Advertisement

ಅಧಿಕಾರಿಗಳ ಬೆದರಿಕೆಗೂ ಬಗ್ಗದೇ ಚುನಾವಣೆ ಬಹಿಷ್ಕಾರ

02:40 PM Dec 24, 2020 | Suhan S |

ಮಾಲೂರು: 15-20 ವರ್ಷಗಳಿಂದಲೂ ಹೋರಾಟ ಮತ್ತು ಚುನಾವಣೆ ಬಹಿಷ್ಕಾರನಿರ್ಧಾರ ಪ್ರಕಟಿಸುತ್ತಿದ್ದ ಕಂಬೀಪುರ (ಬೆಳ್ಳಾಪುರ) ಗ್ರಾಮ ಸ್ಥರು, ಈ ಬಾರಿ ಅಧಿಕಾರಿಗಳ ಮನವೊಲಿಕೆಗೂ ಜಗ್ಗದೇ ಮೊದಲ ಹಂತದಲ್ಲಿ ನಡೆದ ‌ ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಈ ಮೂಲಕ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಪೆಟ್ಟು ನೀಡಿದ್ದಾರೆ.

Advertisement

ಮಾಲೂರು ತಾಲೂಕಿನ ಅಬ್ಬೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕಂಬೀಪುರ ‌ ಗ್ರಾಮದಲ್ಲಿ ಸರಿ ಸುಮಾರು 150 ಮನೆಗಳಿದ್ದು ಶೇ.95ರಷ್ಟು ಮಂದಿ ಪರಿಶಿಷ್ಟ ಜಾತಿಯವರೇ ವಾಸವಾಗಿದ್ದಾರೆ. 395 ಮತದಾರರ ಪೈಕಿ ದಲಿತ ವರ್ಗವೇ ಸಿಂಹಪಾಲು.

ಗ್ರಾಮಕ್ಕೆ ಹಲವುಕಡೆಗಳಿಂದ ರಸ್ತೆ ಮಾರ್ಗವಿದ್ದು ಮಡಿವಾಳ ಮಾರ್ಗವಾಗಿ ತೊರ್ನಹಳ್ಳಿಯ ರಸ್ತೆ ಯಲ್ಲಿ ಹಾದು ಕಂಬೀಪುರ ಗ್ರಾಮವನ್ನು ಸೇರಲು 12 ಕಿ.ಮೀ. ಆಗುತ್ತದೆ. ಅಬ್ಬೇನಹಳ್ಳಿ ಮಾರ್ಗದ ರಸ್ತೆ ಯಲ್ಲಿ ತಂಬಿಹಳ್ಳಿ ಮೂಲಕ ಗ್ರಾಮಕ್ಕೆ ಬರುವುದಾದರೆ 6ರಿಂದ 8 ಕಿ.ಮೀ. ಆಗಲಿದೆ. ಇನ್ನು ಗ್ರಾಮದಿಂದ ಮಾಲೂರು ಪಟ್ಟಣಕ್ಕೆ ನೇರ ಸಂಪರ್ಕ ಕಲ್ಪಿಸುವ ಅಬ್ಬೇನಹಳ್ಳಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸಿದ್ದಲ್ಲಿ ಕೇವಲ 3.5 ಕಿ.ಮೀ. ಆಗುತ್ತದೆ. ಈಕುರಿತು ಗ್ರಾಮಸ್ಥರು,ಕಳೆದ15-20 ವರ್ಷಗಳಿಂದನೇರ ರಸ್ತೆ ನಿರ್ಮಾಣಕ್ಕಾಗಿ ಹೋರಾಟಗಳ ಜತೆಗೆ ವಿಧಾನ ಸಭೆ, ಲೋಕಸಭೆ, ಜಿಪಂ, ತಾಪಂ, ಗ್ರಾಪಂ ಚುನಾ ವಣೆ ಬಹಿಷ Rರಿಸುವ ತೀರ್ಮಾನ ಕೈಗೊಳ್ಳುತ್ತಿದ್ದರು.ಈವೇಳೆ ಅಧಿಕಾರಿಗಳು ಮನವೊಲಿಸಿ ಚುನಾವಣೆ ನಡೆಸುತ್ತಿದ್ದರು. ಗ್ರಾಪಂ ಚುನಾವಣೆ ಬಹಿಷ್ಕಾರದ ಕುರಿತು ಕಳೆದ ‌ ವಾರದಲ್ಲಿ ಶಾಸಕ ನಂಜೇಗೌಡರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ನಡೆಸಿ ಖಾಸಗಿ ಭೂ ಮಾಲೀಕರೊಂದಿಗೆ ಚರ್ಚಿಸಿದ್ದರು.

ಮತದಾನಬಹಿಷ್ಕರಿಸುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಆಗಮಿಸಿದ ತಹಶೀಲ್ದಾರ್‌ ಎಂ.ಮಂಜುನಾಥ್‌, ತಾಪಂ ಇಒ ವಿ.ಕೃಷ್ಣಪ್ಪ ಗ್ರಾಮಸ್ಥರ ಮನ ವೊಲಿಸಲು ಮುಂದಾದರು. ಎಲ್ಲಾ ಪ್ರಯತ್ನ ವಿಫಲವಾಗುತ್ತಿದ್ದಂತೆ ತಹಶೀಲ್ದಾರ್‌ ಮತದಾನಕ್ಕೆ ಅಡ್ಡಿ ಮಾಡುವವರ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿದರು. ಹೆದರದ ಗ್ರಾಮಸ್ಥರು, ಬಂಧಿಸುವುದಾದರೆ ಎಲ್ಲರೂ ಬಂಧಿಸುವಂತೆ ಪಟ್ಟು ಹಿಡಿದರು. ಮಧ್ಯಾಹ್ನ 1ರ ಸುಮಾರಿಗೆ ಗ್ರಾಮಕ್ಕೆ ಬಂದ ಉಪ ವಿಭಾಗಾಧಿಕಾರಿ ಸೋಮಶೇಖರ್‌, ಜಿಪಂಸಿ ಇಒ ನಾಗರಾಜು ಅವ ರಮನವೊಲಿಕೆಯೂ ಫ‌ಲ ನೀಡಲಿಲ್ಲ. ಕಂಬೀಪುರ ಗ್ರಾಮಕ್ಕೆ ನೇರ‌ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗವಿಲ್ಲ. ಸಾರಿಗೆ ಸಂಪರ್ಕವಿಲ್ಲ. ಬೈಕ್‌ ಮೂಲಕ ‌ ಮಾಲೂರು ಪಟ್ಟಣಕ್ಕೆ ಬಂದು ತಮ್ಮ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳಬೇಕಿದೆ. ಗರ್ಭಿಣಿಯರು, ವೃದ್ಧರು, ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆಆಗಿದೆ. ಈ ಹಿಂದೆ ಕೆಲವು ಪುಂಡರು ಕಾಲು ದಾರಿಯ ನೀಲಗಿರಿ ತೋಪುಗಳಲ್ಲಿ ಬರುವ ಹೆಣ್ಣು ಮಕ್ಕಳನ್ನು ಚುಡಾಯಿಸಿದ್ದರು.ಈಹಿಂದೆ ಮಹಿಳೆಯರು ಕಾಲೇಜು ಅಧಿಕಾರಿಗಳ ‌ ಮುಂದೆ ಅಳಲು ತೋಡಿಕೊಂಡಿದ್ದರು.

ಬದಲಾದ ಮೀಸಲಾತಿ :

Advertisement

ಪ್ರಸ್ತುತ ಗ್ರಾಪಂ ಚುನಾವಣೆಯಲ್ಲಿ ಸರ್ಕಾರ ಗ್ರಾಪಂ ಸದಸ್ಯ ಸ್ಥಾನದ ಮೀಸಲಾತಿಯನ್ನುಹಿಂದುಳಿದ ವರ್ಗ(ಅ) ಮಹಿಳೆಗೆ ಅವಕಾಶಕಲ್ಪಿಸಿತ್ತು. ಗ್ರಾಮದಲ್ಲಿ ಶೇ.95 ಪರಿಶಿಷ್ಟ ಜಾತಿಯವರೇ ವಾಸವಾಗಿದ್ದು ಬಿಸಿಎಂ(ಎ)ವರ್ಗದ ಎರಡು ಮನೆಗಳ ಸರಿಸುಮಾರು20ಮತದಾರರು ಮಾತ್ರ ಇದ್ದಾರೆ. ಹೀಗಾಗಿನೆರೆಯ ತಂಬಿಹಳ್ಳಿ ಮತ್ತು ಅಬ್ಬೇನಹಳ್ಳಿಯಿಂದತಲಾ ಓರ್ವ ಮಹಿಳಾ ಅಭ್ಯರ್ಥಿಗಳನ್ನುಗ್ರಾಮದಲ್ಲಿ ಕಣಕ್ಕೆ ಇಳಿಸಿರುವುದೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿ ಚುನಾವಣೆ ಬಹಿಷ್ಕಾರಕ್ಕೆ ಹೆಚ್ಚಿನ ಪುಷ್ಟಿ ಸಿಕ್ಕಿದೆ.

ಕಂಬೀಪುರದ ಜನರು ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸಿರುವುದರಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪತ್ರ ಬರೆದು ರಸ್ತೆ ನಿರ್ಮಾಣಕ್ಕೆಕ್ರಮಕೈಗೊಳ್ಳಲಾಗುತ್ತದೆ. ಅಲ್ಲದೇ, ಚುನಾವಣಾನಿಯಮಗಳನ್ನು ಆಯೋಗದ ನಿರ್ದೇಶನದಂತೆ ಕೈಗೊಳ್ಳಲಾಗುವುದು. -ಎಂ.ಮಂಜುನಾಥ್‌, ತಹಶೀಲ್ದಾರ್‌

 

-ಎಂ.ರವಿಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next