Advertisement
ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂಘಟನೆ ಮಾಡದೆ ಸಮುದಾಯ ಅಥವಾ ಜಾತಿ ಬಿಟ್ಟು ವಿಷಯಾವಾರು ಆಧಾರಿತವಾಗಿ ಯುವ ಮತ್ತು ಮಹಿಳಾ ಸಮೂಹವನ್ನು ಸೆಳೆಯಲು ಕಾರ್ಯತಂತ್ರ ರೂಪಿಸಿದೆ.
Related Articles
Advertisement
ಇದೇ ಮಾದರಿಯಲ್ಲಿ ಯುವ ಜನರನ್ನು ಸೆಳೆಯಲು ಕಾರ್ಯಕ್ರಮ ರೂಪಿಸಲು ನಿರ್ಧರಿಸಲಾಗಿದೆ. ಆಯಾ ಕ್ಷೇತ್ರ ಅಥವಾ ಭಾಗದ ಸಮಸ್ಯೆಗಳ ಬಗ್ಗೆ ಹೆಚ್ಚು ಕೇಂದ್ರಿತವಾಗಿ ಸಂವಾದ, ಸಮಾಲೋಚನೆ ಆಯೋಜಿಸಿ ಯುವ ಗ್ರೂಪ್ ರಚಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಹೊಸಬರ ತಂಡ ರಚನೆಕಾಂಗ್ರೆಸ್ನಲ್ಲಿ ಶಾಸಕರು ಅಥವಾ ಮಾಜಿ ಶಾಸಕರು, ಇಲ್ಲವೇ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಸದಸ್ಯರಲ್ಲೇ ಪಕ್ಷದ ಅಧಿಕಾರವೂ ಕೇಂದ್ರೀಕೃತ ವಾಗಿರುತ್ತದೆ. ಹೊಸಬರು ಹಾಗೂ ಯುವಕರಿಗೆ ಅವಕಾಶವೇ ದೊರೆಯು ತ್ತಿಲ್ಲ. ಯುವಕರನ್ನು ಪಕ್ಷದ ಕೆಲಸಕ್ಕೆ ಹೆಚ್ಚು ಬಳಸಿಕೊಳ್ಳಲಾಗುತ್ತಿದೆ, ಆದರೆ ಅಧಿಕಾರ ಇನ್ನೂ ಸಿಕ್ಕಿಲ್ಲ ಎಂಬ ಅಸಮಾಧಾನವೂ ಪಕ್ಷದ ವಲಯದಲ್ಲಿದೆ. ಆದ್ದರಿಂದ ಯುವಕರು ಹಾಗೂ ಮಹಿಳೆಯರಿಗೆ ಬೂತ್‌ಮಟ್ಟದಲ್ಲಿ ನಾಯಕತ್ವ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ತಂಡ ರಚಿಸಿ ಕಾರ್ಯನಿರ್ವಹಿಸಲು ತೀರ್ಮಾನಿಸಲಾಗಿದೆ. ಆಗಸ್ಟ್ ಅಂತ್ಯದೊಳಗೆ ಈ ಕಾರ್ಯ ಮುಗಿಸಲು ನಿರ್ಧರಿಸಲಾಗಿದೆ. ದೇಶದಲ್ಲಿ ಯುವಕರಿಗೆ ಹಾಗೂ ಮಹಿಳೆಯರಿಗೆ ಶಕ್ತಿ ತುಂಬಿದ್ದೇ ಕಾಂಗ್ರೆಸ್. ಈ ಎರಡೂ ವರ್ಗ ದೇಶದ ಆಸ್ತಿ. ಹೀಗಾಗಿ ನಾವು ಬೂತ್ ಮಟ್ಟದಲ್ಲಿ ಅವರಿಗೆ ನಾಯಕತ್ವ ಕೊಡಲು ತೀರ್ಮಾನಿಸಿದ್ದೇವೆ. ಆ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮ ರೂಪಿಸಿದ್ದೇವೆ. ಈಗಾಗಲೇ “ನಾ ನಾಯಕಿ’ ಕಾರ್ಯಕ್ರಮ ನಡೆಯುತ್ತಿದೆ. ವಿಷಯಾಧಾರಿತವಾಗಿ ಯುವ ಸಮೂಹ ಕಾಂಗ್ರೆಸ್‌ನತ್ತ ಆಕರ್ಷಿಸಲು ಯೋಜನೆ ಹಾಕಿಕೊಂಡಿದ್ದೇವೆ.
– ಸಲೀಂ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ