Advertisement

Awareness: ಯಕ್ಷಗಾನ ಕಲೆಯ ಮೂಲಕ ಐಎಎಸ್,‌ ಐಪಿಎಸ್,‌ ಕೆಎಎಸ್ ಅಧಿಕಾರಿಗಳಿಂದ ಮತ ಜಾಗೃತಿ

12:47 PM Apr 08, 2024 | Team Udayavani |

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮತಜಾಗೃತಿಗಾಗಿ‌ ಸ್ವೀಪ್ ಸಮಿತಿ ವಿವಿಧ ಕಾರ್ಯಕ್ರಮಗಳನ್ನು ‌ಹಮ್ಮಿಕೊಂಡಿದ್ದು, ರಾಜ್ಯದಲ್ಲೆ ವಿಶೇಷ ಎಂಬಂತೆ ಜಿಲ್ಲೆಯ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ಯಕ್ಷಗಾನ ವೇಷಧರಿಸಿ‌ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಿ ಗಮನ ಸೆಳೆದಿದ್ದಾರೆ.

Advertisement

ಕರಾವಳಿ ಪ್ರಸಿದ್ದ ಜಾನಪದ ಕಲೆ ಯಕ್ಷಗಾನ ಎಲ್ಲರಿಗೂ ಅಚ್ಚುಮೆಚ್ಚು. ಈ ಕಲೆಯ ಮೂಲಕ ಈಗಾಗಲೆ ಮತದಾನದ ಜಾಗೃತಿ ಬಗ್ಗೆ ಹಲವು ಕಾರ್ಯಕ್ರಮ ಏರ್ಪಡಿಸಲಾಗಿದೆ.‌ ಈ‌ ಭಾರಿ ಸ್ವತಃ ಅಧಿಕಾರಿಗಳೇ ಈ ರೀತಿ ಯಕ್ಷಗಾನ ಕಲೆಯ ವೇಷ ಧರಿಸಿ ಮತದಾನ ಜಾಗೃತಿ ಮೂಡಿಸಿರುವುದು ಇದೆ ಮೊದಲು.

ಉಡುಪಿ ಜಿ. ಪಂ. ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ‌ಮಮತಾ ದೇವಿ, ಕುಂದಾಪುರ ಉಪ ವಿಭಾಗ ಸಹಾಯಕ ಆಯುಕ್ತರಾದ ರಶ್ಮಿ, ಕರಾವಳಿ‌ ಕಾವಲು‌ ಪಡೆ ಪೊಲಿಸ್ ‌ಅಧೀಕ್ಷಕ ಮಿಥುನ್‌ ಅವರು ಬಡಗುತಿಟ್ಟು‌ ಯಕ್ಷಗಾನ ‌ಶೈಲಿ ವೇಷಭೂಷಣ ಧರಿಸಿ ಜಿಲ್ಲೆ ಯ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಶೇ.100 ಮತದಾನಕ್ಕೆ‌ ಮತದಾನದ ಮಹತ್ವವನ್ನು ಸಾರಿ ಎಲ್ಲರೂ‌ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡು ಮತದಾನ ಮಾಡುವಂತೆ ಕರೆ ನೀಡಿದ್ದಾರೆ‌‌.

ಇದನ್ನೂ ಓದಿ: Shirva: ಕುತ್ಯಾರು ಕೇಂಜ ಪರಿಸರದಲ್ಲಿ ಚಿರತೆ ಹಾವಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next