Advertisement
ಉಳಿದಂತೆ, ಕರ್ನಾಟಕದ 2 ಕ್ಷೇತ್ರಗಳು, ಮಧ್ಯಪ್ರದೇಶದ 1 ಕ್ಷೇತ್ರ ಕಾಂಗ್ರೆಸ್ ಪಾಲಾದರೆ, ಪಶ್ಚಿಮ ಬಂಗಾಳದ ಕಾಂತಿ ದಕ್ಷಿಣ್‌ನಲ್ಲಿ ತೃಣಮೂಲ ಕಾಂಗ್ರೆಸ್ ಗೆದ್ದಿದೆ, ಇನ್ನು ಜಾರ್ಖಂಡ್‌ನ ಲಿಟಿಪಾರಾದಲ್ಲಿ ಜೆಎಂಎಂ ಗೆಲವು ಸಾಧಿಸಿದೆ. ಒಟ್ಟಿನಲ್ಲಿ ಈ ಉಪಸಮರವೂ ಕಮಲ ಪಾಳಯಕ್ಕೆ ಸಿಹಿ ಹಂಚಿದೆ.
Related Articles
Advertisement
ಮತ್ತೆ ಶ್ರೀನಗರದ “ದಾಖಲೆ’; ಶೇ.2 ಮತದಾನಶ್ರೀನಗರ ಲೋಕಸಭಾ ಕ್ಷೇತ್ರದ 38 ಮತಗಟ್ಟೆಗಳಲ್ಲಿ ನಡೆದ ಮರುಚುನಾವ ಣೆಯಲ್ಲಿ ಕೇವಲ ಶೇ.2ರಷ್ಟು ಮತದಾನವಾಗಿದೆ. ಈ ಮೂಲಕ “ಅತ್ಯಂತ ಕಡಿಮೆ ಮತದಾನ’ದ ತನ್ನದೇ ದಾಖಲೆಯನ್ನು ಶ್ರೀನಗರ ಮತ್ತೂಮ್ಮೆ ಸರಿಗಟ್ಟಿದೆ. ಭಾನುವಾರದ ಮತದಾನದ ವೇಳೆ ಭಾರೀ ಹಿಂಸಾಚಾರ ಸಂಭವಿಸಿದ ಹಿನ್ನೆಲೆಯಲ್ಲಿ ಇಲ್ಲಿ ಮರುಮತದಾನಕ್ಕೆ ಚುನಾವಣಾ ಆಯೋಗ ಸೂಚಿಸಿತ್ತು. ಆಗ ಶೇ.6.5ರಷ್ಟು ಮತದಾನ ನಡೆದಿತ್ತು. ಗುರುವಾರ ಬೋಗಸ್ ಮತದಾನ, ಕಲ್ಲೆಸೆತ, ಕಾರ್ಯಕರ್ತರ ನಡುವೆ ಘರ್ಷಣೆ ಸೇರಿದಂತೆ ಸಣ್ಣಪುಟ್ಟ ಅಹಿತಕರ ಘಟನೆಗಳ ನಡುವೆಯೂ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಸ್ಟ್ರಾಂಗ್ ಆಗುತ್ತಿದೆಯೇ ಬಿಜೆಪಿ?
ಇಲ್ಲಿನ ಕಾಂತಿ ದಕ್ಷಿಣ್ ಕ್ಷೇತ್ರದ ಫಲಿತಾಂಶವು ಇಂತಹುದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಇಲ್ಲಿ ಟಿಎಂಸಿಗೆ ಯಾವಾಗಲೂ ಪ್ರಬಲ ಸ್ಪರ್ಧೆ ನೀಡುತ್ತಿದ್ದ ಎಡಪಕ್ಷ ಈ ಬಾರಿ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಕಾಂಗ್ರೆಸ್ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೆ, ದೀದಿಯ ಕೋಟೆಯನ್ನು ಪ್ರವೇಶಿಸಿರುವ ಬಿಜೆಪಿ ಬಂಗಾಳದಲ್ಲಿ ತನ್ನ ಖದರ್ ತೋರಿಸಲು ಯತ್ನಿಸುತ್ತಿರುವುದು ಸ್ಪಷ್ಟ. ಕಾಂತಿ ದಕ್ಷಿಣ್‌ನಲ್ಲಿ ಟಿಎಂಸಿ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಿದ್ದು ಬಿಜೆಪಿಯೇ ಹೊರತು ಎಡಪಕ್ಷವಲ್ಲ. ಟಿಎಂಸಿಯ ಭಟ್ಟಾಚಾರ್ಯ 95,369 ಮತಗಳನ್ನು ತಮ್ಮದಾಗಿಸಿಕೊಂಡರೆ, ಬಿಜೆಪಿ ಅಭ್ಯರ್ಥಿ 52,843 ಮತಗಳನ್ನು ಪಡೆದಿದ್ದಾರೆ. ಕಳೆದ ಬಾರಿ ಬಿಜೆಪಿಗೆ ಇಲ್ಲಿ ಕೇವಲ 15 ಸಾವಿರ ಮತಗಳಷ್ಟೇ ದೊರೆತಿತ್ತು. ಅಂದರೆ, ಬಿಜೆಪಿಯ ಮತ ಹಂಚಿಕೆ ಪ್ರಮಾಣ ಈಗ 3 ಪಟ್ಟು ಅಧಿಕವಾಗಿದ್ದು, ಇದು ಟಿಎಂಸಿಗೆ ಸವಾಲಾಗಿ ಪರಿಣಮಿಸಿದೆ. ಎಂಸಿಡಿ ಚುನಾವಣೆ ಮೇಲೆ ಕರಿನೆರಳು
ಎಂಸಿಡಿ ಚುನಾವಣೆ ಸಮೀಪಿಸುತ್ತಿರುವಂತೆಯೇ ರಜೌರಿ ಗಾರ್ಡನ್ ಉಪಚುನಾವಣೆಯಲ್ಲಿ ಆಪ್‌ಗೆ ಆಘಾತವಾಗಿದೆ. ಆಪ್ ಅಭ್ಯರ್ಥಿ ಹರ್ಜೀತ್ ಸಿಂಗ್ ಕೇವಲ ಶೇ.13.1ರಷ್ಟು ಅಂದರೆ ಒಟ್ಟು ಚಲಾವಣೆಯಾದ ಮತಗಳ ಪೈಕಿ 6ನೇ ಒಂದಕ್ಕಿಂತಲೂ ಕಡಿಮೆ ಮತ ಪಡೆಯುವ ಮೂಲಕ ಠೇವಣಿಯನ್ನೂ ಕಳೆದುಕೊಂಡಿದ್ದಾರೆ. ಪಂಜಾಬ್, ಗೋವಾ ವಿಧಾನಸಭೆ ಚುನಾವಣೆಗಳಲ್ಲಿನ ಸೋಲಿನ ಬಳಿಕ ಆಪ್‌ಗೆ ಸಿಕ್ಕಿರುವ ಮತ್ತೂಂದು ಕಹಿ ಸುದ್ದಿಯಿದು. ಸೋಲಿನ ಕುರಿತು ಮಾತನಾಡಿದ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, “ರಜೌರಿ ಗಾರ್ಡನ್‌ನ ಮಾಜಿ ಶಾಸಕ ಜರ್ನೈಲ್ ಸಿಂಗ್ ಅವರು ಪಂಜಾಬ್‌ನತ್ತ ಮುಖಮಾಡಿದ್ದರಿಂದ ಮತದಾರರು ಅಸಮಾಧಾನಗೊಂಡಿದ್ದರು. ಆದರೆ, ಇದು ಕೇವಲ ಉಪಚುನಾವಣೆ ಅಷ್ಟೆ. ಇದು ಎಂಸಿಡಿ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಮುಂದಿನ ಚುನಾವಣೆಗಳಲ್ಲಿ ನಾವು ಹೆಚ್ಚು ಶ್ರಮವಹಿಸುತ್ತೇವೆ,’ ಎಂದಿದ್ದಾರೆ. ರಜೌರಿ ಶಾಸಕರಾಗಿದ್ದ ಜರ್ನೈಲ್ ಸಿಂಗ್ ಅವರು ಇತ್ತೀಚೆಗೆ ಪಂಜಾಬ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಅಲ್ಲಿನ ಸಿಎಂ ಆಗಿದ್ದ ಪ್ರಕಾಶ್ ಸಿಂಗ್ ಬಾದಲ್ ವಿರುದ್ಧ ಕಣಕ್ಕಿಳಿದಿದ್ದರು. ಹೀಗಾಗಿ, ಅವರ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಬೇಕಾಯಿತು. ದೇಶದ ವಿವಿಧ ಭಾಗಗಳ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್‌ಡಿಎ ಸಾಧನೆ ಶ್ಲಾಘನೀಯ. ಅಭಿವೃದ್ಧಿಯ ರಾಜಕೀಯ ಮತ್ತು ಉತ್ತಮ ಆಡಳಿತದ ಮೇಲೆ ಜನರಿಟ್ಟಿರುವ ದೃಢವಾದ ನಂಬಿಕೆಗೆ ಧನ್ಯವಾದ ಸಲ್ಲಿಸುತ್ತೇನೆ.
ನರೇಂದ್ರ ಮೋದಿ, ಪ್ರಧಾನಿ ಹಲವು ರಾಜ್ಯಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದು ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳಲ್ಲಿ ಜನರಿಗೆ ನಂಬಿಕೆಯಿದೆ ಎಂಬುದನ್ನು ತೋರಿಸಿದೆ.
ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕ್ಷೇತ್ರ ಗೆದ್ದ ಪಕ್ಷ ಅಂತರ
ರಜೌರಿಗಾರ್ಡನ್ ಬಿಜೆಪಿ 14,000
ಭೋರಂಜ್ ಬಿಜೆಪಿ 8,290
ಧೋಲ್‌ಪುರ ಬಿಜೆಪಿ 38,678
ಬಂದಾವ್‌ಗಡ ಬಿಜೆಪಿ 25000
ಧೇಮಾಜಿ ಬಿಜೆಪಿ 9,285
ಅಟೇರ್ ಕಾಂಗ್ರೆಸ್ 858
ಕಾಂತಿ ದಕ್ಷಿಣ್ ಟಿಎಂಸಿ 42,526
ಲಿಟಿಪಾರಾ ಜೆಎಂಎಂ 12,900