ಚಿಕ್ಕಮಗಳೂರು: ಕಳೆದ ಬಾರಿ ವಿಧಾನಸಭಾ ಚುನಾವಣೆಯ ವೇಳೆ ಅಧಿಕಾರಿಗಳು ನೀಡಿದ ಭರವಸೆಗಳು ಈಡೇರದ ಹಿನ್ನೆಲೆಯಲ್ಲಿ ಈ ಬಾರಿ ನಡೆಯುವ ಲೋಕ ಸಭಾ ಚುನಾವಣೆಯನ್ನು ಬಹಿಷ್ಕರಿಸಲು ಎನ್.ಆರ್.ಪುರ ತಾಲೂಕಿನ ಜಕ್ಕಣ್ಣಕ್ಕಿ ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಈ ಕುರಿತು ಸರಕಾರವನ್ನು ದೂರಿದ ಗ್ರಾಮಸ್ಥರು, ನಮಗೆ ಓಡಾಡಲು ಸರಿಯಾದ ರಸ್ತೆಯೂ ಇಲ್ಲ, ವಾಸ ಮಾಡ್ತಿರೋ ಮನೆಗೆ ಹಕ್ಕುಪತ್ರವೂ ಇಲ್ಲ ಎಂದು ಹೇಳಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಗ್ರಾಮಸ್ಥರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದ್ದರು ಆ ವೇಳೆ ಗ್ರಾಮಕ್ಕೆ ಬಂದಿದ್ದ ತಹಶೀಲ್ದಾರ್ ಅಗತ್ಯ ಮೂಲಭೂತ ಸೌಲಭ್ಯವನ್ನು ಕಲ್ಪಿಸುವ ಭರವಸೆ ನೀಡಿದ್ದರು ಆದರೆ ಇದುವರೆಗೂ ಯಾವುದೇ ಒಂದು ಭರವಸೆ ಈಡೇರದ ನಿಟ್ಟಿನಲ್ಲಿ ಈ ಬಾರಿ ನಡೆಯುವ ಲೋಕ ಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
2015ರಲ್ಲಿ ರಸ್ತೆಗೆ ಜಲ್ಲಿ ಹಾಕಿ ರಸ್ತೆ ಮಾಡದೆ ನಿರ್ಲಕ್ಷ್ಯ, ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಗ್ರಾಮಕ್ಕೆ ಯಾವುದೇ ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗಿಲ್ಲ ರಸ್ತೆ, ಚರಂಡಿ ವ್ಯವಸ್ಥೆ ಈ ಎಲ್ಲ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರಕಾರದ ವಿರುದ್ಧ ಗ್ರಾಮಸ್ಥರು ದೂರು ನೀಡಿದ್ದಾರೆ.
ಇದನ್ನೂ ಓದಿ: ತಂದೆಯ ಸಮ್ಮುಖದಲ್ಲೇ ಸಹೋದರಿಯ ಹತ್ಯೆಗೈದ ಸಹೋದರ.. ಇನ್ನೋರ್ವ ಸಹೋದರನಿಂದ ವಿಡಿಯೋ ಚಿತ್ರೀಕರಣ