Advertisement

ಜಾತಿ, ಭಾಷೆ, ಪ್ರದೇಶ ಆಧರಿತ ರಾಜಕೀಯ ಪಕ್ಷ ಬೇಕೇ?

01:02 PM Apr 20, 2022 | Team Udayavani |
- ಬೇಳೂರು ರಾಘವ ಶೆಟ್ಟಿಈ ರಾಜಕೀಯ ಪಕ್ಷಗಳು ಸಮಾನತೆ ಮತ್ತು ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತವೆಯೇ? ನಮ್ಮ ದೇಶದಲ್ಲಿ 4-5 ರಾಷ್ಟ್ರೀಯ ಪಕ್ಷಗಳು, 50-60ರಷ್ಟು ರಾಜ್ಯ ಪ್ರಾದೇಶಿಕ ಪಕ್ಷಗಳು ಹಾಗೂ 700ಕ್ಕೂ ಅಧಿಕ ಸಂಖ್ಯೆಯ ಏಕವ್ಯಕ್ತಿ ನಾಮಾಂಕಿತ ಚಿಲ್ಲರೆ ರಾಜಕೀಯ ಪಕ್ಷಗಳಿವೆ. ಇವೆಲ್ಲವುಗಳಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವಿದೆ. ಜಾತಿ, ಮತ, ಭಾಷೆ ಹಾಗೂ ಪ್ರದೇಶ ಮುಂತಾದ ಸ್ಥಳೀಯ ಅಂಶಗಳ ಪ್ರಾಬಲ್ಯದ ಬಲದಲ್ಲಿ ಕೆಲವು ಸ್ಥಾನಗಳನ್ನು ಈ ಚಿಲ್ಲರೆ ಪಕ್ಷಗಳು ಗೆಲ್ಲುವ ಸಾಧ್ಯತೆಯುಂಟು. ಇದು ಆ ಪಕ್ಷದ ಅಥವಾ ಸಂಘಟನೆಯ ಬೇರು ಗಟ್ಟಿಗೊಳಿಸಲು ಸಹಕಾರಿ. ಅನಂತರ ನಿಧಾನವಾಗಿ ತಮ್ಮ ರಹಸ್ಯ ಕಾರ್ಯಸೂಚಿಯನ್ನು ಕಾರ್ಯರೂಪಕ್ಕೆ ತರಲು ಆರಂಭಿಸುತ್ತವೆ. ಈ ವಿದ್ಯಮಾನ ಸಮಾಜದ ಶಾಂತಿ ಕದಡಲು ಹಾಗೂ ಮುಂದುವರಿದರೆ ದೇಶವನ್ನೇ ವಿಭಜಿಸುವ ಅರ್ಥಾತ್‌ ಅಖಂಡತೆಗೆ ಧಕ್ಕೆ ತರುವ ಅಪಾಯಕಾರಿ ಹಂತಕ್ಕೆ...
Now pay only for what you want!
This is Premium Content
Click to unlock
Pay with

ಜಾತಿ, ಮತ, ಭಾಷೆ ಹಾಗೂ ಸೀಮಿತ ಪ್ರದೇಶದ ಆಧಾರ ಅಥವಾ ಬೆಂಬಲವುಳ್ಳ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಲು ಅರ್ಹನೇ? ಎಂಬುದು ಚಿಂತಿಸಬೇಕಾದ ವಿಷಯ. ಈ ರಾಜಕೀಯ ಪಕ್ಷಗಳು ಸಮಾನತೆ ಮತ್ತು ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತವೆಯೇ? ನಮ್ಮ ದೇಶದಲ್ಲಿ 4-5 ರಾಷ್ಟ್ರೀಯ ಪಕ್ಷಗಳು, 50-60ರಷ್ಟು ರಾಜ್ಯ ಪ್ರಾದೇಶಿಕ ಪಕ್ಷಗಳು ಹಾಗೂ 700ಕ್ಕೂ ಅಧಿಕ ಸಂಖ್ಯೆಯ ಏಕವ್ಯಕ್ತಿ ನಾಮಾಂಕಿತ ಚಿಲ್ಲರೆ ರಾಜಕೀಯ ಪಕ್ಷಗಳಿವೆ. ಇವೆಲ್ಲವುಗಳಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವಿದೆ. ಜಾತಿ, ಮತ, ಭಾಷೆ ಹಾಗೂ ಪ್ರದೇಶ ಮುಂತಾದ ಸ್ಥಳೀಯ ಅಂಶಗಳ ಪ್ರಾಬಲ್ಯದ ಬಲದಲ್ಲಿ ಕೆಲವು ಸ್ಥಾನಗಳನ್ನು ಈ ಚಿಲ್ಲರೆ ಪಕ್ಷಗಳು ಗೆಲ್ಲುವ ಸಾಧ್ಯತೆಯುಂಟು. ಇದು ಆ ಪಕ್ಷದ ಅಥವಾ ಸಂಘಟನೆಯ ಬೇರು ಗಟ್ಟಿಗೊಳಿಸಲು ಸಹಕಾರಿ. ಅನಂತರ ನಿಧಾನವಾಗಿ ತಮ್ಮ ರಹಸ್ಯ ಕಾರ್ಯಸೂಚಿಯನ್ನು ಕಾರ್ಯರೂಪಕ್ಕೆ ತರಲು ಆರಂಭಿಸುತ್ತವೆ. ಈ ವಿದ್ಯಮಾನ ಸಮಾಜದ ಶಾಂತಿ ಕದಡಲು ಹಾಗೂ ಮುಂದುವರಿದರೆ ದೇಶವನ್ನೇ ವಿಭಜಿಸುವ ಅರ್ಥಾತ್‌ ಅಖಂಡತೆಗೆ ಧಕ್ಕೆ ತರುವ ಅಪಾಯಕಾರಿ ಹಂತಕ್ಕೆ ತಲುಪಬಹುದು.

Advertisement

ಭಾರತ ಬಹು ಜನಾಂಗೀಯ, ಬಹುಭಾಷಾ ಹಾಗೂ ಬಹು ಸಂಸ್ಕೃತಿಯುಳ್ಳ ರಾಷ್ಟ್ರ. ಆದರೆ ಪ್ರಜಾಸತ್ತಾತ್ಮಕವಾಗಿ ಸಮಾನತೆಯನ್ನು ಪ್ರತಿಪಾದಿಸುತ್ತದೆ. ನಮ್ಮ ಸಂವಿಧಾನದ ಆರ್ಟಿಕಲ್‌ (14)ರಲ್ಲಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಉದಾತ್ತ ಧ್ಯೇಯ ಪ್ರತಿಷ್ಠಾಪಿಸಲ್ಪಟ್ಟಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಸ್ವಾತಂತ್ರಗಳೂ ನಮಗುಂಟು. ಹಾಗೆ ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಸ್ವತಂತ್ರ ಚಿಂತನೆಗೂ ಪೂಜಾದಿ ವ್ರತಾಚರಣೆಗೂ ಸ್ವಾತಂತ್ರ್ಯವುಳ್ಳವರಾಗಿದ್ದೇವೆ. ಅಲ್ಲದೆ ಇತರರಿಗೆ ಆತಂಕವಾಗದ ಹಾಗೆ ಪೌರನೋರ್ವ ತನ್ನ ಆತ್ಮಸಾಕ್ಷಿಗೆ ತಕ್ಕಂತೆ ಮತಾವಲಂಬನೆಗೂ ಧರ್ಮ ಪರಿಪಾಲನೆಗೂ ಅವಕಾಶ ಕಲ್ಪಿತವಾಗಿದೆ. ಈ ಬಗ್ಗೆ ಸರಕಾರದ ರಕ್ಷಣೆಯೂ ಉಂಟು. ಆದರೆ ಸರಕಾರ ಮಾತ್ರ ಧರ್ಮ ನಿರಪೇಕ್ಷ. ಅಂದರೆ ಪೌರನ ಸ್ವಾತಂತ್ರ್ಯ ರಕ್ಷಣೆ ಮಾತ್ರ ಸರಕಾರದ ಹೊಣೆ. ಆಡಳಿತದಲ್ಲಿ ಧರ್ಮ, ಜಾತಿ, ಭಾಷೆಗಳು ಅನ್ಯಥಾ ನುಸುಳಬಾರದು. ಕೇವಲ ಸಮಾನತೆಯೊಂದೇ.

ಸಂವಿಧಾನದ ಈ ಪರಿಕಲ್ಪನೆಯಂತೆ ಆಡಳಿತ ನಡೆಸಲು ನಮ್ಮ ಪ್ರತಿನಿಧಿಗಳನ್ನು ಚುನಾವಣೆ ಮೂಲಕ ನಾವೇ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆ ಪ್ರಯುಕ್ತ ಆರ್ಟಿಕಲ್‌ (324)ರಲ್ಲಿ ಭಾರತೀಯ ಚುನಾವಣ ಆಯೋಗ ರಚನೆಗೆ ಅವಕಾಶ ಕಲ್ಪಿಸಲಾಗಿದೆ. ಇದು ಸ್ವತಂತ್ರ ಪ್ರಾಧಿಕಾರ. ಮುಕ್ತ ಹಾಗೂ ನ್ಯಾಯಯುತ ಚುನಾವಣೆ ನಡೆಸುವುದು ಈ ಪ್ರಾಧಿಕಾರದ ಜವಾಬ್ದಾರಿ. ಈ ಬಗ್ಗೆ ಪ್ರಜಾಪ್ರಾತಿನಿಧ್ಯ ಕಾಯಿದೆ-1950 ಹಾಗೂ ಜನತಾ ಪ್ರಾತಿನಿಧ್ಯ ಕಾಯಿದೆ-1951 ರೂಪಿಸಲಾಗಿದೆ. ಈ ಕಾಯಿದೆಗಳಲ್ಲಿ ಚುನಾವಣ ಆಯೋಗಕ್ಕೆ ಅಗತ್ಯವುಳ್ಳ ಅಧಿಕಾರ ದತ್ತವಾಗಿದೆ. ಮತದಾರರ ಪಟ್ಟಿ ತಯಾರಿಯಿಂದ ಹಿಡಿದು ಚುನಾವಣೆ ನಡೆಸುವ ತನಕದ ಸಕಲ ಕಾರ್ಯಗಳೂ ಆಯೋಗದ ನಿರ್ದೇಶನ ಹಾಗೂ ಮೇಲುಸ್ತುವಾರಿಯಲ್ಲಿ ನಡೆಯುತ್ತದೆ. ಅಲ್ಲದೆ ಕ್ಷೇತ್ರ ವಿಂಗಡಣೆ, ರಾಜಕೀಯ ಪಕ್ಷಗಳನ್ನು ಗುರುತಿಸಿ ಮಾನ್ಯತೆ ನೀಡುವ ಹಾಗೂ ಚುನಾವಣ ತಕರಾರುಗಳನ್ನು ಇತ್ಯರ್ಥ ಪಡಿಸುವ ಅಧಿಕಾರವೂ ಆಯೋಗಕ್ಕೆ ದತ್ತವಾಗಿದೆ.

ರಾಜಕೀಯ ಪಕ್ಷಗಳನ್ನು ಗುರುತಿಸಿ, ವರ್ಗೀಕರಿಸಿ ಮಾನ್ಯತೆ ನೀಡುವ ವಿಚಾರದಲ್ಲಿ ಜನತಾ ಪ್ರಾತಿನಿಧ್ಯ ಕಾಯಿದೆ 1951ರಲ್ಲಿ ಕೆಲವು ನಿಬಂಧನೆಗಳಿವೆ. ಮಾನ್ಯತೆ ಬಯಸುವ ರಾಜಕೀಯ ಪಕ್ಷ ಅಥವಾ ಸಂಘಟನೆಯ ನೀತಿ ನಿಯಮಾವಳಿಗಳಲ್ಲಿ “ಪ್ರಜಾಸತ್ತೆಯಲ್ಲಿ ನಂಬಿಕೆ, ಸಂವಿಧಾನದಲ್ಲಿ ನಿಷ್ಠೆ, ರಾಷ್ಟ್ರದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ಸಂಕಲ್ಪ ಹಾಗೂ ಜಾತ್ಯತೀತ ನಿಲುವನ್ನು ಪ್ರತಿಪಾದಿಸುತ್ತೇವೆ’ ಎಂಬ ಘೋಷವಾಕ್ಯವಿರಬೇಕೆಂದು ಸದ್ರಿ ಕಾಯಿದೆಯ ಸೆಕ್ಷನ್‌ 29(ಎ) ಉಪ(5)ರಲ್ಲಿ ಸ್ಪಷ್ಟಪಡಿಸಲಾಗಿದೆ. ಇದು ನಮ್ಮನ್ನು ಗಂಭೀರ ಚಿಂತನೆಗೆ ಒಡ್ಡುವ ವಿಚಾರ. ಯಾಕೆಂದರೆ ಇದು ಸಂವಿಧಾನದ ಮೂಲಾಶಯವನ್ನು ಪ್ರತಿಪಾದಿಸುತ್ತದೆ. ಅದೇ ಸಮಾನತೆ ಹಾಗೂ ರಾಷ್ಟ್ರೀಯತೆ. ಜಾತಿ, ಮತ, ಪಂಥ, ಭಾಷೆ ಹಾಗೂ ಪ್ರದೇಶಕ್ಕೆ ಹೊರತಾದ ನಿಲುವು. ಅಂದರೆ ಸಾರ್ವಜನಿಕರನ್ನು ಪ್ರತಿನಿಧಿ ಸುವಾತ ನಿಷ್ಪಕ್ಷಪಾತವಾಗಿ, ನಿರ್ಭೀತಿಯಿಂದ ರಾಷ್ಟ್ರೀಯತೆ ಹಾಗೂ ಸಮಾನತೆಯನ್ನು ಪ್ರತಿಪಾದಿಸು ವವನಾಗಿರಬೇಕೆಂಬುದು ಖಚಿತವಾಯಿತಷ್ಟೇ!

ವಸ್ತುಸ್ಥಿತಿ ಹೀಗಿರುವಾಗ ಜಾತಿ, ಮತ, ಭಾಷೆ ಹಾಗೂ ಸೀಮಿತ ಪ್ರದೇಶದ ಆಧಾರ ಅಥವಾ ಬೆಂಬಲವುಳ್ಳ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಲು ಅರ್ಹನೇ? ಎಂಬುದು ಚಿಂತಿಸಬೇಕಾದ ವಿಷಯ. ಆದರೆ ಹೆಚ್ಚಿನ ರಾಜಕೀಯ ಪಕ್ಷಗಳು ಈ ಮೂಲದವುಗಳೇ ಎನ್ನುವುದು ಕಟು ಸತ್ಯ. ಈ ರಾಜಕೀಯ ಪಕ್ಷಗಳು ಸಮಾನತೆ ಮತ್ತು ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತವೆಯೇ? ನಮ್ಮ ದೇಶದಲ್ಲಿ 4-5 ರಾಷ್ಟ್ರೀಯ ಪಕ್ಷಗಳು, 50-60ರಷ್ಟು ರಾಜ್ಯ ಪ್ರಾದೇಶಿಕ ಪಕ್ಷಗಳು ಹಾಗೂ 700ಕ್ಕೂ ಅಧಿಕ ಸಂಖ್ಯೆಯ ಏಕವ್ಯಕ್ತಿ ನಾಮಾಂಕಿತ ಚಿಲ್ಲರೆ ರಾಜಕೀಯ ಪಕ್ಷಗಳಿವೆ. ಇವೆಲ್ಲವುಗಳಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವಿದೆ. ಜಾತಿ, ಮತ, ಭಾಷೆ ಹಾಗೂ ಪ್ರದೇಶ ಮುಂತಾದ ಸ್ಥಳೀಯ ಅಂಶಗಳ ಪ್ರಾಬಲ್ಯದ ಬಲದಲ್ಲಿ ಕೆಲವು ಸ್ಥಾನಗಳನ್ನು ಈ ಚಿಲ್ಲರೆ ಪಕ್ಷಗಳು ಗೆಲ್ಲುವ ಸಾಧ್ಯತೆಯುಂಟು. ಇದು ಆ ಪಕ್ಷದ ಅಥವಾ ಸಂಘಟನೆಯ ಬೇರು ಗಟ್ಟಿಗೊಳಿಸಲು ಸಹಕಾರಿ. ಅನಂತರ ನಿಧಾನವಾಗಿ ತಮ್ಮ ರಹಸ್ಯ ಕಾರ್ಯಸೂಚಿಯನ್ನು ಕಾರ್ಯರೂಪಕ್ಕೆ ತರಲು ಆರಂಭಿಸುತ್ತವೆ. ಈ ವಿದ್ಯಮಾನ ಸಮಾಜದ ಶಾಂತಿ ಕದಡಲು ಹಾಗೂ ಮುಂದುವರಿದರೆ ದೇಶವನ್ನೇ ವಿಭಜಿಸುವ ಅರ್ಥಾತ್‌ ಅಖಂಡತೆಗೆ ಧಕ್ಕೆ ತರುವ ಅಪಾಯಕಾರಿ ಹಂತಕ್ಕೆ ತಲುಪಬಹುದು.

Advertisement

ಏನೇ ಇರಲಿ. ಜನತಾ ಪ್ರಾತಿನಿಧ್ಯ ಕಾಯಿದೆ-1951ಕ್ಕೆ ಸಮಗ್ರ ತಿದ್ದುಪಡಿ ತರುವ ಅಗತ್ಯವಿದೆ. ಈಗಿರುವ ವ್ಯವಸ್ಥೆಯಲ್ಲಿ ಜಾತಿ, ಭಾಷೆ, ಮತ ಆಧರಿತ ಸಂಘಟನೆ ರಚಿಸಿಕೊಂಡು ಚುನಾವಣೆಯಲ್ಲಿ ಭಾಗವಹಿಸಬಹುದು. ಸಂಘಟನೆಯ ನೀತಿ, ನಿಯಮಾವಳಿಗಳಲ್ಲಿ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್‌ 29(ಎ) ಉಪ(5)ರಲ್ಲಿ ಹೇಳಿದ ಘೋಷವಾಕ್ಯವನ್ನು ಸೇರಿಸಿದರಾಯಿತು. ಆದರೆ ಇಲ್ಲಿಯ ತನಕ ಈ ನಿಬಂಧನೆ ವಸ್ತುನಿಷ್ಠವಾಗಿ ಕಾರ್ಯರೂಪಕ್ಕೆ ಬರಲಿಲ್ಲ. ಇಂಥ ರಾಜಕೀಯ ಸಂಘಟನೆಯ ಅಥವಾ ರಾಜಕೀಯ ಪಕ್ಷದ ಪ್ರಾತಿನಿಧ್ಯ ನಮಗೆ ಬೇಕೇ? ಆದುದರಿಂದ ಸಂವಿಧಾನದ ಮೂಲ ಆಶಯದಂತೆ ರಾಷ್ಟ್ರೀಯತೆಯನ್ನು ಪ್ರತಿಪಾದಿಸತಕ್ಕ ಹಾಗೂ ಶ್ರುತ ಪಡಿಸತಕ್ಕ ಸಂಘಟನೆ ಯಾ ರಾಜಕೀಯ ಪಕ್ಷಕ್ಕೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಲ್ಪಿಸುವ ಕಾನೂನು ತುರ್ತಾಗಿ ಜಾರಿಗೆ ಬರಬೇಕಾಗಿದೆ.

– ಬೇಳೂರು ರಾಘವ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.