Advertisement

ಚಿಕ್ಕಂಗಳ ದಲಿತ ಸಮಾಜದಿಂದ ಬಹಿಷ್ಕಾರದ ಬೆದರಿಕೆ

06:04 PM Dec 08, 2020 | Suhan S |

ಕಡೂರು: ತಾಲೂಕಿನ ಚಿಕ್ಕಂಗಳ ಗ್ರಾಪಂನಲ್ಲಿನ ದಲಿತರಿಗೆ ಅನ್ಯಾಯವಾಗುತ್ತಿದೆ ಎಂಬ ಬೇಡಿಕೆಮುಂದಿಟ್ಟುಕೊಂಡು ದಲಿತ ಸಮಾಜವು ನ್ಯಾಯ ಕೊಡಿಸದಿದ್ದರೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿವೆ.

Advertisement

ಚಿಕ್ಕಂಗಳ ಗ್ರಾಮದ ದಲಿತ ವರ್ಗದಮತಗಳನ್ನು 2 ನೇ ಬ್ಲಾಕ್‌ನಿಂದ 1 ನೇ ಬ್ಲಾಕ್‌ಗೆ ಸೇರ್ಪಡೆ ಮಾಡಲು ಒತ್ತಾಯಿಸಿ ತಾಲೂಕಿನ ಚಿಕ್ಕಂಗಳ ಗ್ರಾಮದ ಅಂಬೇಡ್ಕರ್‌ ಕಾಲೋನಿಯ 250ಕ್ಕೂ ಹೆಚ್ಚು ದಲಿತ ಮತದಾರರು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಚಿಕ್ಕಂಗಳ ಗ್ರಾಪಂ ಚುನಾವಣೆಯ ಭಾಗದ ಸಂಖ್ಯೆ 34 ಅನ್ನು 1ನೇ ಬ್ಲಾಕ್‌ ಎಂದು ಸರ್ಕಾರಘೋಷಿಸಿದ್ದು ಇದರಲ್ಲಿ 694 ಮತದಾರರಿದ್ದಾರೆ. ಭಾಗದ ಸಂಖ್ಯೆ 35 ಅನ್ನು 2 ನೇ ಬ್ಲಾಕ್‌ ಎಂದು ಘೋಷಿಸಿದ್ದು ಇದರಲ್ಲಿ 1500 ಮತದಾರರಿದ್ದಾರೆ. 1ನೇ ಬ್ಲಾಕ್‌ನಲ್ಲಿ 70 ಮಾದಿಗ, ಆದಿ ಕರ್ನಾಟಕ ಸಮಾಜದ ಮತಗಳಿದ್ದು 2ನೇ ಬ್ಲಾಕ್‌ನಲ್ಲಿ 180 ಮತಗಳಿವೆ. ಈ 2ನೇ ಬ್ಲಾಕ್‌ನ 180 ಮತಗಳನ್ನು 1ನೇ ಬ್ಲಾಕ್‌ಗೆ ಸೇರಿಸಬೇಕೆಂಬುದೇ ಇವರ ಪ್ರಮುಖ ಬೇಡಿಕೆಯಾಗಿದೆ.

2015ರ ಗ್ರಾಪಂ ಚುನಾವಣೆಯಲ್ಲಿಯೂ ಕೂಡ ಈ ಸಮಾಜದ ಮುಖಂಡರು ಮತ್ತು ಮತದಾರರು ಸರ್ಕಾರಕ್ಕೆ ಮನವಿ ಮಾಡಿದ್ದರೂ ಸೇರ್ಪಡೆಯಾಗಲಿಲ್ಲ. ಇದೀಗಮತದಾರರ ಪಟ್ಟಿ ಪರಿಷ್ಕರಣೆ ಮಾಡಲುಚುನಾವಣಾ ಆಯೋಗವೇ ಸೂಚಿಸಿದ್ದರೂ ಅಧಿಕಾರಿಗಳ ಬೇಜಬ್ದಾರಿಯಿಂದ ದಲಿತ ವರ್ಗದ ಮತಗಳು ಮತ್ತೂಮ್ಮೆ ಹರಿದು ಹಂಚಿಹೋಗಿವೆ. ದಲಿತ ಸಂಘರ್ಷ ಸಮಿತಿಯ ಮುಖಂಡರು ಮತ್ತು ಗ್ರಾಮದ ದಲಿತ ವರ್ಗದ ಮತದಾರರು ಪಂಚಾಯತ್‌ ಕಟ್ಟೆ ಮುಂದೆ ಪ್ರತಿಭಟನೆ ನಡೆಸಿದ್ದು ಆಗ ಸ್ಥಳಕ್ಕೆ ತಾಪಂ ಇಒ, ಸಮಾಜ ಕಲ್ಯಾಣಾಧಿ ಕಾರಿ,ತಹಶೀಲ್ದಾರ್‌, ಕಡೂರು ಪಿಎಸ್‌ಐ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲುನಡೆಸಿದ ಪ್ರಯತ್ನ ವಿಫಲವಾಗಿತ್ತು. ಪರಿಣಾಮಭಾನುವಾರ ಗ್ರಾಮದ ದಲಿತ ವರ್ಗದ ಜನ ಚುನಾವಣೆ ಬಹಿಷ್ಕರಿಸುವ ಪ್ಲೆಕ್ಸ್‌ ಅನ್ನು ಗ್ರಾಮದ ಮುಂದೆ ಪ್ರದರ್ಶಿಸಿದ್ದು ಸರತಿಯಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಮಾದಿಗ ಸಮದಾಯದ ಜನರ ಬೇಡಿಕೆ ಈಡೇರಿಸಲು ಕಷ್ಟ. ಐದತ್ತು ಮತದಾರರಿದ್ದರೆ ಬದಲಾಯಿಸಿ ಕೊಡಬಹುದು. ಆದರೆ ಅಷ್ಟೂ ಮತದಾರರನ್ನು ಸೇರಿಸಲು ಸಾಧ್ಯವಿಲ್ಲ. ಸಾವಿರಕ್ಕಿಂತ ಹೆಚ್ಚು ಮತದಾರರಿದ್ದರೆ ಇನ್ನೊಂದು ಮತಗಟ್ಟೆಯನ್ನು ಸ್ಥಾಪಿಸಲು ಸಾಧ್ಯವಿದೆ. ಸಮುದಾಯದ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು. – ಜೆ.ಉಮೇಶ್‌, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next