Advertisement

ಚುನಾವಣಾ ಕರ್ತವ್ಯ ಲೋಪ:ಮೂವರ ಸಸ್ಪೆಂಡ್‌

06:00 AM May 13, 2018 | Team Udayavani |

ವಿಜಯಪುರ: ಚುನಾವಣಾ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾ ಚುನಾವಣಾಧಿಕಾರಿ ಆದೇಶಿಸಿದ್ದಾರೆ. ಜಿಲ್ಲೆಯ ವಿಜಯಪುರ, ನಾಗಠಾಣ ಹಾಗೂ ಬಬಲೇಶ್ವರ ಕ್ಷೇತ್ರಗಳಿಗೆ ಚುನಾವಣಾ ಕರ್ತವ್ಯಕ್ಕೆ ತೆರಳುವ ವಾಹನಗಳಿಗೆ ಇಂಧನ ಭರಿಸುವ ವ್ಯವಸ್ಥೆಯಲ್ಲಿ ನಿರ್ಲಕ್ಷ ತೋರಿದ್ದಕ್ಕಾಗಿ ಮೂವರು ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಲಾಗಿದೆ.

Advertisement

ಮಸ್ಟರಿಂಗ್‌ ಕಾರ್ಯಕ್ಕಾಗಿ ನಾಗಠಾಣ ಮತಕ್ಷೇತ್ರದ ಮತಗಟ್ಟೆಗೆ ತೆರಳುವ ವಾಹನಗಳಿಗೆ ಇಂಧನ ಭರಿಸಿ, ವಾಹನಗಳನ್ನು ಸಿದ್ಧತೆಯಲ್ಲಿ ಇರಿಸಿಕೊಳ್ಳುವ ಹೊಣೆ ವಹಿಸಿದ್ದರೂ ಸೂಕ್ತ ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಇದರಿಂದ ಚುನಾವಣಾ ಕರ್ತವ್ಯಕ್ಕೆ ತೆರಳಲು ಸಿಬ್ಬಂದಿಗೆ ವಿಳಂಬವಾಗಿದೆ. ಹೀಗಾಗಿ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಅಧಿಧೀಕ್ಷಕ ಪಿ.ಕೆ. ಪಿಂಜಾರ, ಭೂಮಾಪಕ ಪಿ.ವೈ. ಹಳ್ಳಿ ಹಾಗೂ ಉಮೇಶ ಹತ್ತರಕಿಹಾಳ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣವರ ಆದೇಶಿಸಿದ್ದಾರೆ.

ಶಿಕ್ಷಕ ಅಮಾನತು
ಗದಗ: ಚುನಾವಣೆ ಕೆಲಸಕ್ಕೆ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಶಿಕ್ಷಕರೊಬ್ಬರನ್ನು ಜಿಲ್ಲಾ ಚುನಾವಣಾ ಅಧಿಕಾರಿ ಅಮಾನತು ಮಾಡಿದ್ದಾರೆ. ಶಿರಹಟ್ಟಿಯ ವಿಜಯನಗರ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಅಸನಸಾಬ ಬೆನಹಾಳ ಅವರನ್ನು ಗದಗ ಕ್ಷೇತ್ರದ ಚುನಾವಣಾ ಕೆಲಸಕ್ಕೆ ನಿಯೋಜಿಸಲಾಗಿತ್ತು. ಆದರೆ, ಮೇ 11ರಂದು ನಡೆದ ಮಸ್ಟರಿಂಗ್‌ ಕಾರ್ಯಕ್ಕೆ ಮಧ್ಯಾಹ್ನ 2 ಗಂಟೆಯಾದರೂ ಹಾಜರಾಗಿರಲಿಲ್ಲ. ಚುನಾವಣಾ ಕಾರ್ಯವನ್ನು ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತು ಮಾಡಲಾಗಿದೆ. ಅಲ್ಲದೇ ಅಮಾನತಿನ ಅವಧಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನವನ್ನು ಬಿಡಬಾರದು ಎಂದು ಜಿಲ್ಲಾ ಚುನಾವಣಾಧಿಕಾರಿ ಮನೋಜ್‌ ಜೈನ್‌ ಆದೇಶಿಸಿದ್ದಾರೆ.

ವಾಮಾಚಾರಕ್ಕೆ ಬಂದಿದ್ದವನ ಸೆರೆ
ಚೇಳೂರು (ತುಮಕೂರು):
ಹೋಬಳಿ ನಲ್ಲೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಬೇಕೆಂದು ಮತದಾನ ನಡೆಯುವ ಮತಗಟ್ಟೆಯ ಕೇಂದ್ರಗಳಿಗೆ ಅಕ್ಕಿಕಾಳು, ನಿಂಬೆಹಣ್ಣು, ಅರಿಶಿನಕುಂಕುಮ ಹಾಕಿ ವಾವåಾಚಾರ ಮಾಡಲು
ಬಂದಿದ್ದ ಶಿವಸಂದ್ರದ ಶಿವಮೂರ್ತಿಯನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ನಲ್ಲೂರು ಗ್ರಾಪಂನ ನಲ್ಲೂರು ಮತಗಟ್ಟೆ ಸಂಖ್ಯೆ 32. ಮಲಮಾಚನಕುಂಟೆ 30, ಅಂತಾಪುರ 31ರಲ್ಲಿ ವಾಮಾಚಾರ ಮಾಡಿಕೊಂಡು ಕಾರಿನಲ್ಲಿ ನಾಲ್ವರು ಬಂದಿದ್ದರು. ಈ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರು ಶಿವಮೂರ್ತಿಯನ್ನು ವಿಚಾರಿಸಿದಾಗ ವಾಮಾಚಾರದ ಸಂಗತಿ ಬಯಲಾಗಿದೆ. ಆತನನ್ನು ಗ್ರಾಮಸ್ಥರು ಗ್ರಾಪಂ ಕಚೇರಿಯಲ್ಲಿ ಕೂಡಿ ಹಾಕಿ ನಂತರ ಚೇಳೂರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಪಘಾತಕ್ಕೀಡಾದವರಿಗೆ ಪರಿಹಾರ
ಬೆಂಗಳೂರು: ಚುನಾವಣಾ ಕರ್ತವ್ಯದಲ್ಲಿದ್ದಾಗ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಡಿವೈಎಸ್ಪಿ ಬಾಳೇಗೌಡ, ಸಬ್‌ ಇನ್ಸ್‌ಪೆಕ್ಟರ್‌ ಎಚ್‌.ಕೆ. ಶಿವಸ್ವಾಮಿ ಹಾಗೂ ವಾಹನ ಚಾಲಕ ವೇಣುಗೋಪಾಲ ಅವರ ಕುಟುಂಬಕ್ಕೆ ಚುನಾವಣಾ ಆಯೋಗದಿಂದ ತಲಾ 20 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ತಿಳಿಸಿದರು.

Advertisement

ಮತಹಾಕಲು ದೋಣಿ ದಾಟಲೇಬೇಕು 
ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹೇರಿಕುದ್ರು ಗ್ರಾಮವಿದೆ. ಇಲ್ಲಿನ ನಿವಾಸಿಗಳಿಗೆ ಮತ ಚಲಾಯಿಸಲು ದೋಣಿ ಪ್ರಯಾಣ ಅನಿವಾರ್ಯ. ಅದೇ ರೀತಿ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಡೂxರು ಗ್ರಾಮದ ಉಳಿಯದ್ದು ಕೂಡ ಇದೇ ಪರಿಸ್ಥಿತಿ. ತುಂಬಿ ಹರಿಯುವ ಫ‌ಲ್ಗುಣಿ ನದಿ ಮಧ್ಯೆ ಇರುವ ನಡುಗಡ್ಡೆಯಲ್ಲಿ ಇರುವುದು ಒಂದೇ ಒಂದು ಮನೆ. ಅದುವೇ ಉಳಿಯ.
ಇವರಿಗೆ ಮತಗಟ್ಟೆ ಇರುವುದು ಅಡೂxರಿನಲ್ಲಿ. ಉಳಿಯದಿಂದ ಅಡೂxರಿಗೆ ಬರಬೇಕಾದರೆ ಫ‌ಲ್ಗುಣಿ ನದಿ ದಾಟಲು ದೋಣಿಯೊಂದೇ ಆಸರೆ.

ಅಧಿಕಾರಿಗೆ ಹೃದಯಾಘಾತ
ಗಂಗಾವತಿ: ಕೊಠಡಿ ತಪಾಸಣೆಗೆ ತೆರಳಿದ್ದ ಫ್ಲೆçಯಿಂಗ್‌ ಸ್ಕ್ಯಾಡ್‌ ಪ್ರಥಮ ಅಧಿಕಾರಿ ಲಿಂಗಪ್ಪ ಗೋಟೂರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಲಿಂಗಪ್ಪ ಗೋಟೂರು ಅವರಿಗೆ ಹೃದಯಾಘಾತ ಸಂಭವಿಸಿದೆ. ಖಚಿತ ಮಾಹಿತಿ ಮೇರೆಗೆ ಲಿಂಗಪ್ಪ ಗೋಟೂರು ನೇತೃತ್ವದ ತಂಡ ಗುರುವಾರ ಮಧ್ಯರಾತ್ರಿ ನಗರದ ಎಸ್‌ಎಸ್‌ಎಲ್‌ಆರ್‌ ಖಾಸಗಿ ಲಾಡ್ಜ್ನಲ್ಲಿ ತಂಗಿದ್ದ ಶಂಕ್ರಣ್ಣ ಮುನವಳ್ಳಿ ಕೊಠಡಿ ತಪಾಸಣೆ ನಡೆಸಿದಾಗ ದಾಖಲೆ ಇಲ್ಲದ 30 ಸಾವಿರ ರೂ. ದೊರಕಿದೆ. ಈ ವೇಳೆ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ, ಕಾರ್ಯಕರ್ತರಾದ ಸಂತೋಷ ಕೆಲೋಜಿ, ಬಲ್ಕುಂದಿ ವೀರೇಶ ಸೇರಿ ಹಲವರು ಅಧಿಕಾರಿ ಜತೆ ತೀವ್ರ ವಾಗ್ವಾದ ಮಾಡಿದ್ದರಿಂದ ಲಿಂಗಪ್ಪ ಗೋಟೂರು ಅವರಿಗೆ ತೀವ್ರ ಹೃದಯಾಘಾತವಾಗಿದೆ. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಾವು
ವಿಜಯಪುರ: ಚುನಾವಣೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ಹೃದಯಾ ಘಾತದಿಂದ ಮೃತಪಟ್ಟಿರುವ ಘಟನೆ ವಿಜಯಪುರದ ಸೈನಿಕ ಶಾಲೆ ಆವರಣದಲ್ಲಿ ನಡೆದಿದೆ. ಮೃತರನ್ನು ವಿಠuಲ ಕುರ್ಲೆ (52) ಎಂದು ಗುರುತಿಸಲಾಗಿದೆ. ಮಹಾನಗರ ಪಾಲಿಕೆಯ ಡಿ ದರ್ಜೆ ನೌಕರಾಗಿರುವ ವಿಠuಲ್‌ ಶುಕ್ರವಾರ ಚುನಾವಣಾ ಸಿಬ್ಬಂದಿಯನ್ನು ಮತಗಟ್ಟೆಗೆ ಕಳಿಸಲು ಸೈನಿಕ ಶಾಲೆ ಆವರಣದಲ್ಲಿ ನಡೆದ ಮತ ಯಂತ್ರ ಹಂಚಿಕೆ ಕೆಲಸದಲ್ಲಿ ನಿರತರಾಗಿದ್ದರು. ಆಗ ಎದೆನೋವು ಕಾಣಿಸಿಕೊಂಡು ಹೃಯದಾಘಾತದಿಂದ ಮೃತಪಟ್ಟಿದ್ದಾರೆ. ಗಾಂಧಿ ಚೌಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next