Advertisement

ಚುನಾವಣೆ ನೀತಿ ಸಂಹಿತೆ; ನಗದು, ಮದ್ಯ ಸಾಗಾಟಕ್ಕೆ ಕಡಿವಾಣ

12:49 AM May 10, 2023 | Team Udayavani |

ಉಡುಪಿ: ವಿಧಾನಸಭಾ ಚುನಾವಣೆ ಪ್ರಯುಕ್ತ ಜಿಲ್ಲೆಯಲ್ಲಿ ಮಾ.29ರಿಂದ ಮೇ 6ರವರೆಗೆ ಒಟ್ಟು 1,60,75,794 ರೂ.ಮೌಲ್ಯದ 42,313.11 ಲೀ.ಮದ್ಯ ವಶಕ್ಕೆ ಪಡೆಯಲಾಗಿದೆ. ಹಾಗೆಯೇ ಸೂಕ್ತ ದಾಖಲೆ ಇಲ್ಲೆ ಸಾಗಾಟ ಮಾಡುತ್ತಿದ್ದ 2,14,91,030 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಜಿಲ್ಲೆಯ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಿರೂರು, ಕೊಲ್ಲೂರು, ಹೊಸಂಗಡಿ, ಕುಂದಾಪುರದ ಹಾಲಾಡಿ, , ತೆಕ್ಕಟ್ಟೆ, ಉಡುಪಿಯ ನೇಜಾರು, ಬಲಾಯಿ ಪಾದೆ ಉದ್ಯಾವರ, ಅಲೆವೂರು, ಕಾಪುವಿನ ಕಟಪಾಡಿ, ಹೆಜಮಾಡಿ, ಮೂಡುಬೆಳ್ಳೆ, ಅಂಜಾರು, ಕಾರ್ಕಳದ ನಾಡಾ³ಲು, ಸೋಮೇಶ್ವರ, ಸಾಣೂರು, ಮುರತ್ತಂಗಡಿ, ಈದು, ಹೊಸ್ಮಾರು, ಬೆಳ್ಮಣ್‌ ಭಾಗದಲ್ಲಿ ಚೆಕ್‌ ಪೋಸ್‌ r ಗಳನ್ನು ಚುನಾವಣೆ ದಿನಾಂಕ ಘೋಷಣೆಯಾದಗಿನಿಂದ ಮಾಡ
ಲಾಗಿತ್ತು. ಹಗಲು-ರಾತ್ರಿ ಪೊಲೀ ಸರು ಹಾಗೂ ಪ್ಯಾರಾ ಮಿಲಿಟರಿ ಪಡೆ ತಪಾಸಣೆಯಲ್ಲಿ ನಿರತರಾಗಿದ್ದಾರೆ. ಇವಿಷ್ಟೇ ಅಲ್ಲದೆ ಅಬಕಾರಿ ಇಲಾಖೆ, ಪೊಲೀಸ್‌, ಎಫ್ಎಸ್‌ ಟೀಮ್‌, ಎಸ್‌ಎಸ್‌ಟಿ ಟೀಮ್‌, ಎಸ್‌ಎಚ್‌ಓಗಳು ಕೂಡ ತಪಾಸಣೆಯಲ್ಲಿ ತೊಡಗಿಕೊಂಡಿದ್ದಾರೆ.

82,19,930 ರೂ.ಹಿಂದಕ್ಕೆ
ಜಿಲ್ಲೆಯ ವಿವಿಧ ಚೆಕ್‌ಪೋಸ್ಟ್‌
ಗಳಲ್ಲಿ ವಶಪಡಿಸಿಕೊಂಡ 2,14,91,030 ರೂ.ಗಳ ಪೈಕಿ ಸೂಕ್ತ ದಾಖಲೆ ಒದಗಿಸಿದ ಕಾರಣಕ್ಕಾಗಿ 82,19,930ಗಳನ್ನು ವಾರಸು ದಾರರಿಗೆ ಹಿಂತಿರುಗಿಸಲಾಗಿದೆ. ದಾಖಲೆಯಿಲ್ಲದೆ 10 ಲ.ರೂ.ಗಳನ್ನು ಸಾಗಾಟ ಮಾಡಿದ ಕಾರಣಕ್ಕೆ ಇದುವರೆಗೆ ಒಟ್ಟು 37,49,500 ರೂ.ಗಳನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿದೆ. ಇದನ್ನು ಹಿಂಪಡೆಯಬೇಕಿದ್ದರೆ ಸೂಕ್ತ ದಾಖಲೆ ಸಲ್ಲಿಕೆ ಮಾಡ ಬೇಕಾಗುತ್ತದೆ. ಇದುವರೆಗೂ ವಾರಸುದಾರರು ಬರಲಿಲ್ಲ ಎಂಬ ಕಾರಣಕ್ಕೆ 95,21,600ಗಳು ಹಿಂತಿರುಗಿಸಲು ಬಾಕಿ ಉಳಿದಿವೆ.

22 ಪ್ರಕರಣ ದಾಖಲು
ಅಕ್ರಮ ನಗದು ಸಾಗಾಟಕ್ಕೆ ಸಂಬಂಧಿಸಿದಂತೆ ಬೈಂದೂರಿನಲ್ಲಿ 2, ಕುಂದಾಪುರ 5, ಉಡುಪಿ 7, ಕಾಪು 4, ಕಾರ್ಕಳದಲ್ಲಿ 4 ಸಹಿತ ಒಟ್ಟು 22 ಪ್ರಕರಣ ದಾಖಲಿಸ ಲಾಗಿದೆ. ಈ ಪೈಕಿ 17 ಪ್ರಕರಣಗಳ ವಾರಸುದಾರರು ಸೂಕ್ತ ದಾಖಲೆ ನೀಡಿದ ಕಾರಣಕ್ಕೆ ಹಣವನ್ನು ಹಿಂತಿರುಗಿಸಲಾಗಿದೆ. 1 ಪ್ರಕರಣ ಆದಾಯ ತೆರಿಗೆ ಇಲಾಖೆ ವ್ಯಾಪ್ತಿಯಲ್ಲಿದೆ. 4 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿದೆ.

42313.11ಲೀ.
ಮದ್ಯ ಸಾಗಾಟ
ನೀತಿ ಸಂಹಿತೆ ಜಾರಿಯಾದ ಬಳಿಕ ಜಿಲ್ಲೆಯಲ್ಲಿ 42313.11ಲೀ ಮದ್ಯ ಸಾಗಾಟ ನಡೆದಿದ್ದು, ಇದರಿಂದಲೇ 16,075,794 ರೂ.ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬೈಂದೂರು 5653.32, ಕುಂದಾಪುರ 16151.61, ಉಡುಪಿ 15003.63, ಕಾಪು 2179.91, ಕಾರ್ಕಳದಲ್ಲಿ 3324.65 ಲೀ. ಸಹಿತ ಒಟ್ಟು 42313.11 ಲೀ.ಮದ್ಯ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಬಕಾರಿ, ಪೊಲೀಸ್‌ ಹಾಗೂ ಎಫ್ಎಸ್‌ ಟೀಮ್‌ನಿಂದ ಈ ಕಾರ್ಯಾಚರಣೆ ನಡೆದಿದೆ.

Advertisement

ಸೂಕ್ತ ದಾಖಲೆ ಅಗತ್ಯ
ಚುನಾವಣೆ ನಿಮಿತ್ತ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ವೇಳೆ ಸೂಕ್ತ ದಾಖಲೆಗಳಿಲ್ಲದೆ ನಗದು ಹಾಗೂ ಮದ್ಯ ಸರಬರಾಜು ಮಾಡುತ್ತಿದ್ದ ಕಾರಣಕ್ಕೆ ಪ್ರಕರಣಗಳನ್ನು ದಾಖಲಿಸಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸೂಕ್ತ ದಾಖಲೆ ಒದಗಿಸಿದರಷ್ಟೇ ಅದನ್ನು ವಾರಸುದಾರರಿಗೆ ಒಪ್ಪಿಸಲಾಗುವುದು.
– ಕೂರ್ಮಾರಾವ್‌ ಎಂ., ಜಿಲ್ಲಾಧಿಕಾರಿ

– ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next