀಯ ಆಸಕ್ತಿ ಇತ್ತು. ಈಗ ಸುದ್ದಿ ಮಾಧ್ಯಮಗಳು, ಮೊಬೈಲ್‌ಗಳು ಸಾಮಾಜಿಕ ಜಾಲ ತಾಣಗಳಿಂದಾಗಿ ಸಾಮಾನ್ಯ ಜನರಲ್ಲೂ ರಾಜಕೀಯ ಆಸಕ್ತಿ ಹೆಚ್ಚಾಗಿದೆ.
ಚುನಾಯಿತ ಪ್ರತಿನಿಧಿಗಳಿಂದ ಜನರು ಹೆಚ್ಚು ನಿರೀಕ್ಷೆ ಮಾಡುತ್ತಿರಲಿಲ್ಲ. ಈಗ ಜನರಿಗೆ ಬಹಳ ತಿಳಿವಳಿಕೆ ಬಂದಿದೆ. ಗ್ರಾಮಗಳಿಗೆ ಹೋದಾಗ ರಾಜಕಾರಣಿಗಳನ್ನು ಪ್ರಶ್ನೆ ಮಾಡು ತ್ತಾರೆ. ಗ್ರಾಮಗಳಿಗೆ ಆಗಬೇಕಾದ ಕೆಲಸಗಳನ್ನು ಕೇಳುವಷ್ಟು ಪ್ರಬುದ್ಧರಾಗಿದ್ದಾರೆ. ಮತ ಕೇಳಲು ಊರುಗಳಿಗೆ ಹೋದಾಗ, ಕೆಲಸ ಮಾಡದಿದ್ದ ರಾಜಕಾರಣಿಗಳನ್ನು ಜನರು ಪ್ರಶ್ನೆ ಮಾಡಿ ಹಿಂದಕ್ಕೆ ಕಳುಹಿಸಿದ ನಿದರ್ಶನಗಳೂ ಇವೆ.
ಬನಶಂಕರ ಆರಾಧ್ಯ