Advertisement

Election:ಬ್ರಿಟನ್‌ ಪಿಎಂ ಸುನಕ್‌ ಟೆಂಪಲ್‌ ರನ್‌!

01:25 AM Jul 01, 2024 | Team Udayavani |

ಲಂಡನ್‌: ಬ್ರಿಟನ್‌ನಲ್ಲಿ ಜು.4ರಂದು ಸಂಸತ್‌ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ರಿಷಿ ಸುನಕ್‌, ಪತ್ನಿ ಅಕ್ಷತಾ ಮೂರ್ತಿ ದೇಗುಲಗಳಿಗೆ ಭೇಟಿ ನೀಡಲು ಆಂಭಿಸಿದ್ದಾರೆ. ಲಂಡನ್‌ನಲ್ಲಿರುವ ಸ್ವಾಮಿ ನಾರಾಯಣ ಮಂದಿರಕ್ಕೆ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಅನಂತರ ಮಾತಾಡಿದ ರಿಷಿ ಸುನಕ್‌ “ನಾನೊಬ್ಬ ಹಿಂದೂ, ನಾನು ನಿಮ್ಮೆಲ್ಲರನ್ನೂ ಇಷ್ಟ ಪಡುತ್ತೇನೆ. ನನಗೆ ಬೇಕಿರುವ ಪ್ರೇರಣೆಯನ್ನು ನಾನು ನನ್ನ ನಂಬಿಕೆಯಿಂದ ಪಡೆದುಕೊಳ್ಳುತ್ತೇನೆ. ಭಗವದ್ಗೀತೆಯ ಮೇಲೆ ಕೈಯಿಟ್ಟು ಪ್ರಮಾಣವಚನ ಸ್ವೀಕರಿಸಿದ್ದು ನನಗೆ ಹೆಮ್ಮೆ ತಂದಿದೆ.

Advertisement

ಹಿಂದೂ ನಂಬಿಕೆ ಯಿಂದ ನನಗೆ ಬೇಕಿರುವ ಪ್ರೇರಣೆ ಯನ್ನು ಪಡೆದುಕೊಳ್ಳುತ್ತೇನೆ ಎಂದರು.
ಇದೇ ವೇಳೆ, ಬ್ರಿಟನ್‌ ಪ್ರಧಾನಿ ದೇಗುಲ ಭೇಟಿಯ ಬೆನ್ನಲ್ಲೆ ಯು.ಕೆ. ಸಂಸದ ನೈಜರ್‌ ಫ‌ರಾಜ್‌ ಅವರ ಬೆಂಬಲಿಗನೊಬ್ಬ ರಿಷಿ ಸುನಕ್‌ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದಾನೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ವಿಪಕ್ಷಗಳ ಟೀಕೆಯಿಂದ ನೋವಾಗಿದೆ ಮತ್ತು ಕೋಪ ಬಂದಿದೆ ಎಂದು ಹೇಳಿ ದ್ದಾರೆ. ಅವರು ಮಾಡಿದ ಜನಾಂಗೀಯ ನಿಂದನೆಗಳನ್ನು ನಾನು ನೇರವಾಗಿ ಹೇಳ ಲಾಗುವುದಿಲ್ಲ. ಇದು ಅವರ ಸಂಸ್ಕೃತಿ ಯನ್ನು ತೋರಿಸುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next