Advertisement

ಮಾ.1ರಿಂದ ಚುನಾವಣೆ ಬಾಂಡ್‌ ಮಾರಾಟ ಶುರು

10:07 AM Feb 23, 2018 | Team Udayavani |

ಹೊಸದಿಲ್ಲಿ: ಚುನಾವಣಾ ಭ್ರಷ್ಟಾಚಾರ ತಡೆಯಲೆಂದು ಕೇಂದ್ರ ಸರಕಾರ ಕಳೆದ ವರ್ಷದ ಬಜೆಟ್‌ನಲ್ಲಿ ಪ್ರಕಟಿ ಸಿದ್ದ ಚುನಾವಣಾ ಬಾಂಡ್‌ಗಳು ಮಾ.1ರಿಂದ ಚಾಲ್ತಿಗೆ ಬರಲಿವೆ.  

Advertisement

ದೇಶದ ನಾಲ್ಕು ನಗರಗಳಾದ ದಿಲ್ಲಿ, ಮುಂಬಯಿ, ಕೋಲ್ಕತಾ, ಚೆನ್ನೈಯಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದ ಮುಖ್ಯ ಶಾಖೆಗಳಲ್ಲಿ ಮಾತ್ರ ಇವು ದೊರೆಯಲಿವೆ. ಈ ಬಾಂಡ್‌ಗಳನ್ನು ಯಾವುದೇ ಭಾರತೀಯ ಪ್ರಜೆ ಅಥವಾ ಭಾರತದಲ್ಲೇ ನೋಂದಣಿಗೊಂಡಿರುವ ಸಂಸ್ಥೆಗಳು ಮಾತ್ರ ಖರೀದಿಸಬಹುದು. ಮಾ.1ರಿಂದ  10ರವರೆಗೆ ಇವು ದೊರೆಯಲಿವೆ. 

ರಾಜಕೀಯ ಪಕ್ಷಗಳಿಗೆ ನಗದು ರೂಪದಲ್ಲಿ ದೇಣಿಗೆ ನೀಡುವುದರ ಬದಲು ಈ ಬಾಂಡ್‌ಗಳನ್ನು ಬಳಸಬೇಕು.  ಶೇ.1ರಷ್ಟು ಮತ ಪಡೆದಿರುವ ಭಾರತದ ರಾಜಕೀಯ ಪಕ್ಷಗಳು ಈ ಬಾಂಡ್‌ಗಳನ್ನು  ಸ್ವೀಕರಿಸಬಹುದು. ಬಾಂಡ್‌ ಸ್ವೀಕರಿಸಿದ 15 ದಿನಗಳೊಳಗೆ ಖಾತೆಗೆ ಜಮಾವಣೆ ಮಾಡಬೇಕು. ಅವಧಿ ಮುಗಿದ ನಂತರ ಬಾಂಡಿನ ನಗದೀಕರಣಕ್ಕೆ ಅವಕಾಶವಿರುವುದಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next