ಬೆಂಗಳೂರು: ನೀತಿ ಸಂಹಿತೆ ಜಾರಿ ತಂಡಗಳು ಕಳೆದ 24 ಗಂಟೆಗಳಲ್ಲಿ ನಗದು, ಮದ್ಯ, ಮಾದಕ ವಸ್ತುಗಳು, ಉಚಿತ ಉಡುಗೊರೆಗಳು ಸೇರಿ 7 ಕೋಟಿಗೂ ಅಧಿಕ ಚುನಾವಣ ಅಕ್ರಮ ಜಪ್ತಿ ಮಾಡಲಾಗಿದ್ದು, ಈವರೆಗಿನ ಒಟ್ಟು ಚುನಾವಣ ಅಕ್ರಮ 27.62 ಕೋಟಿ ರೂ. ಆಗಿದೆ.
ಕಳೆದ 24 ಗಂಟೆಗಳಲ್ಲಿ ಚುನಾವಣ ನೀತಿ ಸಂಹಿತೆ ಜಾರಿ ತಂಡಗಳು, ಅಬಕಾರಿ ತಂಡಗಳು ಸೇರಿ 3.97 ಕೋಟಿ ನಗದು, 42 ಸಾವಿರ ರೂ. ಮೌಲ್ಯದ ಉಚಿತ ಉಡುಗೊರೆಗಳು, ಪೊಲೀಸರು, ಎಂಸಿಸಿ ತಂಡಗಳು 2.12 ಲಕ್ಷ ಮೌಲ್ಯದ 5.22 ಲಕ್ಷ ಲೀಟರ್ ಅಬಕಾರಿ ಅಧಿಕಾರಿಗಳು 2.87 ಕೋಟಿ ಮೌಲ್ಯದ 89 ಸಾವಿರ ಲೀಟರ್ ಮದ್ಯ, 4.48 ಲಕ್ಷ ಮೌಲ್ಯದ 13.42 ಕೆಜಿ ಮಾದಕ ವಸ್ತುಗಳು, 6.10 ಲಕ್ಷ ಮೌಲ್ಯದ 2.08 ಕೆಜಿ ಚಿನ್ನ ಬೆಳ್ಳಿ ವಶಕ್ಕೆ ಪಡೆದುಕೊಂಡಿದ್ದಾರೆ.
ಚುನಾವಣ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ಈವರೆಗೆ 5.86 ಕೋಟಿ ರೂ. ನಗದು, 5.87 ಲಕ್ಷ ಮೌಲ್ಯದ ಉಚಿತ ಉಡುಗೊರೆ, 21.48 ಕೋಟಿ ರೂ. ಮೌಲ್ಯದ 6.84 ಲಕ್ಷ ಲೀಟರ್ ಮದ್ಯ, 15.21 ಲಕ್ಷ ಮೌಲ್ಯದ 24.30 ಕೆಜಿ ಮಾದಕ ವಸ್ತುಗಳು, 6.10 ಲಕ್ಷ ಮೌಲ್ಯದ 1.08 ಕೆಜಿ ಚಿನ್ನಾಭರಣ ಸೇರಿ ಒಟ್ಟಾರೆ 27.62 ಕೋಟಿ ರೂ. ಚುನಾವಣ ಅಕ್ರಮ ವಶಕ್ಕೆ ಪಡೆದುಕೊಳ್ಳಲಾಗಿದೆ.
ವಿಶೇಷವಾಗಿ ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜಿಲ್ಲಾ ಸಿಇಎನ್ ಪೊಲೀಸರು 2.93 ಕೋಟಿ ರೂ. ನಗದು, ಬಳ್ಳಾರಿ ಲೋಕಸಭಾ ಕ್ಷೇತ್ರದ ಸಿರಗುಪ್ಪದಲ್ಲಿ ಎಸ್‌ಎಸ್‌ಟಿ ತಂಡಗಳು 32.92 ಲಕ್ಷ ನಗದು, ಕೊಪ್ಪಳ ಲೋಕಸಭಾ ಕ್ಷೇತ್ರದ ಯಲಬುರ್ಗಾ ತಾಲೂಕಿನ ಬನ್ನಿಕೊಪ್ಪ ಚೆಕ್ಸ್‌ಪೋಸ್ಟ್‌ನಲ್ಲಿ ಎಸ್‌ಎಸ್‌ಟಿ ತಂಡ 50 ಲಕ್ಷ ರೂ. ನಗದು ವಶಪಡಿಸಿಕೊಂಡಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.