Advertisement

ವಾರ್ಡು ವ್ಯಾಪ್ತಿ ಗೊಂದಲ: ಕಟ್ನೂರ ಗ್ರಾಮದಲ್ಲಿ ಮತದಾನ ಬಹಿಷ್ಕಾರ

11:48 AM Dec 27, 2020 | keerthan |

ಹುಬ್ಬಳ್ಳಿ: ವಾರ್ಡುಗಳ ವ್ಯಾಪ್ತಿ ಗೊಂದಲದಿಂದ ಮತದಾನ ಬಹಿಷ್ಕರಿಸಿದ ಘಟನೆ ತಾಲೂಕಿನ ಕಟ್ನೂರ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮದ ವಾರ್ಡು ಗಡಿ ಗೊಂದಲದಿಂದ ಅಭ್ಯರ್ಥಿಗಳು ಇನ್ನೊಂದು ವಾರ್ಡಿನಲ್ಲಿ ಪ್ರಚಾರ ನಡೆಸಿದ್ದರು. ಆದರೆ ಮತದಾನದ ದಿನ ಆ ವಾರ್ಡಿನ ಮತಪಟ್ಟಿ ಬೇರೆ ಮತಗಟ್ಟೆಯಲ್ಲಿದೆ ಎಂದು ತಿಳಿದಾಗ ಮತದಾನ ಬಹಿಷ್ಕರಿಸಿದ ಘಟನೆ ನಡೆದಿದೆ.

ವಿಷಯ ತಿಳಿದು ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಶಿ ಸ್ಥಳಕ್ಕೆ ಆಗಮಿಸಿದ್ದು, ಅಭ್ಯರ್ಥಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ:ಗ್ರಾ.ಪಂ.ಚುನಾವಣೆ: ಮತದಾನ ಮಾಡಲು ಬಂದ ಜಿ.ಪಂ. ಸದಸ್ಯನ ಮೇಲೆ ಹಲ್ಲೆ!

ಅಭ್ಯರ್ಥಿಗಳು ವಾರ್ಡು ಗುರುತಿಸುವಲ್ಲಿ ಗೊಂದಲ ಮಾಡಿಕೊಂಡಿದ್ದಾರೆ. ವಾರ್ಡು ವಿಂಗಡನೆ ಹಾಗೂ ಮತಪಟ್ಟಿ ಎಲ್ಲವೂ ನಿಯಮಬದ್ಧವಾಗಿದೆ. ಅಭ್ಯರ್ಥಿಗಳು ಹಾಗೂ ಸ್ಥಳೀಯರನ್ನು ಮನವೊಲಿಸಿ ಮತದಾನ ಮಾಡಿಸಲಾಗುವುದು ಎಂದು ತಹಶೀಲ್ದಾರ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next