Advertisement
ವಿಜ್ಞಾನ್ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಆರೋರಾ, ಅಸ್ಸಾಂನಲ್ಲಿ 3 ಹಂತದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27ಕ್ಕೆ ಮೊದಲ ಹಂತದ ಚುನಾವಣೆ, ಏಪ್ರಿಲ್ 1ರಂದು ಎರಡನೇ ಹಂತದ ಚುನಾವಣೆ, ಏಪ್ರಿಲ್ 6ಕ್ಕೆ ಮೂರನೇ ಹಂತದ ಚುನಾವಣೆ ಹಾಗೂ ಮೇ 2ಕ್ಕೆ ಮತಎಣಿಕೆ ನಡೆಯಲಿದೆ.
Related Articles
Advertisement
ತಮಿಳುನಾಡು:
ತಮಿಳುನಾಡು ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 6ರಂದು ಚುನಾವಣೆ, ಮೇ 2ರಂದು ಮತಎಣಿಕೆ ನಡೆಯಲಿದೆ.
ಪುದುಚೇರಿ:
ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 6ರಂದು ಪುದುಚೇರಿ ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.
ಪಶ್ಚಿಮಬಂಗಾಳ 8 ಹಂತಗಳಲ್ಲಿ ಮತದಾನ:
ಮಾರ್ಚ್ 27ರಂದು ಮೊದಲ ಹಂತದ ಚುನಾವಣೆ, ಏಪ್ರಿಲ್ 1ರಂದು ಎರಡನೇ ಹಂತದ ಚುನಾವಣೆ, ಏಪ್ರಿಲ್ 6ರಂದು 3ನೇ ಹಂತದ ಚುನಾವಣೆ, ಏಪ್ರಿಲ್ 10ರಂದು 4ನೇ ಹಂತದ ಚುನಾವಣೆ, ಏಪ್ರಿಲ್ 17 5ನೇ ಹಂತದ ಮತದಾನ, ಏಪ್ರಿಲ್ 22ರಂದು 6ನೇ ಹಂತದ ಮತದಾನ, ಏಪ್ರಿಲ್ 26ರಂದು 7ನೇ ಹಂತದ ಮತದಾನ, ಏಪ್ರಿಲ್ 29ರಂದು 8ನೇ ಹಂತದ ಮತದಾನ, ಮೇ 2ರಂದು ಫಲಿತಾಂಶ ಪ್ರಕಟ.
ಕೋವಿಡ್ 19 ಸೋಂಕು ನಂತರ ಬಿಹಾರ ಚುನಾವಣೆ ನಡೆದಿದ್ದು, ಆ ಬಳಿಕ ನಡೆಯುತ್ತಿರುವ ಮೊದಲ ಪ್ರಮುಖ ಚುನಾವಣೆ ಇದಾಗಿದ್ದು, ಈ ಚುನಾವಣೆ ಕೂಡಾ ಕೋವಿಡ್ ಮಾರ್ಗದರ್ಶಿಯಂತೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಆಯೋಗ ಹೇಳಿದೆ.
ಪಶ್ಚಿಮಬಂಗಾಳದ 294 ಕ್ಷೇತ್ರಕ್ಕೆ, ತಮಿಳುನಾಡಿನ 234 ಸ್ಥಾನಕ್ಕೆ, ಕೇರಳದ 140 ಕ್ಷೇತ್ರಕ್ಕೆ, ಅಸ್ಸಾಂನ 126 ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯ 30 ಸ್ಥಾನಗಳಿಗೆ ಚುನಾವಣೆ ನಡೆಸಲು ಮುಹೂರ್ತ ನಿಗದಿಯಾದಂತಾಗಿದೆ.
ಚುನಾವಣೆಗೆ ಕೋವಿಡ್ ಮಾರ್ಗಸೂಚಿ:
ಅಭ್ಯರ್ಥಿ ಜತೆ ಇಬ್ಬರಿಗೆ ಮಾತ್ರ ತೆರಳಲು ಅವಕಾಶ
ಮನೆ, ಮನೆ ಪ್ರಚಾರಕ್ಕೆ ಕೇವಲ ಐವರಿಗೆ ಮಾತ್ರ ಅವಕಾಶ
ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿಟಿವಿ ಅಳವಡಿಕೆ
ನಾಮಪತ್ರ ಸಲ್ಲಿಸಲು ಎರಡು ವಾಹನಗಳಲ್ಲಿ ಮಾತ್ರ ಬರಬೇಕು
ಮತದಾರರ ಭದ್ರತೆಗೆ ಹೆಚ್ಚಿನ ಆದ್ಯತೆ
ಕೋವಿಡ್ ಸೋಂಕಿತರಿಗೆ ಪ್ರತ್ಯೇಕ ಎಸ್ ಒಪಿ
ಆನ್ ಲೈನ್ ಮೂಲಕವೂ ನಾಮಪತ್ರ ಸಲ್ಲಿಸಬಹುದು
ಮತದಾನ ಅವಧಿ ಒಂದು ಗಂಟೆ ವಿಸ್ತರಣೆ
ಶೇ.50ರಷ್ಟು ಮತಗಟ್ಟೆಗಳ ವೋಟಿಂಗ್ ದೃಶ್ಯ ನೇರ ಪ್ರಸಾರ
ಚುನಾವಣಾಧಿಕಾರಿ ಸಮ್ಮುಖದಲ್ಲೇ ನಾಮಪತ್ರ ಸಲ್ಲಿಸಬೇಕು
ರೋಡ್ ಶೋನಲ್ಲಿ ಐದು ವಾಹನಗಳಿಗೆ ಮಾತ್ರ ಅವಕಾಶ