Advertisement

ಪದವೀಧರರ ಸೇವೆಗೆ ಮತ್ತೂಮ್ಮೆ ಅವಕಾಶ ನೀಡಿ

03:25 PM Oct 18, 2020 | Suhan S |

ರೋಣ: ಖಾಸಗಿ ಶಿಕ್ಷಣ ಸಂಸ್ಥೆಗಳನೌಕರರ ಸಮಸ್ಯೆಗಳಿಗೆ ಹಾಗೂ ಪದವೀಧರರ ನೋವಿಗೆ ಸ್ಪಂದಿಸುವುದರ ಜೊತೆಗೆ ಅತಿಥಿ ಉಪನ್ಯಾಸಕರ ವೇತನ ಹೆಚ್ಚಿಸಲುಶ್ರಮಿಸಿದ್ದೇನೆ. ಹೀಗಾಗಿ ಪದವೀಧರರಸೇವೆಗೆ ಮತ್ತೂಮ್ಮೆ ನನಗೆ ಮತನೀಡಿ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಎಸ್‌.ವಿ. ಸಂಕನೂರ ಹೇಳಿದರು.

Advertisement

ಪಶ್ಚಿಮ ಪದವೀಧರರ ಮತಕ್ಷೇತ್ರದಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಕನಕದಾಸ ಶಿಕ್ಷಣ ಸಮಿತಿಯ ಶರಣಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿಮತದಾರರಲ್ಲಿ ಮತಯಾಚಿಸಿ ಅವರು ಮಾತನಾಡಿದರು. ಪಶ್ಚಿಮ ಪದವೀಧರರು ನೀಡಿದ ಅವಕಾಶ ಸದ್ಬಳಕೆ ಮಾಡಿಕೊಂಡು ಸ್ಕಿಲ್‌ ಇಂಡಿಯಾ ಅಡಿಯಲ್ಲಿ 1300 ತರಬೇತಿ ಕೇಂದ್ರ ಆರಂಭಿಸುವುದರ ಜೊತೆಗೆ ಸದನದಲ್ಲಿ ಪದವೀಧರರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಅವರ ನೋವಿಗೆ ಸ್ಪಂದಿಸಿದ್ದೇನೆ. ಬಹು ವರ್ಷಗಳ ಬೇಡಿಕೆಯಾಗಿದ್ದ ಅತಿಥಿ ಉಪನ್ಯಾಸಕರ ವೇತನ ಹೆಚ್ಚಿಸಲು,ಜ್ಯೋತಿ ಸಂಜೀವಿನಿ ಯೋಜನೆಯನ್ನುಖಾಸಗಿ ಶಿಕ್ಷಕರಿಗೆ ನೀಡುಲು ಒತ್ತಾಯಿಸಿದ್ದೇನೆ.

ಹೀಗಾಗಿ ಮುಂದಿನ ದಿನಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಜಾರಿಗೆ ತರಲು ಹಾಗೂ ಬೋಧಕೇತರ ವರ್ಗಗಳ ಸಮಸ್ಯೆಗಳಿಗೆ ಶೀಘ್ರದಲ್ಲಿ ಪರಿಹಾರದ ಜೊತೆಗೆ ಎಲ್ಲ ಇಲಾಖೆಪದವೀಧರರಿಗೆ ಮೂಲಕ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುತ್ತಣ್ಣ ಲಿಂಗನಗೌಡ್ರ ಮಾತನಾಡಿ, ಪಶ್ಚಿಮ ಪದವೀಧರರು ಹಿಂದಿನ ಚುನಾವಣೆಯಲ್ಲಿ ನೀಡಿದ ಮತಕ್ಕೆ ನ್ಯಾಯ ಒದಗಿಸುವ ದಿಸೆಯಲ್ಲಿ ಎಸ್‌.ವಿ. ಸಂಕನೂರ ಕೆಲಸ ಮಾಡಿದ್ದಾರೆ. ಪದವೀಧರರ ಧ್ವನಿಯಾಗಿ ಹಾಗೂ ಬೇಡಿಕೆ ಈಡೇರಿಸಲು ಸಂಕನೂರ ಅರ್ಹರು. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಮೊದಲ ಪ್ರಾಶಸ್ತ್ಯದ ಮತದೊಂದಿಗೆ ಹೆಚ್ಚಿನ ಅಂತರದಲ್ಲಿ ಗೆಲ್ಲಿಸಿ ಎಂದರು.

ದಂಡಿನ, ಮುತ್ತಣ್ಣ ಕಡಗದ,ಅಶೋಕ ವನ್ನಾಲ, ಬಸವರಾಜಬೆಲ್ಲದ, ಅಶೋಕ ನವಲಗುಂದ, ರವಿಬಿದರೂರು, ಭಾಸ್ಕರ ರಾಯಬಾಗಿ,ಬಿ.ಎಂ. ಸಜ್ಜನರ, ಉಮೇಶ ಮಲ್ಲಾಪುರ, ಅಂದಪ್ಪ ಸಂಕನೂರ,ಗಣೇಶ ಗುಗಲೋತ್ತರ ಸೇರಿ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next