Advertisement
ಚುನಾವಣೆ ಮುಗಿದ ಬಳಿಕ ಮತ್ತೆ ಕೆಲಸಕ್ಕೆ ಹೋಗುತ್ತಿದ್ದೆವು. ಅಲ್ಲಿಗೆ ನಮ್ಮ ಕೆಲಸ ಮುಗಿ ಯಿತು. ಅಷ್ಟು ದಿನ ಸಂಬಳ ಇಲ್ಲ ಎಂದು ಲೆಕ್ಕ ಹಾಕಿ ಕೂರುವವರು ಇರಲಿಲ್ಲ. ಏಕೆಂದರೆ ನಮಗೆ ನಮ್ಮ ಪಕ್ಷದ ಪರ ಪ್ರಚಾರ ಮುಖ್ಯವಾಗಿತ್ತು ಎನ್ನುವ ಗೋಪಾಲ ನಾೖಕ್ ಅವರು 1957ರಿಂದ ಇತ್ತೀಚಿನ ತನಕವೂ ಮನೆ ಮನೆಗೆ ತೆರಳಿ ಚುನಾವಣ ಪ್ರಚಾರ ಕಾರ್ಯಕ್ಕೆ ಇಳಿದವರು.
ಆಗ ನಾನು ಪ್ರಚಾರ ಮಾಡುತ್ತಿದ್ದ ಪಕ್ಷದ ಪರ ಪ್ರಚಾರಕ್ಕೆ ತೆರಳುವವರ ಸಂಖ್ಯೆ ಕಡಿಮೆ ಇತ್ತು. ನಾವು ನಾಲ್ಕೆ çದು ಜನ ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದೆವು. ಯಾವುದೇ ವಾಹನದ ವ್ಯವಸ್ಥೆ ಇರಲಿಲ್ಲ. ನಡೆದುಕೊಂಡೇ ಹೋಗುತ್ತಿದ್ದೆವು. ಎದುರಾಳಿ ಪಕ್ಷದ ಅಭ್ಯರ್ಥಿಯನ್ನು ವೈಯಕ್ತಿಕವಾಗಿ ತೆಗಳು ವಂತಹ ಪ್ರಚಾರ ಇರಲಿಲ್ಲ, ಸಭೆ ಸಮಾವೇಶಗಳಿಗೆ ಬರುವವರು ಕಡಿಮೆ ಇದ್ದರು. ದೊಡ್ಡ ನಾಯಕರು ಬಂದಾಗ ಒಂದಷ್ಟು ಜನ ಸೇರುತ್ತಿದ್ದರು. ಏನಿದ್ದರೂ ಮನೆಯೇ ಪ್ರಚಾರದ ಕೇಂದ್ರ ಸ್ಥಾನವಾಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಅವರು. ದೂರದ ಮನೆಗೆ ತಲುಪುವುದೇ ಸಾಹಸ
ಗೋಪಾಲ ನಾೖಕ್ ಅವರು ಅನುಭವ ಬಿಚ್ಚಿಡುತ್ತಿದ್ದ ವೇಳೆ ಇನ್ನಷ್ಟು ನೆನಪು ಗಳನ್ನು ಮೆಲುಕು ಹಾಕಿದ್ದು ಅವರ ಪತ್ನಿ ಶಶಿಕಲಾ. ನಾನು ಮನೆ ಮನೆಗೆ ತೆರಳಿ ಪ್ರಚಾರ ಮಾಡಿದ್ದೇನೆ. ಬೆಳಗ್ಗೆ ಹೊರಟರೆ ಮರಳಿ ಬರುವಾಗ ರಾತ್ರಿ ಆದದ್ದು ಇದೆ. ಊಟ, ತಿಂಡಿ ಎಲ್ಲ ಜತೆಗಿದ್ದವರೂ ಸೇರಿ ಮಾಡುತ್ತಿದ್ದೆವು. ಅದಕ್ಕೆ ನಿರ್ದಿಷ್ಟ ಸ್ಥಳ ಅಂತ ಏನೂ ಇರಲಿಲ್ಲ. ರಸ್ತೆ, ವಾಹನ ಇರಲಿಲ್ಲ. ದೂರ ದೂರ ಮನೆ ಇತ್ತು. ಅಲ್ಲಿಗೆ ತಲುಪುವುದೇ ಸಾಹಸವಾಗಿತ್ತು. ಮನೆ ಮಂದಿಗೆ ಮನ ಮುಟ್ಟುವ ರೀತಿಯಲ್ಲಿ ಹೇಳುತ್ತಿದ್ದೆವು. ಏಕೆಂದರೆ ಮತ್ತೆ ಆ
ಮನೆಗೆ ಇನ್ನೊಮ್ಮೆ ಬರುವುದು ಕಷ್ಟ ಆಗಿದ್ದ ಕಾಲ ಎನ್ನುತ್ತಾರೆ ಅವರು.
Related Articles
Advertisement